ಕನ್ನಡದ ಕುಲಗುರು ಡಾ. ಚನ್ನಬಸವ ಪಟ್ಟದ್ದೇವರು

| Published : Apr 23 2025, 02:02 AM IST

ಸಾರಾಂಶ

Kulguru of Kannada Dr. Channabasava Patta

-ಸಚಿವ ಈಶ್ವರ ಖಂಡ್ರೆ ಅಭಿಮತ । ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ವಚನ ಜಾತ್ರೆ-2025

--

ಕನ್ನಡಪ್ರಭ ವಾರ್ತೆ ಭಾಲ್ಕಿ

ಶತಾಯುಷಿ ಲಿಂ. ಡಾ. ಚನ್ನಬಸವ ಪಟ್ಟದ್ದೇವರು ಈ ಭಾಗದ ನಡೆದಾಡುವ ದೇವರಾಗಿದ್ದರಲ್ಲದೆ ಕನ್ನಡದ ಕುಲಗುರು ಆಗಿದ್ದರು ಅವರು ಹೊಂದಿದ್ದ ಸಮ ಸಮಾಜದ ಕನಸನ್ನು ನನಸಾಗಿಸುವಲ್ಲಿ ಶ್ರಮಿಸೋಣ ಅದಕ್ಕಾಗಿ ಪ್ರಯತ್ನಿಸುವ ಸಂಕಲ್ಪ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಅವರು ಚನ್ನಬಸವಾಶ್ರಮದ ಪರಿಸರದಲ್ಲಿ ವಚನ ಜಾತ್ರೆ- 2025ರ ಲಿಂ. ಡಾ. ಚನ್ನಬಸವ ಪಟ್ಟದ್ದೇವರ 26ನೇ ಸ್ಮರಣೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿ, ಡಾ. ಪಟ್ಟದ್ದೇವರು, ಧಾರ್ಮಿಕ, ಆಧ್ಯಾತ್ಮಿಕ ಚಿಂತಕರಾಗಿದ್ದರು. ಅಂಧ್ರಶ್ರದ್ಧೆಯ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ್ದರು ಎಂದರು.

ಪಟ್ಟದ್ದೇವರ ಅತ್ಯಂತ ಆಪ್ತರಾಗಿದ್ದವರಲ್ಲಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಕಾರ್ಯಾವಧಿಯಲ್ಲಿಯೂ ಆಗಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಪಟ್ಟದ್ದೇವರ ಆಶೀರ್ವಾದವಿದೆ. ಶೈಕ್ಷಣಿಕ ಪ್ರಗತಿಗಾಗಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಪಟ್ಟದ್ದೇವರು ಸ್ಥಾಪಿಸಿ ಅಂದು ಶಾಸಕರಾಗಿದ್ದ ಭೀಮಣ್ಣ ಖಂಡ್ರೆ ಅವರ ಹೆಗಲಿಗೆ ನೀಡಿ ಬೃಹದಾಕಾರದ ಶೈಕ್ಷಣಿಕ ಸಂಸ್ಥೆಯನ್ನು ಬೆಳೆಸುವಲ್ಲಿ ಆಶೀರ್ವದಿಸಿದರು ಎಂದರು.

ಡಾ.ಬಸವಲಿಂಗ ಪಟ್ಟದ್ದೇವರು ಸಹ ಅವರ ನಡೆಯನ್ನೇ ಅನುಸರಿಸಿ ಶೈಕ್ಷಣಿಕ ಸಂಸ್ಥೆ ಆರಂಭಿಸಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಈ ರಾಜ್ಯಕ್ಕೆ ನೀಡುತ್ತಿದ್ದಾರೆ ಅವರ ದಾರಿಯಲ್ಲಿ ಹಿರೇಮಠ ಸಂಸ್ಥಾನದ ಈಗಿನ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನಡೆಯುತ್ತಿದ್ದಾರೆ ಎಂದರು.

ಸಮಾನತೆ. ಸ್ವಾತಂತ್ರ್ಯ, ಕಾಯಕ, ದಾಸೋಹ ಹಾಗೂ ಸಹೋದರತ್ವದ ಜೊತೆಗೆ ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ಭಂಡಾರವನ್ನು ಮಹಾಮಾನವತಾವಾದಿ ವಿಶ್ವಗುರು ಬಸವಣ್ಣ ನೀಡಿ ಹೋಗಿದ್ದಾರೆ.

ವಿಶ್ವದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ತೋರಿಸಿಕೊಟ್ಟಿದ್ದು ಬಸವಣ್ಣ, ಬಸವಾದಿ ಶರಣರು ಸ್ಥಾಪಿಸಿದ್ದ ಅನುಭವ ಮಂಟಪ ನಮ್ಮ ಹೆಮ್ಮೆಯಾಗಿದೆ ಒಂದು ವರ್ಷದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಗೊಳ್ಳಲಿದೆ ಎಂದರು.

ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ್‌ ನಿರೂಪಿಸಿದರೆ ಭಾಲ್ಕಿಯ ಡಾ. ಅಮೀತ ಅಷ್ಟೂರೆ ವಂದಿಸಿದರು.

ಶಿವಕುಮಾರ ಪಾಂಚಾಳ ತಂಡದಿಂದ ವಚನ ಸಂಗೀತ ಕಾರ್ಯಕ್ರಮ ನಡೆದು ಬೀದರ್‌ನ ಉಷಾ ಪ್ರಭಾಕರ ತಂಡದಿಂದ ವಚನ ನೃತ್ಯ ಪ್ರಸ್ತುತಪಡಿಸಲಾಯಿತು.

ರಾಜ್ಯಪಾಲರಾದ ಥಾವರಸಿಂಗ್‌ ಗೆಹ್ಲೋಟ್‌, ಅಥಿಣಿ ಶ್ರೀಗಳು, ಅನುಭವ ಮಂಟಪ ಅಧ್ಯಕ್ಷರಾದ ನಾಡೋಜ ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಸಂಸದ ಸಾಗರ ಖಂಡ್ರೆ, ಮಾಜಿ ಸಚಿವ ರಾಜಶೇರ ಪಾಟೀಲ್‌, ಮಾಜಿ ಶಾಸಕ ಪ್ರಕಾಶ ಖಂಡ್ರೆ ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ ಸಿದ್ರಾಮ್‌, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ ಬದೋಲೆ ಹಾಗೂ ಎಸ್‌ಪಿ ಪ್ರದೀಪ ಗುಂಟಿ ಸೇರಿದಂತೆ ಮತ್ತಿತರರು ಇದ್ದರು.

--

ಫೈಲ್‌ 22ಬಿಡಿ2