ಕುಕ್ಕೆ: ನಿವೃತ್ತ ಮಾವುತಗೆ ದೇವಳದ ಆನೆ ಹಾರಾರ್ಪಣೆ

| Published : Jan 02 2024, 02:15 AM IST

ಕುಕ್ಕೆ: ನಿವೃತ್ತ ಮಾವುತಗೆ ದೇವಳದ ಆನೆ ಹಾರಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ದೇವಸ್ಥಾನದಲ್ಲಿ ಶ್ರೀ ದೇವಳದ ಆನೆ ಯಶಸ್ವಿಗೆ ತರಬೇತಿದಾರನಾಗಿ ಮತ್ತು ಮಾವುತನಾಗಿ ಸುಮಾರು ೧೫ ವರ್ಷ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ದೇವಳದ ಆಡಳಿತ ಮಂಡಳಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆನೆ ಯಶಸ್ವಿಗೆ ಮಾವುತನಾಗಿದ್ದ ಶ್ರೀನಿವಾಸ ಗೌಡ ಧರ್ಮಸ್ಥಳ ಭಾನುವಾರ ನಿವೃತ್ತರಾದರು. ವಿದಾಯ ಸಮಾರಂಭದ ಸಮಯದಲ್ಲಿ ತನ್ನ ನೆಚ್ಚಿನ ಮಾವುತನಿಗೆ ಯಶಸ್ವಿ ತನ್ನ ಸೊಂಡಿಲಿನಿಂದ ಹಾರ ಹಾಕಿ ಮತ್ತು ಸೊಂಡಿಲನ್ನು ಶ್ರೀನಿವಾಸರ ತಲೆಯ ಮೇಲಿರಿಸಿ ಆಶೀರ್ವದಿಸಿತು. ದೇವಸ್ಥಾನದಲ್ಲಿ ಶ್ರೀ ದೇವಳದ ಆನೆ ಯಶಸ್ವಿಗೆ ತರಬೇತಿದಾರನಾಗಿ ಮತ್ತು ಮಾವುತನಾಗಿ ಸುಮಾರು ೧೫ ವರ್ಷ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ದೇವಳದ ಆಡಳಿತ ಮಂಡಳಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಸನ್ಮಾನಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀವತ್ಸ ಬೆಂಗಳೂರು, ಶೋಭಾ ಗಿರಿಧರ್,ಶಿಷ್ಠಾಚಾರ ಅಧಿಕಾರಿ ಜಯರಾಂ ರಾವ್, ಮಾವುತ ಗುರುಪ್ರಸಾದ್ ಮಲ್ಲಿಗೆಮಜಲು,ಶ್ರೀ ದೇವಳದ ನೋಣಪ್ಪ ಗೌಡ, ಅಶೋಕ್ ಅತ್ಯಡ್ಕ ಇದ್ದರು.