ಕುಕ್ಕುವಾಡೇಶ್ವರಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ

| Published : Dec 24 2024, 12:49 AM IST

ಸಾರಾಂಶ

ಪಟ್ಟಣದ ಶಿವಾಜಿ ನಗರದಲ್ಲಿರುವ ನಗರ ದೇವತೆ ಶ್ರೀ ಕುಕ್ಕುವಾಡ ಅಂಬಭವಾನಿ ಅಮ್ಮನವರ ಜಾತ್ರೆ ಮತ್ತು ಮಹಾ ಕಾರ್ತಿಕೋತ್ಸವವು ಡಿಸೆಂಬರ್ 23ರ ಸೋಮವಾರದಿಂದ 6ದಿನಗಳ ವರೆಗೆ ನಡೆಯಲಿದೆ. ಮಹೋತ್ಸವವು ಸೋಮವಾರ ಬೆಳ್ಳಿಗ್ಗೆ ದೇವಾಲಯದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ಸಹಸ್ರ ನಾಮರ್ಚನೆ ನಡೆದು ಮಹಾ ಮಂಗಳಾರತಿಯನ್ನು ಮಾಡಿ ಮತ್ತು ಝಂಡವನ್ನು ಆರೋಹಣ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭವಾರ್ತೆ ಚನ್ನಗಿರಿ

ಪಟ್ಟಣದ ಶಿವಾಜಿ ನಗರದಲ್ಲಿರುವ ನಗರ ದೇವತೆ ಶ್ರೀ ಕುಕ್ಕುವಾಡ ಅಂಬಭವಾನಿ ಅಮ್ಮನವರ ಜಾತ್ರೆ ಮತ್ತು ಮಹಾ ಕಾರ್ತಿಕೋತ್ಸವವು ಡಿಸೆಂಬರ್ 23ರ ಸೋಮವಾರದಿಂದ 6ದಿನಗಳ ವರೆಗೆ ನಡೆಯಲಿದೆ. ಮಹೋತ್ಸವವು ಸೋಮವಾರ ಬೆಳ್ಳಿಗ್ಗೆ ದೇವಾಲಯದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ಸಹಸ್ರ ನಾಮರ್ಚನೆ ನಡೆದು ಮಹಾ ಮಂಗಳಾರತಿಯನ್ನು ಮಾಡಿ ಮತ್ತು ಝಂಡವನ್ನು ಆರೋಹಣ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.ಈ ಬಾರಿ ನಡೆಯುತ್ತಿರುವ ಜಾತ್ರಾ ಮಹೋತ್ಸವವು ವಿಷೇಶ ಮತ್ತು ವಿಶಿಷ್ಠ ರೀತಿಯಲ್ಲಿ ಆಚರಣೆ ಮಾಡುತ್ತಿದ್ದುಮ, ಪಟ್ಟಣದ ಡಿಗ್ರಿ ಕಾಲೇಜು ಬಳಿಯಿಂದ ಎ.ಪಿ.ಎಂ.ಸಿ ಯ ವರೆಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.ಮುಖ್ಯ ಬಸ್ ನಿಲ್ದಾಣದ ಕಲ್ಲುಸಾಗರ ರಸ್ತೆಯ ಮಹಾದ್ವಾರದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹ ಮತ್ತು ಗಣಪತಿ ವೃತ್ತದ ಪ್ರವೇಶದ್ವಾರದಲ್ಲಿ ಸ್ಥಾಪಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ವಿಗ್ರಹಗಳನ್ನು ಸ್ಥಾಪಿಸಿದ್ದರೆ, ಇಲ್ಲಿನ ಮೇಲಿನ ಬಸ್ ನಿಲ್ದಾಣ, ಕಗತೂರು ರಸ್ತೆ, ಗಾಂಧಿವೃತ್ತದಲ್ಲಿ ಚಾಮುಂಡೇಶ್ವರಿ ದೇವಿ ಇರುವ ವಿದ್ಯುತ್ ಬೋರ್ಡಗಳಿಂದ ಬೆಳಕು ಸೂಸುವ ದೇವರ ಚಿತ್ರಗಳು ಎಲ್ಲರ ಗಮನ ಸೆಳೆಯುತ್ತಿವೆ.ಜಾತ್ರೆ ಮತ್ತು ಕಾರ್ತಿಕೋತ್ಸವದ ನಿಮಿತ್ತವಾಗಿ ಡಿಸೆಂಬರ್ 25ರಿಂದ 27ರ ವರೆಗೆ ನಡೆಯಲಿರುವ ಕುಸ್ತಿ ಪಂದ್ಯಕ್ಕಾಗಿ ವಿಶಿಷ್ಟ ರೀತಿಯಲ್ಲಿ ಕುಸ್ತಿ ಅಖಾಡವನ್ನು ತಾಲೂಕು ಕ್ರೀಡಾಂಗಣದಲ್ಲಿ 60ಅಡಿ ಸುತ್ತಳತೆಯಲ್ಲಿ ನೆಲದಿಂದ 3ಅಡಿ ಎತ್ತರಕ್ಕೆ ಸುತ್ತಲೂ ಕಟ್ಟೆಯನ್ನು ಕಟ್ಟಿ, ಕೆಂಪು ಮಣ್ಣನ್ನು ತುಂಬಿಸಲಾಗಿದೆ.

ಇದು ಪಂಜಾಬ್ ರಾಜ್ಯದ ಪಟಲಾದಲ್ಲಿರುವ ಕುಸ್ತಿ ಅಖಾಡದ ಮಾದರಿಯಾಗಿದ್ದು, ಈ ಕುಸ್ತಿ ಅಖಾಡದಲ್ಲಿ ಏಕಕಾಲಕ್ಕೆ ಮೂವರ ಜೊತೆ ಕುಸ್ತಿ ಆಡುವಷ್ಟು ವಿಶಾಲವಾದ ಅಖಾಡ ಇದಾಗಿದೆ ಎಂದು ಕುಸ್ತಿ ಅಖಾಡ ನಿರ್ಮಾಣದ ಮಾರ್ಗದರ್ಶಿ ಮತ್ತು ಉಸ್ತುವಾರಿ ನೋಡಿಕೊಳ್ಳುವ ಪಟ್ಟಣದ ವಾಸಿ ರಾಷ್ಟ್ರೀಯ ಕುಸ್ತಿಪಟು ಶ್ರೀನಿವಾಸ್ ಹೇಳುತ್ತಾರೆ.