ಕನ್ನಡದ ತೇರಾದ ಕೆಎಸ್‌ಆರ್‌ಟಿಸಿ ಬಸ್‌

| Published : Nov 05 2024, 12:45 AM IST

ಸಾರಾಂಶ

ಬೇಲೂರು ಸಾರಿಗೆ ಘಟಕದ ವತಿಯಿಂದ ಬೇಲೂರು ‌ಬಾಣಾವಾರ ನಡುವೆ ಚಲಿಸುವ ಬಸ್ಸನ್ನು ಸಂಪೂರ್ಣವಾಗಿ ಕನ್ನಡ ಧ್ವಜ, ಬಾವುಟ, ಸಾಹಿತಿಗಳು, ನಟರು, ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳಿಂದ ಅಲಂಕರಿಸಲಾಗಿದೆ. ಒಂದೊಂದನ್ನೇ ಓದುತ್ತಾ ಹೋದರೆ ಕರ್ನಾಟಕದ ಇತಿಹಾಸ ನೆನಪಿಗೆ ಬರುತ್ತದೆ. ಕನ್ನಡ ರಥದಲ್ಲಿ ರಾಜ್ಯೋತ್ಸವ ಪುರಸ್ಕೃತ ಸಾಹಿತಿಗಳು, ಕನ್ನಡದ ಮೇರು ನಟರು, ರಾಜರು, ಹಾಸನ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಮಾಹಿತಿಯಿದೆ.ಇಡೀ ಬಸ್‌ನ ಒಂದೊಂದು ಸೀಟಿನಲ್ಲೂ ಕನ್ನಡದದ ಬಾವುಟ. ಕನ್ನಡದ ವಾತಾವರಣ ಸೃಷ್ಟಿಸುವ ಬಲೂನುಗಳ ಅಲಂಕಾರ ಗಮನ ಸೆಳೆಯುತ್ತದೆ.

ಕನ್ನಡಪ್ರಭ ವಾರ್ತೆ ಬೇಲೂರು ಬೇಲೂರು ಸಾರಿಗೆ ಘಟಕದ ವತಿಯಿಂದ ಬೇಲೂರು ‌ಬಾಣಾವಾರ ನಡುವೆ ಚಲಿಸುವ ಬಸ್ಸನ್ನು ಸಂಪೂರ್ಣವಾಗಿ ಕನ್ನಡ ಧ್ವಜ, ಬಾವುಟ, ಸಾಹಿತಿಗಳು, ನಟರು, ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳಿಂದ ಅಲಂಕರಿಸಲಾಗಿದೆ. ಒಂದೊಂದನ್ನೇ ಓದುತ್ತಾ ಹೋದರೆ ಕರ್ನಾಟಕದ ಇತಿಹಾಸ ನೆನಪಿಗೆ ಬರುತ್ತದೆ. ಕನ್ನಡ ರಥದಲ್ಲಿ ರಾಜ್ಯೋತ್ಸವ ಪುರಸ್ಕೃತ ಸಾಹಿತಿಗಳು, ಕನ್ನಡದ ಮೇರು ನಟರು, ರಾಜರು, ಹಾಸನ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಮಾಹಿತಿಯಿದೆ.ಇಡೀ ಬಸ್‌ನ ಒಂದೊಂದು ಸೀಟಿನಲ್ಲೂ ಕನ್ನಡದದ ಬಾವುಟ. ಕನ್ನಡದ ವಾತಾವರಣ ಸೃಷ್ಟಿಸುವ ಬಲೂನುಗಳ ಅಲಂಕಾರ ಗಮನ ಸೆಳೆಯುತ್ತದೆ. ಪಟ್ಟಣದ ಡಾ. ರಾಜಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ತೀರ್ಥಂಕರ ತಮ್ಮ ಪ್ಲಾಸ್ಟಿಕ್ ಅಂಗಡಿಯ ವಸ್ತುಗಳನ್ನು ಕೆಂಪು ಮತ್ತು ಹಳದಿ ಬಣ್ಣದಿಂದ ಜೋಡಿಸುವ ಮೂಲಕ ಗಮನ ಸೆಳೆದಂತೆ, ಜೆಪಿ‌ನಗರದ ದೇವರಾಜ್ ತಮ್ಮ ಅಂಗಡಿಯ ನಾಮಫಲಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಹಾಕಿರುವುದು, ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕನವರ ಸ್ತಬ್ಧ ಚಿತ್ರ ಸೇರಿದಂತೆ ಹತ್ತಾರು ಬಗೆಯಲ್ಲಿ ತಮ್ಮ ತಮ್ಮ ಕನ್ನಡಾಭಿಮಾನ ಮೆರೆದಂತೆ, ಬೇಲೂರು ಬಸ್ ಘಟಕ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತಮ್ಮ ವಾಹನಕ್ಕೆ ಜ್ಞಾನಪೀಠ ಪ್ರಶಸ್ತಿ ವಿಜೇತರ ಭಾವಚಿತ್ರಗಳು, ಕನ್ನಡ ಬಾವುಟಗಳು, ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು, ಕರ್ನಾಟಕಕ್ಕೆ ಏಕೀಕರಣಕ್ಕೆ ಸೇವೆ ಸಲ್ಲಿಸಿದ ಮಹನೀಯರ ಭಾವಚಿತ್ರಗಳು, ಪ್ರಮುಖ ಪ್ರವಾಸಿ ತಾಣಗಳು, ವಿಶೇಷವಾಗಿ ಹಾಸನ ಜಿಲ್ಲೆಯ ಪ್ರವಾಸಿ ತಾಣಗಳು ಮತ್ತು ಬೇಲೂರಿನ ಪ್ರಮುಖ ತಾಣಗಳನ್ನು ಬಸ್ಸುಗಳಲ್ಲಿ ಅಳವಡಿಸಿ ಪ್ರಯಾಣಿಕರ ಗಮನ ಸೆಳೆದಿದ್ದಾರೆ.