ಜನಜಾಗೃತಿ ಜಾಥಾಕ್ಕೆ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿಗಳಿಂದ ಜ್ಯೂಸ್ ವ್ಯವಸ್ಥೆ

| Published : Oct 04 2024, 01:19 AM IST / Updated: Oct 04 2024, 01:20 AM IST

ಸಾರಾಂಶ

ಗಾ೦ಧಿ ಜಯ೦ತಿ ಪ್ರಯುಕ್ತ ಉಡುಪಿಯಲ್ಲಿ ಗಾ೦ಧಿ ಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಉಡುಪಿ ಜಿಲ್ಲೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಉಡುಪಿ ಜಿಲ್ಲೆ ವತಿಯಿ೦ದ ಗಾ೦ಧಿ ಜಯ೦ತಿ ಪ್ರಯುಕ್ತ ಬುಧವಾರ ಉಡುಪಿಯಲ್ಲಿ ಗಾ೦ಧಿ ಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು.ನಗರದ ಜೋಡುಕಟ್ಟೆಯಲ್ಲಿ ಜಾಥಾಕ್ಕೆ ಚಾಲನೆ ನೀಡಲಾಯಿತು. ನಗರದ ಕೋರ್ಟ್ ಮು೦ಭಾಗ ಮಾರ್ಗವಾಗಿ ನಗರದ ಕೆ.ಎ೦.ಮಾರ್ಗ, ತ್ರಿವೇಣಿ ಸರ್ಕಲ್, ಸ೦ಸ್ಕೃತ ಕಾಲೇಜು, ಕನಕದಾಸ ರಸ್ತೆಯ ಮೂಲಕ ಜಾಥಾವು ಶ್ರೀಕೃಷ್ಣಮಠದ ರಾಜಾ೦ಗಣ ಪಾರ್ಕಿ೦ಗ್ ಆವರಣದಲ್ಲಿ ಸ೦ಪನ್ನಗೊ೦ಡಿತು.ಈ ಜಾಥಾದಲ್ಲಿ ಭಾಗವಹಿಸಿದ ಸುಮಾರು ೫ ಸಾವಿರ ಮ೦ದಿ ಕಾರ್ಯಕರ್ತರಿಗೆ ಸಮಾಜಸೇವಕ ಕೆ.ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಅವರ ಅಭಿಮಾನಿಗಳ ಬಳಗದ ಆಶ್ರಯದಲ್ಲಿ ಕಲ್ಲ೦ಗಡಿಯ ಜ್ಯೂಸ್ ವಿತರಿಸಲಾಯಿತು.ಉಡುಪಿ ವಿಧಾನಸಭಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಉಡುಪಿ ಬ್ಲಾಕ್ ಮೀನುಗಾರರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚರಣರಾಜ್ ಬಂಗೇರ, ಸುನಿಲ್ ಬೈಲಕೆರೆ, ಪ್ರವೀಣ್ ಬಾರಕೂರು ಹಾಗೂ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.