ರಾಜ್ಯಕ್ಕೆ 5ನೇ ರ್‍ಯಾಂಕ್‌ ಪಡೆದ ಸಾವಿತ್ರಿಗೆ ಸನ್ಮಾನ

| Published : Apr 13 2024, 01:03 AM IST

ಸಾರಾಂಶ

ಐಗಳಿ: ಸಮೀಪದ ಕಕಮರಿ ಗ್ರಾಮದ ಸದ್ಗುರು ರಾಯಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾವಿತ್ರಿ ಮಲ್ಲಿಕಾರ್ಜುನ ಮೈಗೂರ 592 ಅಂಕ ಪಡೆದು ರಾಜ್ಯಕ್ಕೆ 5ನೇ ರ್‍ಯಾಂಕ್‌ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕನ್ನಡ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಶಿಕ್ಷಣ ವಿಷಯದಲ್ಲಿ ನೂರಕ್ಕೆ ನೂರರಷ್ಟು, ಇಂಗ್ಲಿಷ್‌ 95 ಇತಿಹಾಸ 97 ಅಂಕ ಪಡೆದಿದ್ದಾಳೆ.

ಕನ್ನಡಪ್ರಭ ವಾರ್ತೆ ಐಗಳಿ: ಸಮೀಪದ ಕಕಮರಿ ಗ್ರಾಮದ ಸದ್ಗುರು ರಾಯಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾವಿತ್ರಿ ಮಲ್ಲಿಕಾರ್ಜುನ ಮೈಗೂರ 592 ಅಂಕ ಪಡೆದು ರಾಜ್ಯಕ್ಕೆ 5ನೇ ರ್‍ಯಾಂಕ್‌ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕನ್ನಡ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಶಿಕ್ಷಣ ವಿಷಯದಲ್ಲಿ ನೂರಕ್ಕೆ ನೂರರಷ್ಟು, ಇಂಗ್ಲಿಷ್‌ 95 ಇತಿಹಾಸ 97 ಅಂಕ ಪಡೆದಿದ್ದಾಳೆ.

ಸದ್ಗುರು ರಾಯಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧ್ಯಕ್ಷ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ಅವರು ಶ್ರೀಮಠದ ಪರ ಸಾವಿತ್ರಿಯನ್ನು ಸತ್ಕರಿಸಿದರು. ಈ ವೇಳೆ ನೀಲಮ್ಮ ತಾಯಿಯವರು, ಕಲ್ಮೇಶ ಬಸರಗಿ ಹಾಗೂ ಸಾವಿತ್ರಿ ತಂದೆ ಮಲ್ಲಿಕಾರ್ಜುನ ಮೈಗೂರ, ಐರಾವತಿ ಗುಡ್ಡಾಪುರ ಇದ್ದರು.ಕೋಟ್‌...ನಮ್ಮ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಜೊತೆಗೆ ಮಕ್ಕಳಿಗೆ ಸಂಸ್ಕಾರ ಸಹ ನೀಡುತ್ತಲಿದ್ದೇವೆ. ಸಾವಿತ್ರಿ ಮೈಗೂರ ಇವರ ತಂದೆ ಬಡತನದಿಂದ ಬಂದವರು. ರಾಜ್ಯಕ್ಕೆ 5ನೇ ರ್‍ಯಾಂಕ್‌ ಪಡೆದು ಸಂಸ್ಥೆಗೆ ಹಾಗೂ ಕಕಮರಿ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆಂದು ಶ್ವಾಘಿಸಿದರು.ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ, ಸದ್ಗುರು ರಾಯಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧ್ಯಕ್ಷರು.