ಧರ್ಮಸ್ಥಳದಲ್ಲಿ ಕೆಎಸ್ಆರ್‌ಟಿಸಿ ಜನಸ್ಪಂದನ, ಸಾರ್ವಜನಿಕ ಅಹವಾಲುಸ್ವೀಕಾರ, ಮಾಹಿತಿ ಕಾರ್ಯಾಗಾರ

| Published : Jul 02 2024, 01:35 AM IST

ಧರ್ಮಸ್ಥಳದಲ್ಲಿ ಕೆಎಸ್ಆರ್‌ಟಿಸಿ ಜನಸ್ಪಂದನ, ಸಾರ್ವಜನಿಕ ಅಹವಾಲುಸ್ವೀಕಾರ, ಮಾಹಿತಿ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಕ.ರಾ.ರ.ಸಾ.ನಿಗಮದೊಂದಿಗೆ ಜನಸ್ಪಂದನ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಮಾಹಿತಿ ಕಾರ್ಯಾಗಾರ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಕಲಾಭವನದಲ್ಲಿ ಸೋಮವಾರ ಜರಗಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಸರಿಪಡಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕ.ರಾ.ರ.ಸಾ.ನಿಗಮದೊಂದಿಗೆ ಜನಸ್ಪಂದನ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಮಾಹಿತಿ ಕಾರ್ಯಾಗಾರ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಕಲಾಭವನದಲ್ಲಿ ಸೋಮವಾರ ಜರಗಿತು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಸರಿಪಡಿಸಿ ಬೆಳಗ್ಗೆ 8 ರಿಂದ 9.30ರ ವರೆಗೆ ಅಗತ್ಯ ಸ್ಥಳಗಳಲ್ಲಿ ಬಸ್ ಗಳನ್ನು ಹೆಚ್ಚಿಸಿ ಹಾಗೂ ಬಂದಿರುವ ಅಹವಾಲುಗಳ ಕುರಿತು ವಾರದೊಳಗೆ ವರದಿ ನೀಡಿ, ಉಜಿರೆಯ ಟಿಸಿ ಪಾಯಿಂಟ್ ಸಮಯ ವಿಸ್ತರಿಸಿ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು ಡಿಪೋದ ಡಿಸಿ ರಾಜೇಶ್ ಶೆಟ್ಟಿ ಮಾತನಾಡಿ, ಜನಸ್ಪಂದನೆ ಕಾರ್ಯಕ್ರಮದ ಮೂಲಕ ತಾಲೂಕಿನ ಮೂಲೆ ಮೂಲೆಗಳ ಸಮಸ್ಯೆ ಗೊತ್ತಾಗಿದೆ ಮುಂದಿನ ದಿನಗಳಲ್ಲಿ ಮಂಗಳೂರು- ಧರ್ಮಸ್ಥಳ ರೂಟ್ ನಲ್ಲಿ ಎಲೆಕ್ಟ್ರಿಕ್ ಮತ್ತು ರಾಜಹಂಸ ಬಸ್ ಗಳ ಓಡಾಟ ನಡೆಸುವ ಕುರಿತು ಚಿಂತನೆ ನಡೆದಿದೆ ಎಂದರು.

ಪುತ್ತೂರು ಡಿಪೋ ಡಿಸಿ ಅಮಲಿಂಗಯ್ಯ ಪಿ. ಹಾಸು ಪೂಜಾರಿ ಮಾತನಾಡಿ, ಈಗಿರುವ ವ್ಯವಸ್ಥೆಗಳಲ್ಲಿ ಇರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದರು.

ಪುತ್ತೂರು ಡಿಟಿಒ ಮುರಳೀಧರ ಆಚಾರ್ಯ, ಮಂಗಳೂರು ಡಿಟಿಒ ಕಮಲ್ ಕುಮಾರ್ ಉಪಸ್ಥಿತರಿದ್ದರು. ರಾಜೇಶ್ ಪೆಂರ್ಬುಡ ನಿರೂಪಿಸಿದರು.

ಯದುಪತಿ ಗೌಡ, ಸುಧೀರ್ ಕುಮಾರ್, ಶ್ರೀನಿವಾಸರಾವ್, ಮೀನಾಕ್ಷಿ, ಭಾರತೀ ಶೆಟ್ಟಿ, ರತ್ನಾಕರ ಬುಣ್ಣನ್, ಆಶಾ ಸಲ್ದಾನ, ಧರಿತ್ರಿ ಭಿಡೆ, ವಸಂತಿ, ಸಂತೋಷ್ ಮತ್ತಿತರರು ಅಹವಾಲು ಮಂಡಿಸಿದರು.