ಕೆ.ಆರ್. ಕ್ಷೇತ್ರದಲ್ಲಿ ನೂತನ ಬಸ್ ತಂಗುದಾಣ ಉದ್ಘಾಟನೆ

| Published : Mar 12 2024, 02:05 AM IST

ಸಾರಾಂಶ

ಸಾರ್ವಜನಿಕರು, ಪ್ರಯಾಣಿಕರ ಅನುಕೂಲಕ್ಕೆ ತಂಗುದಾಣ ನಿರ್ಮಿಸಲಾಗಿದೆ. ಬಸ್‌ ತಂಗುದಾಣದ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಇದಕ್ಕೆ ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಇರಬೇಕು ಮತ್ತು ಭಿತ್ತಿ ಪತ್ರ ಅಂಟಿಸಿ ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ನೂತನ ಬಸ್ ತಂಗುದಾಣಗಳನ್ನು ಶಾಸಕ ಟಿ.ಎಸ್. ಶ್ರೀವತ್ಸ ಸೋಮವಾರ ಲೋಕಾರ್ಪಣೆಗೊಳಿಸಿದರು.

ಕೃಷ್ಣರಾಜ ಕ್ಷೇತ್ರದಲ್ಲಿ ಸುಮಾರು 1.20 ಕೋಟಿ 10 ಬಸ್ ತಂಗುದಾಣಗಳನ್ನು ನಿರ್ಮಿಸಿಕೊಡಲಾಗಿದೆ. ಮೊದಲ ಹಂತದಲ್ಲಿ ಜೆ.ಎಲ್.ಬಿ. ರಸ್ತೆ, ಸಿದ್ದಪ್ಪ ಚೌಕ, ಹಾರ್ಡಿಂಗ್ ವೃತ್ತ, ಶಾಂತಿ ಸಾಗರ್ ಮುಂತಾದ ಕಡೆ ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಯಿತು.

ಈ ವೇಳೆ ಮಾತನಾಡಿದ ಶ್ರೀವತ್ಸ ಅವರು, ಸಾರ್ವಜನಿಕರು, ಪ್ರಯಾಣಿಕರ ಅನುಕೂಲಕ್ಕೆ ತಂಗುದಾಣ ನಿರ್ಮಿಸಲಾಗಿದೆ. ಬಸ್‌ ತಂಗುದಾಣದ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಇದಕ್ಕೆ ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಇರಬೇಕು ಮತ್ತು ಭಿತ್ತಿ ಪತ್ರ ಅಂಟಿಸಿ ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.

ಬಸ್ ತಗುದಾಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ದಿನನಿತ್ಯ ಓಡಾಡುವ ಬಸ್‌ಗಳ ವೇಳಾಪಟ್ಟಿ ಅಳವಡಿಸಬೇಕು. ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇದರ ನಿರ್ವಹಣೆ ಸರಿಯಾಗಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಮಾಜಿ ಮೇಯರ್ ಶಿವಕುಮಾರ್, ನಗರಪಾಲಿಕೆ ಮಾಜಿ ಸದಸ್ಯರಾದ ಸೌಮ್ಯಾ ಉಮೇಶ್, ರಮೇಶ್, ಬಿಜೆಪಿ ಮುಖಂಡರಾದ ಜೋಗಿ ಮಂಜು, ಉಮೇಶ್, ರಾಕೇಶ್ ಗೌಡ, ಜೋಗಪ್ಪ, ಕೃಷ್ಣನಾಯಕ, ಶರತ್ ಭಂಡಾರಿ, ಕಿಶೋರ್, ವಿಜಯ್ ನಾಯಕ್, ನಂದೀಶ್ ನಾಯಕ್, ಅರುಣ್, ಪ್ರದೀಪ್, ಜಯರಾಮ್, ಅನ್ನಪೂರ್ಣಮ್ಮ, ಕೀರ್ತಿ, ಲಿಕಿತ್ ಗೌಡ, ಮಂಜುನಾಥ್ ಮತ್ತು ಅಧಿಕಾರಿಗಳು ಇದ್ದರು.