ಕುಕ್ಕಿಕಟ್ಟೆ: ಕಳ್ಳರ ಓಡಾಟ, ಜನರಲ್ಲಿ ಆತಂಕ

| Published : Sep 04 2025, 01:01 AM IST

ಸಾರಾಂಶ

ಕುಕ್ಕಿಕಟ್ಟೆ ಸಮೀಪದ ಸುಬ್ರಹ್ಮಣ್ಯ ನಗರದಲ್ಲಿ ಬುಧವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಮೂವರು ಮುಸುಕುಧಾರಿಗಳು ಓಡಾಡುತ್ತಿದ್ದುದು ಸಿಸಿ ಕ್ಯಾಮರಗಳಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಉಡುಪಿ: ಇಲ್ಲಿನ ಕುಕ್ಕಿಕಟ್ಟೆ ಸಮೀಪದ ಸುಬ್ರಹ್ಮಣ್ಯ ನಗರದಲ್ಲಿ ಬುಧವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಮೂವರು ಮುಸುಕುಧಾರಿಗಳು ಓಡಾಡುತ್ತಿದ್ದುದು ಸಿಸಿ ಕ್ಯಾಮರಗಳಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಇದೇ ಮೂವರು ಕಳ್ಳರು ಸುಬ್ರಹ್ಮಣ್ಯ ನಗರದ ವಿಠಲ ಪೂಜಾರಿ ಅವರ ಮನೆಗೆ ನುಗ್ಗಿದ್ದು, ಆದರೆ ಬೆಲೆಬಾಳುವ ವಸ್ತುಗಳು ಏನೂ ಸಿಗದ ಕಾರಣ ಹಿಂದಕ್ಕೆ ಹೋಗಿದ್ದಾರೆ.ನಂತರ ಹತ್ತಿರದ ಮತ್ತೊಂದು ಮನೆಗೆ ಬಾಗಿಲಿನ ಬೀಗ ತೆಗೆಯಲು ಪ್ರಯತ್ನಿಸಿದರು. ಆಗ ಮನೆಯವರು ಎಚ್ಚರಗೊಂಡು ದೀಪ ಹಾಕಿದಾಗ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ದೃಶ್ಯ ಮತ್ತು ಇಲ್ಲಿನ ರಸ್ತೆಗಳಲ್ಲಿ ಈ ಮೂವರ ಕಳ್ಳರು ಓಡಾಡುವ ದೃಶ್ಯಗಳು ಸಿಸಿ ಕ್ಯಾಮರಗಳಲ್ಲಿ ಸೆರೆಯಾಗಿವೆ.ಈ ಬಗ್ಗೆ ಮಾಹಿತಿ ಪಡೆದ ಉಡುಪಿ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸಿಸಿ ಕ್ಯಾಮರದ ದೃಶ್ಯಾವಳಿಗಳ‍ನ್ನು ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ.