ಡಿಂಕದ ಕೃಷ್ಣಗೌಡ ಇಸ್ರೇಲ್‌ನಲ್ಲಿ ಸುರಕ್ಷಿತ
KannadaprabhaNewsNetwork | Published : Oct 10 2023, 01:00 AM IST
ಡಿಂಕದ ಕೃಷ್ಣಗೌಡ ಇಸ್ರೇಲ್‌ನಲ್ಲಿ ಸುರಕ್ಷಿತ
ಸಾರಾಂಶ
ಯುದ್ಧಪೀಡಿತ ಇಸ್ರೇಲ್‌ನಲ್ಲಿ ಶ್ರವಣಬೆಳಗೊಳ ಹೋಬಳಿಯ ಡಿಂಕ ಗ್ರಾಮದ ಕೃಷ್ಣ ಗೌಡ ಎಂಬುವವರು ಸಿಲುಕಿಕೊಂಡಿದ್ದು, ಅವರು, ಯುದ್ಧಪೀಡಿತ ನೆಲದಲ್ಲಿ ಸುರಕ್ಷಿತವಾಗಿದ್ದೇವೆ ಎಂಬ ಸಂದೇಶವನ್ನು ತಮ್ಮ ಕುಟುಂಬಸ್ಥರಿಗೆ ರವಾನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ಯುದ್ಧ ನಡೆಯುತ್ತಿದೆ ನಾನು ಸುರಕ್ಷಿತವಾಗಿದ್ದೇನೆ ಎಂದು ಸಂದೇಶ ಯುದ್ಧಪೀಡಿತ ಇಸ್ರೇಲ್‌ನಲ್ಲಿ ಶ್ರವಣಬೆಳಗೊಳ ಹೋಬಳಿಯ ಡಿಂಕ ಗ್ರಾಮದ ಕೃಷ್ಣ ಗೌಡ ಎಂಬುವವರು ಸಿಲುಕಿಕೊಂಡಿದ್ದು, ಅವರು, ಯುದ್ಧಪೀಡಿತ ನೆಲದಲ್ಲಿ ಸುರಕ್ಷಿತವಾಗಿದ್ದೇವೆ ಎಂಬ ಸಂದೇಶವನ್ನು ತಮ್ಮ ಕುಟುಂಬಸ್ಥರಿಗೆ ರವಾನಿಸಿದ್ದಾರೆ. ಡಿಂಕ ಗ್ರಾಮದ ಕೃಷಗೌಡ ಸುಮಾರು ೨೦ ವರ್ಷಗಳಿಂದ ಇಸ್ರೇಲ್‌ನಲ್ಲಿ ನೆಲೆಸಿದ್ದು, ಹೋಟೆಲ್ ಉದ್ಯಮ ಮಾಡಿಕೊಂಡಿದ್ದಾರೆ. ತನ್ನ ಸಹೋದರ ಮಹದೇವ ಅವರ ಜೊತೆ ಭಾನುವಾರ ಫೋನ್‌ನಲ್ಲಿ ಮಾತನಾಡಿದ್ದು, ಸೋಮವಾರ ಬೆಳಗ್ಗೆ ಮೊಬೈಲ್ ಸಂದೇಶ ಕಳಿಸಿ ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ. ಯುದ್ಧ ನಡೆಯುತ್ತಿದೆ, ರಾಕೆಟ್‌ಗಳ ದಾಳಿ ಮಾಡುತ್ತಿರುವುದು ಕಾಣುತ್ತಿದೆ. ನಾನು ಸುರಕ್ಷಿತವಾಗಿದ್ದೇನೆ. ಒಂದು ವಾರ ಕಾದು, ಭಾರತಕ್ಕೆ ಹಿಂದಿರುಗುವ ತೀರ್ಮಾನ ಮಾಡುತ್ತೇನೆ ಎಂದು ಕೃಷ್ಣ ಗೌಡ ತಿಳಿಸಿದ್ದಾರೆ. ಇವರು ಆಗಾಗ್ಗೆ ಸ್ವಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಇವರ ಪೋಷಕರು ಡಿಂಕ ಗ್ರಾಮದಲ್ಲೇ ವಾಸವಾಗಿದ್ದಾರೆ.