ಶರಣರ ನುಡಿ ಸಮಾಜ ತಿದ್ದುವ ಪ್ರಕ್ರಿಯೆ: ಶಾಸಕ ಟಿ.ಎಸ್. ಶ್ರೀವತ್ಸ ಅಭಿಮತ

| Published : Feb 26 2024, 01:34 AM IST

ಸಾರಾಂಶ

ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಶರಣರು. ತಂದೆ ನೀನು, ತಾಯಿ ನೀನು, ಬಂದು ನೀನು ಬಳಗ ನೀನು. ಆ ವಚನವು ಇಂದು ಅನಗತ್ಯವಾಗಿ ಬೆಳೆಯುತ್ತಿರುವ ವೃದ್ಧಾಶ್ರಮವನ್ನು ಅಲ್ಲಗಳೆಯುವ ಧ್ವನಿ. ತಂದೆ ತಾಯಿಗಳಿಗಿಂತ ಶ್ರೇಷ್ಠರಾದವರು ಯಾರೂ ಇಲ್ಲ. ಇದನ್ನು ಅರಿತು ತಾವು ಅವರ ಮನ ನೋಯಿಸದಂತೆ ನೋಡಿಕೊಳ್ಳಬೇಕು ಎಂದರು.ಪರಿಷತ್ತು ಯುವ ಜನಾಂಗದಲ್ಲಿ ಶರಣರ ತತ್ವಗಳನ್ನು ಬಿತ್ತುತ್ತಿರುವುದು ಸಂತೋಷದ ಸಂಗತಿ

ಕನ್ನಡಪ್ರಭ ವಾರ್ತೆ ಮೈಸೂರು

ಶರಣರ ನುಡಿ ಸಮಾಜವನ್ನು ಎಚ್ಚರಿಸುವ, ನಡವಳಿಕೆಯನ್ನು ತಿದ್ದುವ ಪ್ರಕ್ರಿಯೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.

ಶರಣ ಸಾಹಿತ್ಯ ಪರಿಷತ್ತು, ಕೆಎಸ್ಎಸ್ ಸಂಸ್ಕೃತ ಪಾಠ ಶಾಲೆ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ವಚನ ಗಾಯನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಶರಣರು. ತಂದೆ ನೀನು, ತಾಯಿ ನೀನು, ಬಂದು ನೀನು ಬಳಗ ನೀನು. ಆ ವಚನವು ಇಂದು ಅನಗತ್ಯವಾಗಿ ಬೆಳೆಯುತ್ತಿರುವ ವೃದ್ಧಾಶ್ರಮವನ್ನು ಅಲ್ಲಗಳೆಯುವ ಧ್ವನಿ. ತಂದೆ ತಾಯಿಗಳಿಗಿಂತ ಶ್ರೇಷ್ಠರಾದವರು ಯಾರೂ ಇಲ್ಲ. ಇದನ್ನು ಅರಿತು ತಾವು ಅವರ ಮನ ನೋಯಿಸದಂತೆ ನೋಡಿಕೊಳ್ಳಬೇಕು ಎಂದರು.

ಪರಿಷತ್ತು ಯುವ ಜನಾಂಗದಲ್ಲಿ ಶರಣರ ತತ್ವಗಳನ್ನು ಬಿತ್ತುತ್ತಿರುವುದು ಸಂತೋಷದ ಸಂಗತಿ ಎಂದರು.

ಶೈಲಾ ಸಿದ್ದರಾಮಪ್ಪ, ಸುಗುಣ ಹಾಗೂ ಬಿ.ಎಂ. ಸಿದ್ದಲಿಂಗಸ್ವಾಮಿ ಅವರು ವಚನಗಳನ್ನು ಹಾಡಿದರು. ಡಿ.ಎಸ್. ಸದಾಶಿವಮೂರ್ತಿ, ಮಹೇಶ್ವರಿ, ಡಾ.ಕೆ.ಎಸ್. ಮಲ್ಲೇಶ್ ವ್ಯಾಖ್ಯಾನಿಸಿದರು.

ಪರಿಷತ್ತಿನ ಅಧ್ಯಕ್ಷ ಮ.ಗು. ಸದಾನಂದಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ, ಪರಿಷತ್ತು ಮೈಸೂರಿನಲ್ಲಿ 75 ದತ್ತಿಗಳನ್ನು ಹೊಂದಿದ್ದು ನಿರಂತರವಾಗಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದರು.

ಮಲ್ಲಿಕಾರ್ಜುನಪ್ಪ ದತ್ತಿ ದಾನಿಗಳಾದ ಅಪರ್ಣ ಗೀತಾ ಮತ್ತು ಶಾಂತಕುಮಾರ್ ಅವರು ಬಂಧುಗಳು ಆಗಮಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್. ಶಿವಕುಮಾರ್, ಡಾ.ಡಿ.ಎಸ್. ಗುರು, ಕುಮಾರಸ್ವಾಮಿ, ಶಾರದಾ ಶಿವಲಿಂಗಸ್ವಾಮಿ, ನೀಲಾಂಬಿಕ, ಮಲ್ಲೇಶ್, ಮುದ್ದು ಮಲ್ಲೇಶ್ ಮೊದಲಾದವರು ಇದ್ದರು.

ಪರಂಜ್ಯೋತಿ ಮಹಿಳಾ ಬಳಗದ ವಚನ ಗಾಯನ ವಿದ್ಯಾರ್ಥಿಗಳಿಂದ ಸಾಮೂಹಿಕ ಪ್ರಾರ್ಥನೆ, ಶೈಲಜಾ ಗುರುಸ್ವಾಮಿ ಸ್ವಾಗತ, ಮಹೇಶ್ ನಿರೂಪಿಸಿದರು. ಮುದ್ದು ವಂದಿಸಿದರು.