ನಾಪೋಕ್ಲು: ಜಿಲ್ಲಾ ಕುಲಾಲ ಕುಂಬಾರ ಕ್ರೀಡೋತ್ಸವದ ಸಮ್ಮಿಲನ 2026 ಆಮಂತ್ರಣ ಪತ್ರಿಕೆ ಲೋಕಾರ್ಪಣೆ ಮಡಿಕೇರಿಯ ಶ್ರೀ ಕೋಟೆ ಗಣಪತಿ ದೇವಸ್ಥಾನದಲ್ಲಿ ಜರುಗಿತು.
ಕೊಡಗು ಜಿಲ್ಲಾ ಕುಲಾಲ ಕುಂಬಾರ ಬಾಂಧವರಿಗೆ ಕ್ರೀಡೋತ್ಸವವನ್ನು ಕೊಡಗು ಜಿಲ್ಲಾ (ಕುಂಬಾರ)ರ ಸಂಘ ಮಡಿಕೇರಿ ಇದರ ನೇತೃತ್ವದಲ್ಲಿ ಜಿಲ್ಲಾ ಯುವ ಘಟಕ ಮತ್ತು ಜಿಲ್ಲಾ ಮಹಿಳಾ ಘಟಕದ ಸಹಯೋಗದಲ್ಲಿ ಮೇ 16, 17ರಂದು ಮಡಿಕೇರಿಯ ಮ್ಯಾನ್ಸ್ ಕಾಂಪೌಂಡಿನ ಕೆಳಗಿನ ಮೈದಾನದಲ್ಲಿ ಆಯೋಜಿಸಲಾಗಿದೆ. ಇದರ ಸಮ್ಮಿಲನ-2026 ಆಮಂತ್ರಣ ಪತ್ರಿಕೆಯನ್ನು ಮಡಿಕೇರಿಯ ಶ್ರೀ ಕೋಟೆ ಗಣಪತಿ ದೇವಸ್ಥಾನದಲ್ಲಿ ಲೋಕಾರ್ಪಣೆ ಮಾಡಲಾಯಿತು.ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸುವ ಮೂಲಕ ಬಿಡುಗಡೆ ಮಾಡಿದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಅಧ್ಯಕ್ಷ ದಾಮೋದರ್ ಕೆ.ಕೆ. ಮಾತನಾಡಿ, ಮೇ 16ರಂದು ಬೆಳಿಗ್ಗೆ 7ಕ್ಕೆ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕ್ರೀಡಾ ಜ್ಯೋತಿಯೊಂದಿಗೆ ಮೈದಾನಕ್ಕೆ ಕಾಲ್ನಡಿಗೆಯ ಮೂಲಕ ಸಾಗಿ ಗಣ್ಯರ ಸಮ್ಮುಖದಲ್ಲಿ ಕ್ರೀಡೋತ್ಸವ ಉದ್ಘಾಟನೆಗೊಳ್ಳಲಿದೆ ಎಂದರು.ಮೇ 16ರಂದು ಜಿಲ್ಲೆಯಾದ್ಯಂತ ಆಯ್ಕೆಯಾದ ತಂಡಗಳ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, 17ರಂದು ಬೆಳಿಗ್ಗೆಯಿಂದಲೇ ಮಹಿಳೆಯರು, ಯುವಕರು, ಮಕ್ಕಳು ಮತ್ತು ಹಿರಿಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮೇ 17ರಂದು ಗಣ್ಯರ ಸಮ್ಮುಖದಲ್ಲಿ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ನಡೆಯಲಿದೆ ಎಂದು ಹೇಳಿದರು.ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕಾಂತಿಮಣಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಜೆ.ಪಿ. ಕುಲಾಲ್ ಮಾತನಾಡಿದರು.
ಜಿಲ್ಲಾ ಕುಲಾಲ ಕುಂಬಾರ ಸಂಘದ ಉಪಾಧ್ಯಕ್ಷ ಎಂ.ಡಿ. ಸುರೇಶ್ ಕುಲಾಲ್, ಜಿಲ್ಲಾ ಘಟಕದ ಪದಾಧಿಕಾರಿಗಳು, ಯುವ ಘಟಕದ ಪದಾಧಿಕಾರಿಗಳು ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.ಜಿಲ್ಲಾ ಕುಲಾಲ ಕುಂಬಾರ ಕ್ರೀಡೋತ್ಸವದ ಸಮ್ಮಿಲನ 2026 ಆಮಂತ್ರಣ ಪತ್ರಿಕೆ ಲೋಕಾರ್ಪಣೆ