ಕುಕ್ಕೆ ಸುಬ್ರಹ್ಮಣ್ಯ: ಗುಡುಗು ಸಹಿತ ಗಾಳಿ, ಮಳೆ

| Published : Oct 24 2024, 12:51 AM IST

ಸಾರಾಂಶ

ಕಡಬ, ನೆಟ್ಟಣ, ಬಿಳಿನೆಲೆ, ಸುಬ್ರಹ್ಮಣ್ಯ, ಬಳ್ಪ, ಕೊಲ್ಲಮೊಗ್ರು, ಹರಿಹರ ಪಳ್ಳತ್ತಡ್ಕ, ಗುತ್ತಿಗಾರು ಸೇರಿದಂತೆ ವಿವಿಧೆಡೆ ಬುಧವಾರ ಸಂಜೆ ಮಳೆಯಾಗಿತ್ತು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಕಡಬ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಭಾರಿ ಗಾಳಿ ಮಳೆಯಾಗಿದ್ದು ನೆಟ್ಟಣ ಸಮೀಪ ಹೆದ್ದಾರಿಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯುಂಟಾಯಿತು.ಭಾರಿ ಗಾಳಿ ಮಳೆಗೆ ಕಡಬ-ಸುಬ್ರಹ್ಮಣ್ಯ ಹೆದ್ದಾರಿಯ ನೆಟ್ಟಣ ಸಮೀಪದ ಮರದ ಡಿಪೋ ಬಳಿ ಹೆದ್ದಾರಿಗೆ 2-3 ಮರಗಳು ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಯಿತು‌. ಅರಣ್ಯ ಇಲಾಖೆ ತಂಡ ರಸ್ತೆಗೆ ಬಿದ್ದ ಮರ ತೆರವು ಮಾಡಿತು. ಘಟನೆಯಲ್ಲಿ ಕೆಲ ವಿದ್ಯುತ್ ಕಂಬಗಳಿಗೂ ಹಾನಿಯುಂಟಾಗಿದೆ. ಕಡಬದಲ್ಲಿ ನಡೆಯುತ್ತಿದ್ದ ಕ್ರೀಡಾಕೂಟದಲ್ಲಿ ಅಳವಡಿಸಲಾಗಿದ್ದ ಸೀಟುಗಳು ಗಾಳಿಗೆ ಹಾರಿ ಹೋಗಿದೆ.ಕಡಬ, ನೆಟ್ಟಣ, ಬಿಳಿನೆಲೆ, ಸುಬ್ರಹ್ಮಣ್ಯ, ಬಳ್ಪ, ಕೊಲ್ಲಮೊಗ್ರು, ಹರಿಹರ ಪಳ್ಳತ್ತಡ್ಕ, ಗುತ್ತಿಗಾರು ಸೇರಿದಂತೆ ವಿವಿಧೆಡೆ ಬುಧವಾರ ಸಂಜೆ ಮಳೆಯಾಗಿತ್ತು.