ಸಾಮಾಜಿಕ ಜಾಗೃತಿ ಚಳವಳಿ ಸಂಘಟಿಸಿದ ಕ್ರಾಂತಿಯೋಗಿ ಬಸವಣ್ಣ: ವಿ.ಎಸ್.ಧನಂಜಯ

| Published : May 10 2024, 11:46 PM IST

ಸಾಮಾಜಿಕ ಜಾಗೃತಿ ಚಳವಳಿ ಸಂಘಟಿಸಿದ ಕ್ರಾಂತಿಯೋಗಿ ಬಸವಣ್ಣ: ವಿ.ಎಸ್.ಧನಂಜಯ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಾಂತಿಯೋಗಿ ಬಸವಣ್ಣ ವಚನಗಳ ಮೂಲಕ ವೇದದ ಸಾರವನ್ನು ಜನರಿಗೆ ಉಣಬಡಿಸಿದ ಬಸವಣ್ಣನವರು ವೈದಿಕ ಧರ್ಮದಲ್ಲಿದ್ದ ಸಾಮಾಜಿಕ ಅನಿಷ್ಠಗಳ ವಿರುದ್ಧ ಧ್ವನಿಯೆತ್ತಿ ಧರ್ಮ ಸುಧಾರಕರಾದರು. ಸಾಮಾಜಿಕ ಸಮಾನತೆ ತತ್ವಗಳನ್ನು ಕೇವಲ ಬರವಣಿಗೆಗೆ ಸೀಮಿತಗೊಳಿಸದೆ ಅದನ್ನು ಜಾರಿಗೆ ತರಲು ಸಾಮಾಜಿಕ ಹೋರಾಟ ಸಂಘಟಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜಾತಿ ರಹಿತ ಸಮಾಜ ನಿರ್ಮಾಣಕ್ಕಾಗಿ 12ನೇ ಶತಮಾನದಲ್ಲಿಯೇ ಸಾಮಾಜಿಕ ಜಾಗೃತಿ ಚಳವಳಿ ಸಂಘಟಿಸಿದ ಕ್ರಾಂತಿಯೋಗಿ ಬಸವಣ್ಣ ಎಂದು ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಎಸ್.ಧನಂಜಯ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ 833ನೇ ಜಯಂತ್ಯುತ್ಸವ ಹಾಗೂ ಮಹಾಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯಲ್ಲಿ ಭಾವಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು.

ವಚನಗಳ ಮೂಲಕ ವೇದದ ಸಾರವನ್ನು ಜನರಿಗೆ ಉಣಬಡಿಸಿದ ಬಸವಣ್ಣನವರು ವೈದಿಕ ಧರ್ಮದಲ್ಲಿದ್ದ ಸಾಮಾಜಿಕ ಅನಿಷ್ಠಗಳ ವಿರುದ್ಧ ಧ್ವನಿಯೆತ್ತಿ ಧರ್ಮ ಸುಧಾರಕರಾದರು. ಸಾಮಾಜಿಕ ಸಮಾನತೆ ತತ್ವಗಳನ್ನು ಕೇವಲ ಬರವಣಿಗೆಗೆ ಸೀಮಿತಗೊಳಿಸದೆ ಅದನ್ನು ಜಾರಿಗೆ ತರಲು ಸಾಮಾಜಿಕ ಹೋರಾಟ ಸಂಘಟಿಸಿದರು ಎಂದರು.

ತಾಲೂಕು ಆಡಳಿತ ಆಯೋಜಿಸುವ ಯಾವುದೇ ಸರ್ಕಾರಿ ಜಯಂತಿಗಳಿಗೆ ವಿವಿಧ ಇಲಾಖೆಗಳ ಮುಖ್ಯಸ್ಥರಾಗಲೀ ಅಥವಾ ಅವರ ಇಲಾಖೆಗಳ ಪ್ರತಿನಿಧಿಗಳು ಗೈರು ಹಾಜರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ಜವಾಬ್ದಾರಿಯಾದರೂ ಏನು?, ಸರ್ಕಾರದ ಆದೇಶಗಳಿಗೆ ಅಧಿಕಾರಿಗಳು ಗೌರವ ನೀಡುತ್ತಿಲ್ಲ ಎನ್ನುವುದು ಬಹಿರಂಗವಾಗುತ್ತಿದೆ. ಅಧಿಕಾರಿಗಳ ಗೈರು ಹಾಜರಿಯ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಜಯಂತಿಗಳು ಕಾಟಾಚಾರಕ್ಕೆ ನಡೆಯುತ್ತಿವೆ. ಇವುಗಳ ಸ್ವರೂಪವನ್ನು ಸರ್ಕಾರ ಬದಲಿಸಬೇಕು. ಮಹನೀಯರ ಜಯಂತಿ ಹೆಸರಿನಲ್ಲಿರುವ ಸರ್ಕಾರಿ ರಜೆಗಳನ್ನು ರದ್ದುಪಡಿಸಬೇಕು. ಶಾಲಾ ಕಾಲೇಜುಗಳಲ್ಲಿ ಮಹನೀಯರನ್ನು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿ ದಾರ್ಶನಿಕರ ಬದುಕನ್ನು ನಮ್ಮ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕೆಂದರು.

ಉಪ ತಹಸೀಲ್ದಾರ್ ಬಿ.ಆರ್.ಲೋಕೇಶ್ ಜಗಜ್ಯೋತಿ ಬಸವಣ್ಣ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರನ್ನು ಕುರಿತು ಮಾತನಾಡಿದರು. ತಾಲೂಕು ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷರಾದ ತೋಂಟಪ್ಪ ಶೆಟ್ಟಿ, ಕಾರ್ಯದರ್ಶಿ ಈರಪ್ಪ, ವೀರಶೈವ ಸಮಾಜದ ಮುಖಂಡರಾದ ಬ್ಯಾಂಕ್ ಪರಮೇಶ್, ಮಾದೇಶ್, ನಾಗೇಂದ್ರ, ಶಿವಕುಮಾರ್, ಶಿವಪ್ಪ, ತಾಲೂಕು ಕಸಾಪ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಆಸರೆ ಎಚ್.ಬಿ.ಮಂಜುನಾಥ್, ಆರೋಗ್ಯ ಇಲಾಖೆಯ ಶೀಳನೆರೆ ಸತೀಶ್, ಶಿಕ್ಷಣ ಸಂಯೋಜಕ ಜ್ಞಾನೇಶ್, ಬಿ.ಸಿ.ಎಂ.ಅಧಿಕಾರಿ ವೆಂಕಟೇಶ್, ಪಿಡಿಒ ಉಮಾಶಂಕರ್ ಸೇರಿದಂತೆ ವಿವಿಧ ಇಲಾಖೆಯ ಪ್ರತಿನಿಧಿಗಳು ಇದ್ದರು.