ಹರಿಹರ: ಕೆಎಸ್‌ಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿ: ಹಲವರಿಗೆ ಗಾಯ

| Published : Jul 19 2025, 01:00 AM IST

ಹರಿಹರ: ಕೆಎಸ್‌ಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿ: ಹಲವರಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ-ಹರಪನಹಳ್ಳಿ ಹೆದ್ದಾರಿಯ ಕರಲಹಳ್ಳಿ ಕ್ಯಾಂಪ್ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ೧೦ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಹರಿಹರ: ಹರಿಹರ-ಹರಪನಹಳ್ಳಿ ಹೆದ್ದಾರಿಯ ಕರಲಹಳ್ಳಿ ಕ್ಯಾಂಪ್ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ೧೦ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಚಾಲಕ ರವೀಂದ್ರ, ನಿರ್ವಾಹಕ ರಾಮಲಿಂಗಪ್ಪ ಕುಂಬಾರ್, ಪ್ರಯಾಣಿಕರಾದ ಅರುಣಪ್ಪ, ಚಂದ್ರನಾಯ್ಕ, ಮುಬಾರಕ್, ದಸ್ತಗೀರ್, ಲೋಕೇಶ್, ವಿನೂತಾ, ಸಮನ್ವಿತ ಹಾಗೂ ಇತರರು ಗಾಯಗೊಂಡಿದ್ದಾರೆ.

ದಾವಣಗೆರೆ ಘಟಕಕ್ಕೆ ಸೇರಿದ ಬಸ್ ಬೆಳಗ್ಗೆ ಹರಿಹರದ ಮೂಲಕ ಹರಪನಹಳ್ಳಿ ಕಡೆಗೆ ಹೊರಟಿದ್ದಾಗ ಈ ಘಟನೆ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಬಸ್‌ ಮುಂಬಾಗ ಅಪ್ಪಚ್ಚಿಯಾಗಿದೆ. ಬಸ್ ಒಳಗೆ ಸಿಲುಕಿದ್ದ ಚಾಲಕನ್ನು ರಕ್ಷಿಸಲು ಜೆಸಿಬಿ ಸಹಾಯ ಪಡೆಯಬೇಕಾಯಿತು.

ವಿಷಯ ತಿಳಿದು ಸುತ್ತಲಿನ ಗ್ರಾಮಸ್ಥರು ಹಾಗೂ ರಸ್ತೆಯಲ್ಲಿ ಸಾಗುತ್ತಿದ್ದ ಜನರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಬಸ್ಸಿನಲ್ಲಿ ೨೫ ಪ್ರಯಾಣಿಕರಿದ್ದರು. ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಕೆಲವು ಪ್ರಯಾಣಿಕರಿಗೆ ಕೈ, ಕಾಲು, ತಲೆಗೆ ತೀವ್ರ ಪೆಟ್ಟಾಗಿದೆ, ಉಳಿದವರಿಗೆ ಸಣ್ಣ, ಪುಟ್ಟ ಪೆಟ್ಟಾಗಿವೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - -

-18HRR01:

ಹರಿಹರ ಹೊರವಲಯದ ಹರನಹಳ್ಳಿ ಹೆದ್ದಾರಿಯಲ್ಲಿ ಶುಕ್ರವಾರ ಕೆಎಸ್‌ಆರ್‌ಟಿಸಿ ಬಸ್ಸೊಂದು ಮರಕ್ಕೆ ಡಿಕ್ಕಿಯಾಗಿ ನುಜ್ಜುಗುಜ್ಜಾಗಿರುವುದು.