ಸಮಾನತೆ ಸಮಾಜ ಹಾಗೂ ಪ್ರಬುದ್ಧ ದೇಶ ನಿರ್ಮಾಣ ಮಾಡುವ ಕನಸು ಕಂಡ ಅಂಬೇಡ್ಕರ್ ರವರ ಆದರ್ಶಗಳ ಹಾದಿಯಲ್ಲಿ ನಡೆದವರು.

ಶೋಷಿತರ ಏಕತಾದಿನವಾಗಿ ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮದಿನಾಚರಣೆ

ಕನ್ನಡಪ್ರಭ ವಾರ್ತೆ ಕೋಲಾರಸಮಾನತೆ ಸಮಾಜ ಹಾಗೂ ಪ್ರಬುದ್ಧ ದೇಶ ನಿರ್ಮಾಣ ಮಾಡುವ ಕನಸನ್ನು ಪ್ರೊ.ಬಿ. ಕೃಷ್ಣಪ್ಪ ಹೊಂದಿದ್ದರು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ- ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಆರ್.ಮೋಹನ್‌ರಾಜ್ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ- ಕರ್ನಾಟಕ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಮಾರ್ಗ ವತಿಯಿಂದ ಪ್ರೊ.ಬಿ. ಕೃಷ್ಣಪ್ಪ ಜನ್ಮದಿನದ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಸಮಾನತೆ ಸಮಾಜ ಹಾಗೂ ಪ್ರಬುದ್ಧ ದೇಶ ನಿರ್ಮಾಣ ಮಾಡುವ ಕನಸು ಕಂಡ ಅಂಬೇಡ್ಕರ್ ರವರ ಆದರ್ಶಗಳ ಹಾದಿಯಲ್ಲಿ ನಡೆದವರು ಪ್ರೊ. ಬಿ.ಕೃಷ್ಣಪ್ಪ ಅವರ ಜನ್ಮದಿನವನ್ನು ಶೋಷಿತರ ಬಹುಜನರ ಏಕತಾ ದಿನವಾಗಿ ಆಚರಿಸಲಾಗುತ್ತಿದೆ ಎಂದರು.ದಲಿತರ, ಶೋಷಿತರ ಏಳ್ಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಕೃಷ್ಣಪ್ಪ ಎಂದ ಅವರು, ದಲಿತರು ರಾಜಕೀಯವಾಗಿಯೂ ಪ್ರಬಲರಾದಾಗ ಮಾತ್ರ ತಮ್ಮ ಸಮುದಾಯದ ಅಭಿವೃದ್ದಿಯನ್ನು ಕಾಣಬಹುದು ಎಂಬ ಸತ್ಯ ಅರಿತಿದ್ದ ಅವರು, ನಮಗೆಲ್ಲಾ ಆದರ್ಶವಾಗಿದ್ದರು ಎಂದರು.ಕಾರ್ಯಕ್ರಮದಲ್ಲಿ ಬಹುಜನ ಚಳವಳಿ ಚಿಂತಕರು ಎಂ. ಗೋಪಿನಾಥ್, ರಾಜ್ಯ ಸಂಘಟನ ಕಾರ್ಯದರ್ಶಿ ವಕ್ಕಲೇರಿ ಶಂಕರ್, ಬೆಂಗಳೂರು ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಸಮಿತಿ ಸದಸ್ಯ ಆನೇಕಲ್ ನಾರಾಯಣ ಸ್ವಾಮಿ, ಜಿಲ್ಲಾ ಸಂಚಾಲಕ ಲಕ್ಷ್ಮಿಪುರ ಲೋಕೇಶ್, ಹಿರಿಯ ಹೊರಟಗಾರರಾದ ಶೈಲಜಮ್ಮ, ಆರ್‌ಪಿಐ ಕೋಲಾರ ಜಿಲ್ಲಾ ಅಧ್ಯಕ್ಷ ಚಂದ್ರು, ಹಳೆಹಳ್ಳಿ ತಿಮ್ಮರಾಯಪ್ಪ, ಭೈರಂಡಹಳ್ಳಿ ತಾಲೂಕು ಅಧ್ಯಕ್ಷ ರವೀಂದ್ರ ಕುಮಾರ್, ಕಲ್ಪನ, ಕೆಜಿಎಫ್ ಬಾಬು, ಮೈಸೂರು ರಾಮಸ್ವಾಮಿ, ಆರ್. ಮೋಹನ್ ರಾಜು, ರಾಮಪುರ ಲೋಕೇಶ್ ಇದ್ದರು.