ಕುಡತಿನಿ ಪಟ್ಟಣ ಮಾದರಿಯಾಗಿಸುವೆ: ಸಂಸದ ತುಕಾರಾಂ

| Published : Aug 28 2024, 12:52 AM IST

ಕುಡತಿನಿ ಪಟ್ಟಣ ಮಾದರಿಯಾಗಿಸುವೆ: ಸಂಸದ ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ದಿನದಲ್ಲಿ ರಿಂಗ್‌ ರೋಡ್ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳ ಮೂಲಕ ಕುಡತಿನಿ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಮಾಡಲಾಗುವುದು.

ಕುರುಗೋಡು: ಅತಿ ಶೀಘ್ರದಲ್ಲೇ 30 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮುಂದಿನ ದಿನದಲ್ಲಿ ರಿಂಗ್‌ ರೋಡ್ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳ ಮೂಲಕ ಕುಡತಿನಿ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಮಾಡಲಾಗುವುದು ಎಂದು ಸಂಸದ ಈ.ತುಕಾರಾಂ ಹೇಳಿದರು.

ಕುಡತಿನಿ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಭಾಗವಹಿಸಿ, ನಂತರ ಅಧಿಕಾರ ವಹಿಸಿಕೊಂಡ ಕಾಂಗ್ರೆಸ್ ಆಡಳಿತಕ್ಕೆ ಶುಭ ಕೋರಿ ಮಾತನಾಡಿ, ಕುಡತಿನಿ ಪಟ್ಟಣ ಪಂಚಾಯಿತಿ, ಕುರೇಕುಪ್ಪ ಪುರಸಭೆಯುಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿದಿದೆ. ಪುರಸಭೆ, ಪಟ್ಟಣ ಪಂಚಾಯಿತಿಯ ಶ್ರೇಯೋಭಿವೃದ್ಧಿ ಮಾಡುವ ಮೂಲಕ ಜನರ ಹೆಗ್ಗಳಿಕೆಗೆ ಪಾತ್ರರಾಗುವಜತೆಗೆ ಒಳ್ಳೆಯ ಹೆಸರನ್ನು ಮಾಡಿದರೆ, ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿ ಉಳಿಯಲು ಸಾಧ್ಯ. ಕುಡತಿನಿ ರೈಲ್ವೆ ಬ್ರಿಡ್ಜ್‌ ಕಾಮಗಾರಿಯು ಅಕ್ಟೋಬರ್ ಒಳಗೆ ಮುಕ್ತಾಯಗೊಳ್ಳಲಿದೆ ಎಂದರು.

ಕೆಲ ದಿನಗಳಿಂದ ಕುತೂಹಲ ಕೆರಳಿಸಿದ್ದ ಹಾಗೂ ಜಿದ್ದಾಜಿದ್ದಿನಿಂದ ಕೂಡಿದ್ದ ಕುಡತಿನಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವು ಕಾಂಗ್ರೆಸ್‌ ಕೈಗೆ ಜಾರಿದೆ.

ಇಲ್ಲಿನ ಕಚೇರಿಯಲ್ಲಿ ಚುನಾವಣಾಧಿಕಾರಿ ಗುರುರಾಜ ನೇತೃತ್ವದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ೧೯ ಸದಸ್ಯರಲ್ಲಿ ಇಬ್ಬರು ಗೈರಾಗಿದ್ದು, ೧೭ ಸದಸ್ಯರ ಬೆಂಬಲದೊಂದಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ಬಸಮ್ಮಚಂದ್ರಪ್ಪ ಒಂದಬಾಗಲಿ ಹಾಗೂ ಉಪಾಧ್ಯಕ್ಷರಾಗಿ ಕನಕೇರಿ ಪಂಪಾಪತಿ ಆಯ್ಕೆಗೊಂಡರು.

ಈ ಪ್ರಕ್ರಿಯೆಯಲ್ಲಿ ಸದಸ್ಯರಾದ ಟಿ.ಮಂಜುನಾಥ, ವೆಂಕಟರಮಣ ಬಾಬು, ರಾಮಲಿಂಗಪ್ಪ, ಸುನೀಲ್, ಲೆನಿನ್, ಮುಖಂಡರಾದ ವಿಸಿಕೆ ಚಂದ್ರಪ್ಪ, ಸಿ.ದೊಡ್ಡಬಸಪ್ಪ, ದೊಡ್ಡಪ್ಪ, ಬೀಷಣ್ಣ, ವಿ.ರಾಮು, ಮೆಟ್ರಿವೆಂಕಟೇಶ್, ಸಿ.ಡಿ. ದುಗ್ಗೆಪ್ಪ, ಹಾಲಪ್ಪ ಕೆ.ಎಂ, ಎಸ್.ಸುನೀಲ್ಕುಮಾರ್, , ಯು.ದೇವಮ್ಮ, ಗೀತಾ ನಾಗರಾಜ, ಆರ್.ಸುಜಾತ, ಎಸ್.ರತ್ನಮ್ಮ, ಭಾಗ್ಯಶ್ರೀ, ಶಂಕ್ರಮ್ಮ, ಆರ್.ಸಾಲಮ್ಮ, ಇದ್ದರು.

ನಂತರ ಸಂಸದ ಈ.ತುಕಾರಾಂ ಅವರ ಜೊತೆಗೆ ನೂತನ ಅಧ್ಯಕ್ಷೆ, ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.