ಸಾರಾಂಶ
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ಬ್ಯಾಂಕಿನ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಎನ್. ಮಾಧವರಾವ್ ವೃತ್ತದಲ್ಲಿನ ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಸ್ವಾತಂತ್ರೋತ್ಸವ ಆಯೋಜಿಸಲಾಗಿತ್ತು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ಬ್ಯಾಂಕಿನ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಯಿತು. ವಿರಕ್ತ ಮಠದ ಶ್ರೀ ಗೌರಿಶಂಕರಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಬ್ಯಾಂಕಿನ ಅಧ್ಯಕ್ಷ ಪ್ರತಿಧ್ವನಿ ಪ್ರಸಾದ್, ಉಪಾಧ್ಯಕ್ಷ ಡಿ. ಬಸವರಾಜು, ನಿರ್ದೇಶಕರಾದ ನಂ. ಸಿದ್ದಪ್ಪ, ಎಂ.ಡಿ. ಪಾರ್ಥಸಾರಥಿ, ಎಚ್.ವಿ. ಭಾಸ್ಕರ್, ಅರುಣ್‌ಸಿದ್ದಪ್ಪ, ಶಂಕರನಾರಾಯಣ ಶಾಸ್ತ್ರಿ, ಸರ್ವಮಂಗಳಾ, ಎಂ.ಎನ್. ನವೀನ್‌ಕುಮಾರ್, ಬಿ. ನಾಗರಾಜು ಹಾಗೂ ಪ್ರಭಾರ ವ್ಯವಸ್ಥಾಪಕ ಡಿ. ಅನಂತ ವೀರಪ್ಪ ಇದ್ದರು.