ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಅತ್ತಾವರ ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ಬಿಜೆಪಿ ಎಸ್ಸಿ ಮೋರ್ಚಾ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಕುದ್ಮುಲ್ ರಂಗರಾವ್ ರವರ 165ನೇ ಜನ್ಮದಿನಾಚರಣೆಯ ಪ್ರಯುಕ್ತ ಶನಿವಾರ ಬಾಬುಗುಡ್ದದಲ್ಲಿರುವ ಸಮಾಧಿಗೆ ಪುಷ್ಪಾರ್ಚನೆ ಹಾಗೂ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಿತು.ಈ ಸಂದರ್ಭ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಈ ದೇಶದಲ್ಲಿ ದಲಿತೋದ್ಧಾರಕ್ಕಾಗಿ ಶ್ರಮಿಸಿದ ಹಲವಾರು ಮಹನೀಯರನ್ನು ಕಾಣಬಹುದು. ಆದರೆ ದಲಿತೋದ್ಧಾರಕ್ಕಾಗಿ ತನ್ನ ಬದುಕನ್ನೇ ಸಮರ್ಪಣೆ ಮಾಡಿದವರು ಎಂದರೆ ನಮ್ಮ ಕುದ್ಮಲ್ ರಂಗರಾಯರು. ದಲಿತರು ಸ್ವಾವಲಂಬಿಯಾಗಿ ಬದುಕಬೇಕು, ಆತ್ಮ ಗಾಂಭೀರ್ಯ ಬೆಳೆಸಿಕೊಳ್ಳಬೇಕೆಂಬುದು ಪೂಜ್ಯರ ಆಶಯವಾಗಿತ್ತು. ಬಡವರ ದೀನದಲಿತರ ವ್ಯಾಜ್ಯಗಳಿಗೆ ಉಚಿತವಾಗಿ ನ್ಯಾಯ ಒದಗಿಸಿ ಬಡವರ ವಕೀಲರೆಂದೇ ಪ್ರಸಿದ್ಧಿ ಪಡೆದಿದ್ದರು. ದಲಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ವಕೀಲ ವೃತ್ತಿಯನ್ನೇ ತೊರೆದು ಬದುಕನ್ನು ಸಮಾಜಕ್ಕೆ ಮುಡಿಪಾಗಿಟ್ಟರು.ಡಿಸಿಎಂ ಸಂಸ್ಥೆ ಸ್ಥಾಪಿಸಿ ಕಂಕನಾಡಿ, ಮೂಲ್ಕಿ, ಬೋಳೂರು, ಅತ್ತಾವರ, ಬಾಬುಗುಡ್ಡೆ, ದಡ್ಡಲ್ ಕಾಡು ಮುಂತಾದ ಕಡೆಗಳಲ್ಲಿ ದಲಿತರಿಗೆ ಶಾಲೆಗಳನ್ನು ತೆರೆದು ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿ ವಿದ್ಯಾರ್ಥಿ ನಿಲಯ ಸ್ಥಾಪಿಸಿದ್ದರು. ಸಮಾಜದಲ್ಲಿ ರಂಗರಾವ್ ಅವರಿಗೆ ಹೆಜ್ಜೆ ಹೆಜ್ಜೆಗೂ ಅವಮಾನ ಸಂಕಟಗಳು ಎದುರಾದಾಗೆಲ್ಲ ಪತ್ನಿ ರುಕ್ಮಿಣಿಯವರು ಧೈರ್ಯ ತುಂಬುತ್ತಿದ್ದರು. ಆ ಮಹಾತಾಯಿಯನ್ನು ಕೂಡ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಅತ್ಯವಶ್ಯಕ ಎಂದರು.ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಾದಿರಾಜ್ ಬೆಂಗಳೂರು, ಪ್ರೇಮಾನಂದ ಶೆಟ್ಟಿ, ಟ್ರಸ್ಟಿನ ಅಧ್ಯಕ್ಷರಾದ ಬಿ.ಆರ್ ಹೃದಯನಾಥ್, ಪಾಲಿಕೆ ಸದಸ್ಯರಾದ ಭರತ್ ಕುಮಾರ್, ಶೈಲೇಶ್, ಮನೋಜ್ ಕೋಡಿಕಲ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಮುಖರಾದ ಮೋಹನ್ ಪೂಜಾರಿ, ನಂದನ್ ಮಲ್ಯ, ಪ್ರಕಾಶ್ ಗರೋಡಿ, ಯತೀಶ್, ಶ್ಯಾಮ ಕರ್ಕೇರ, ವಸಂತ ಬಂಗೇರ, ಅನಿತಾ ದಯಾಕರ್, ಶಶಿಕಾಂತ್, ಶಿವಪ್ಪ ಅನಂತೂರು, ರವಿ ಕಾಪಿಕಾಡ್, ಪ್ರಜ್ವಲ್, ವಿನಯ ನೇತ್ರ, ಶಿವಪ್ರಸಾದ್ ಕೊಕ್ಕಡ, ಗೀತಾ, ಜಯಚಂದ್ರ ಮತ್ತಿತರರಿದ್ದರು.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರಘುವೀರ್ ಬಾಬುಗುಡ್ಡೆ ಸ್ವಾಗತಿಸಿ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))