ಒಂದಾದ ಕೂಡಲಶ್ರೀ- ವಚನಶ್ರೀ

| Published : Oct 24 2025, 01:00 AM IST

ಸಾರಾಂಶ

ಪಂಚಮಸಾಲಿ ಸಮುದಾಯದ ಶ್ರೀಗಳ ಜೊತೆ ರಾಜೀ ಸಂಧಾನವಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ದೆಹಲಿ: ಪಂಚಮಸಾಲಿ ಸಮುದಾಯದ ಶ್ರೀಗಳ ಜೊತೆ ರಾಜೀ ಸಂಧಾನವಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ದೆಹಲಿಯ ವಿ.ಸೋಮಣ್ಣ ನಿವಾಸದಲ್ಲಿ ಸಭೆ ನಡೆದಿದ್ದು, ಪೀಠಗಳ ನಡುವೆ ಮನಸ್ತಾಪ, ಮೀಸಲಾತಿ ವಿಚಾರವಾಗಿ ಗೊಂದಲ ಉಂಟಾಗಿತ್ತು. ಈ ಬಗ್ಗೆ ಒಟ್ಟಾಗಿ ಹೋಗುವ ಬಗ್ಗೆ ಚರ್ಚೆ ನಡೆದಿದ್ದು ವಚನಾನಂದ ಶ್ರೀಗಳು ಹಾಗೂ ಜಯ ಮೃತ್ಯುಂಜಯ ಶ್ರೀಗಳ ನಡುವೆ ಸಂಧಾನವಾಗಿದೆ ಎಂದರು. ಕೂಡಲ ಸಂಗಮ ಸ್ವಾಮಿಗಳಿಗೆ ಅವರ ಶಿಷ್ಯರಿಂದ ತೊಂದರೆಯಾಗಿದೆ. ನಾನೇ ಅವರನ್ನು ಕರೆಸಿಕೊಂಡು ಮಾತನಾಡಿದೆ. ವಚನನಾಂದ ಸ್ವಾಮೀಜಿಗಳ ಜೊತೆಗೂ ಮಾತನಾಡಿ ಇಬ್ಬರು ಒಟ್ಟಾಗಬೇಕು ಎಂದು ನಾನು ಮನವಿ ಮಾಡಿದ್ದೇನೆ. ಸ್ವಾಮೀಜಿಗಳು ಒಟ್ಟಾಗುತ್ತೇವೆ ಎನ್ನುವ ನಿಟ್ಟಿನಲ್ಲಿ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು. ಸಂಸದ ಜಗದೀಶ್ ಶೆಟ್ಟರ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು.