ಸ್ವರ್ಣವಲ್ಲೀ ಮಠದಲ್ಲಿ 11, 12ರಂದು ಕೃಷಿ ಜಯಂತಿ

| Published : May 05 2025, 12:47 AM IST

ಸಾರಾಂಶ

ಲಕ್ಷ್ಮಿನರಸಿಂಹ ರಥೋತ್ಸವ ಸಂದರ್ಭದಲ್ಲಿ ಮೇ ೧೦, ೧೧ರಂದು ಕೃಷಿ ಜಯಂತಿ ಹಮ್ಮಿಕೊಳ್ಳಲಾಗಿದೆ

ಶಿರಸಿ: ಲಕ್ಷ್ಮಿನರಸಿಂಹ ರಥೋತ್ಸವ ಸಂದರ್ಭದಲ್ಲಿ ಮೇ ೧೦, ೧೧ರಂದು ಕೃಷಿ ಜಯಂತಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ತಿಳಿಸಿದರು.

ಅವರು ಶನಿವಾರ ನಗರದ ಯೋಗಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಆಶ್ರಯದಲ್ಲಿ ಟಿಎಸ್‌ಎಸ್, ಟಿಎಮ್‌ಎಸ್ ಶಿರಸಿ ಹಾಗೂ ಗ್ರಾಮಾಭ್ಯುದಯ ಜಾಗೃತ ವೇದಿಕೆ ಸೋಂದಾ ಇದರ ಸಹಯೋಗದಲ್ಲಿ ಮೇ ೧೦ ಹಾಗೂ ೧೧ ರಂದು ಕಾಲ ಕೃಷಿ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಇದಕ್ಕೂ ಪೂರ್ವದಲ್ಲಿ ಮೇ ೬ದಂದು ಮಾರಕ ಎಲೆ ಚುಕ್ಕಿ ರೋಗದ ಕುರಿತು ವಿಶೇಷ ಚಿಂತನ ಸಂವಾದ ಕಾರ್ಯಕ್ರಮ ಕೃಷಿ ಜಯಂತಿ ಜಾಗೃತಿ ಕಾರ್ಯಕ್ರಮವಾಗಿ ನಗರದ ಟಿಎಸ್‌ಎಸ್ ಸಭಾಭವನದಲ್ಲಿ ನಡೆಯಲಿದೆ. ಜಿಲ್ಲೆಯ ಘಟ್ಟದ ಮೇಲಿನ ಸೇವಾ ಸಹಕಾರಿ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ರೈತರ ಸಹಭಾಗಿತ್ವದಲ್ಲಿ ನಡೆಯುವ ಈ ವಿಶೇಷ ಚಿಂತನಾ ಸಭೆಯಲ್ಲಿ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಅಭ್ಯಾಗತರಾಗಿ ಸಚಿವ ಎಚ್.ಕೆ.ಪಾಟೀಲ್, ಶಾಸಕ ಭೀಮಣ್ಣ ನಾಯ್ಕ ಪಾಲ್ಗೊಳ್ಳಲಿದ್ದಾರೆ. ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗೂ ಟಿಎಂಎಸ್ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟಿಸರ ಉಪಸ್ಥಿತರಿರಲಿದ್ದಾರೆ ಎಂದರು.

ಕಾರ್ಯದರ್ಶಿ ಸುರೇಶ ಹೆಗಡೆ ಹಕ್ಕಿಮನೆ ಮಾತನಾಡಿದರು. ಉದ್ಘಾಟನಾ ಸಮಾರಂಭದಲ್ಲಿ ಸ್ವರ್ಣವಲ್ಲೀ ಮಹಾಸಂಸ್ಥಾನಾಧೀಶ್ವರ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಆನಂದಭೋದೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಹುಬ್ಬಳ್ಳಿ ಮೂರು ಸಾವಿರ ಮಠದ ಮನ್ಮಹಾರಾಜ ನಿರಂಜನ ಜ.ಡಾ.ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಕೃಷಿ ಜಯಂತಿ ಉದ್ಘಾಟಿಸಲಿದ್ದಾರೆ.

ಸ್ವರ್ಣವಲ್ಲೀ ಪ್ರಭಾ ಕೃಷಿ ವಿಶೇಷಾಂಕವನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚಂದ್ರಶೇಖರ ಜೋಶಿ ಬಿಡುಗಡೆಗೊಳಿಸಲಿದ್ದಾರೆ. ಅತಿಥಿಗಳಾಗಿ ತೀರ್ಥಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ೪ ಗಂಟೆಗೆ ವಿಚಾರಪೂರ್ಣ ಗೋಷ್ಠಿಗಳು ನಡೆಯಲಿದ್ದು, ಮೇ ೧೧ ರಂದು ಬೆಳಗ್ಗೆ ೧೦ ಗಂಟೆಯಿಂದ ವಿವಿಧ ಸ್ಪರ್ಧೆಗಳು, ಪ್ರದರ್ಶನಗಳು ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್.ಹೆಗಡೆ ಇದ್ದರು.

ಸ್ವರ್ಣವಲ್ಲಿ ಕೃಷಿ ಪ್ರಶಸ್ತಿ ಪುರಸ್ಕೃತರು:

ಉತ್ತಮ ಕೃಷಿಕ (ಕೃಷಿ ಕಂಠೀರವ)- ಮಹೇಶ ಚಂದ್ರಶೇಖರ ಹೆಗಡೆ ಅರಗಿನಮನೆ, ಸಾಧಕ ಕೃಷಿ ಮಹಿಳೆ-ವೀಣಾ ಮಹಾಬಲೇಶ್ವರ ಹೆಗಡೆ ಹೆಬ್ಳೆಮನೆ, ಉತ್ತಮ ಕೃಷಿ ಅವಿಭಕ್ತ ಕುಟುಂಬ-ಸುಬ್ರಾಯ ವಾಸುದೇವ ದಾನಗೇರಿ, ಸಾಧಕ ಕೃಷಿ ಪೂರಕ ಸಂಸ್ಥೆ- ಪ್ರಗತಿ ಮಿತ್ರ ರೈತ ಉತ್ಪಾದಕ ಕಂಪನಿ, ಬಾಳೆಗದ್ದೆ, ಸಾಧಕ ಕೃಷಿ ಕುಶಲಕರ್ಮಿ-ಗಣಪತಿ ಭೈರವೇಶ್ವರ ಭಟ್ಟ ಕಲ್ಲೇಮನೆ, ಅಚವೆ, ಮಹಾಬಲೇಶ್ವರ ಅನಂತ ಹೆಗಡೆ ಮೆಣಸೇಮನೆ, ವಾನಳ್ಳಿ, ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿಪುರಸ್ಕೃತರು ಪ್ರಥಮ- ಗಣಪತಿ ವೆಂಕಟರಮಣ ಹೆಗಡೆ ಎಮ್ಮೆನಹೋಂಡಾ, ದ್ವಿತೀಯ- ಬಿ.ಜಿ.ಹೆಗಡೆ ಹೆಗಡೆ ಮತ್ತು ಎನ್.ಜಿ.ಹೆಗಡೆ ಗೇರಾಳ, ದ್ವಿತೀಯ-ಸುಬ್ರಾಯ ಗಜಾನನ ಹೆಗಡೆ ಊರತೋಟ.