ಆತ್ಮೀಯ ಸ್ನೇಹಿತನಿಗೆ ಟೋಕಿಯೋದಿಂದ ಪತ್ರ ಬರೆದಿದ್ದ ಕೃಷ್ಣ

| Published : Dec 11 2024, 12:47 AM IST

ಆತ್ಮೀಯ ಸ್ನೇಹಿತನಿಗೆ ಟೋಕಿಯೋದಿಂದ ಪತ್ರ ಬರೆದಿದ್ದ ಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಆನೆದೊಡ್ಡಿ ತಮ್ಮಯ್ಯನವರಿಗೆ ಕೃಷ್ಣನು ಮಾಡುವ ಅನಂತವಾದ ನಮಸ್ಕಾರಗಳು.ನಾನು ಕ್ಷೇಮ, ಅಅಲ್ಲಿ ನೀವು, ನಿಮ್ಮ ತಂದೆಯವರು ಮತ್ತು ಕುಟುಂಬದವರು ಆರೋಗ್ಯವೆಂದು ನಂಬುತ್ತೇನೆ.

ಕನ್ನಡಪ್ರಭ ವಾರ್ತೆ. ಮದ್ದೂರು

ಮುತ್ಸದ್ಧಿ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ತಮ್ಮ ಆತ್ಮೀಯ ಸ್ನೇಹಿತ ಆನೆದೊಡ್ಡಿ ತಮ್ಮಯ್ಯ ಅವರಿಗೆ ೧೯೬೫ರಲ್ಲಿ ಬರೆದಿದ್ದ ಪತ್ರ ಇದೀಗ ವೈರಲ್ ಆಗಿದೆ. ಅಂದು ಜಪಾನಿನ ಟೋಕಿಯೋದಿಂದ ಕನ್ನಡದಲ್ಲೇ ಪತ್ರ ಬರೆದು ಕನ್ನಡಾಭಿಮಾನ ಮೆರೆದಿದ್ದರು.

ಆನೆದೊಡ್ಡಿ ತಮ್ಮಯ್ಯನವರಿಗೆ ಕೃಷ್ಣನು ಮಾಡುವ ಅನಂತವಾದ ನಮಸ್ಕಾರಗಳು.

ನಾನು ಕ್ಷೇಮ, ಅಅಲ್ಲಿ ನೀವು, ನಿಮ್ಮ ತಂದೆಯವರು ಮತ್ತು ಕುಟುಂಬದವರು ಆರೋಗ್ಯವೆಂದು ನಂಬುತ್ತೇನೆ.

ಸಮ್ಮೇಳನ ಮುಗಿಸಿಕೊಂಡು ಈಗ ಜಪಾನಿಗೆ ಬಂದಿದ್ದೇಣೆ. ಈ ಕಾಆಗದವನ್ನು ಪ್ರಪಂಚದಲ್ಲಿ ಅತಿ ವೇಗವಾದ ರೈಲಿನಿಂದ ಬರೆಯುತ್ತಿದ್ದೇನೆ. ಘಂಟೆಗೆ ನೂರೈವತ್ತು ಮೈಲಿ ವೇಗದಲ್ಲಿ ಹೋಗುತ್ತದೆ. ಜಪಾನು ಅತಿ ಮುಂದುವರೆದ ದೇಶ. ಆದರೂ ಅವರ ಸಂಸ್ಕೃತಿಯನ್ನು ಬಿಟ್ಟಿಲ್ಲ. ಕೈಗಾರಿಕಾ ಕ್ಷೇತ್ರದಲ್ಲಿಯೂ ಮುಂದುವರೆದಿದೆ. ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಅದು ಅತಿ ಅದ್ಭುತವಾದುದು.

ಈಚೆಗೆ ಮಳೆಯಾಯಿತು ಎಂಮದು ಊರಿಂದ ಕಾಗದ ಬಂತು. ಆದರೆ ಏನೂ ಪ್ರಯೋಜನವಿಲ್ಲ. ಶ್ರೀ ರೇವಣ್ಣ, ಸಣ್ಣ ಬೋರಯ್ಯ ಮತ್ತು ಫೀಲ್ಡ್‌ಮ್ಯಾನ್‌ರವರಿಗೆ ನನ್ನ ನಮಸ್ಕಾರಗಳು. ನಿಮ್ಮ ತಂದೆಯವರಿಗೂ ನನ್ನ ನಮಸ್ಕಾರಗಳನ್ನು ತಿಳಿಸುವುದು. ಜನವರಿ ಮಧ್ಯಭಾಗದಲ್ಲಿ ವಾಪಸು ಬರುತ್ತೇನೆ ಎಂದು ೨೫.೧೨.೬೫ರಂದು ಪತ್ರ ಬರೆದಿದ್ದರು.