ಕುಮಾರಸ್ವಾಮಿಯವರು ಚನ್ನಪಟ್ಟಣ ಸೋಲಿನಿಂದ ಬೇಸತ್ತಿದ್ದಾರೆ: ಕೃಷ್ಣಬೈರೇಗೌಡ

| Published : Jan 09 2025, 12:45 AM IST

ಕುಮಾರಸ್ವಾಮಿಯವರು ಚನ್ನಪಟ್ಟಣ ಸೋಲಿನಿಂದ ಬೇಸತ್ತಿದ್ದಾರೆ: ಕೃಷ್ಣಬೈರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸತ್ ಚುನಾವಣೆಯಲ್ಲಿ ಜೆಡಿಎಸ್ ನಿಂದ ಬಿಜೆಪಿಯವರು ಏನೆಲ್ಲಾ ಮತಗಳನ್ನು ಹಾಕಿಸಿಕೊಳ್ಳಬೇಕೋ ಹಾಕಿಸಿಕೊಂಡು ಗೆದ್ದರು. ಆದರೆ ಉಪಚುನಾವಣೆಯಲ್ಲಿ ಸ್ವತಃ ಕುಮಾರಸ್ವಾಮಿಯವರ ಮಗ ನಿಂತಾಗ, ಈ ಹಿಂದೆ ದಳ ಹಾಗೂ ಬಿಜೆಪಿ ಎದುರಾಳಿಯಾಗಿ ಸ್ಪರ್ಧಿಸಿದಾಗ ದಳಕ್ಕೆ ಎಷ್ಟು ಮತಗಳು ಬಂದಿದ್ದವೋ, ಹಿಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೂ ಅದಕ್ಕಿಂತ 12 ಸಾವಿರ ಮತ ಕಡಿಮೆಯಾಗಿದೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯದಲ್ಲಿ 60 ಪರ್ಸೆಂಟ್ ಸರ್ಕಾರವಿದೆ ಎಂಬ ಆರೋಪ ಮಾಡಿದ್ದರು. ಈ ಆರೋಪಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ, ಕುಮಾರಸ್ವಾಮಿಯವರು ಚನ್ನಪಟ್ಟಣ ಉಪಚುನಾವಣೆಯ ಸೋಲಿನಿಂದ ಬೇಸತ್ತಿದ್ದಾರೆ ಎಂದು ಕೌಂಟರ್ ಕೊಟ್ಟರು.

ಈ ಕುರಿತು ಗುಡಿಬಂಡೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಮತಗಳಿಗಿಂತ ಕಾಂಗ್ರೆಸ್ ಹೆಚ್ಚು ಮತ ಪಡೆದುಕೊಂಡಿದೆ. ಜೆಡಿಎಸ್- ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೂ ಸಹ ಕಳೆದ ಬಾರಿ ಬಿಜೆಪಿ ಪಡೆದುಕೊಂಡಿದ್ದಕ್ಕಿಂತ 12 ಸಾವಿರ ಕಡಿಮೆ ಮತಗಳನ್ನು ಪಡೆದುಕೊಂಡಿದ್ದಾರೆ. ಕುಮಾರಸ್ವಾಮಿಯವರಿಗೆ ಈ ಮೂಲಕ ಬಿಜೆಪಿಯವರು ದೋಖಾ ಮಾಡಿದ್ದಾರೆ ಎಂದರು.

ಸಂಸತ್ ಚುನಾವಣೆಯಲ್ಲಿ ಜೆಡಿಎಸ್ ನಿಂದ ಬಿಜೆಪಿಯವರು ಏನೆಲ್ಲಾ ಮತಗಳನ್ನು ಹಾಕಿಸಿಕೊಳ್ಳಬೇಕೋ ಹಾಕಿಸಿಕೊಂಡು ಗೆದ್ದರು. ಆದರೆ ಉಪಚುನಾವಣೆಯಲ್ಲಿ ಸ್ವತಃ ಕುಮಾರಸ್ವಾಮಿಯವರ ಮಗ ನಿಂತಾಗ, ಈ ಹಿಂದೆ ದಳ ಹಾಗೂ ಬಿಜೆಪಿ ಎದುರಾಳಿಯಾಗಿ ಸ್ಪರ್ಧಿಸಿದಾಗ ದಳಕ್ಕೆ ಎಷ್ಟು ಮತಗಳು ಬಂದಿದ್ದವೋ, ಹಿಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೂ ಅದಕ್ಕಿಂತ 12 ಸಾವಿರ ಮತ ಕಡಿಮೆಯಾಗಿದೆ. ಅಂದರೆ ಬಿಜೆಪಿಯ ಮತಗಳು ಎಲ್ಲಿ ಹೋದವು? ಇದರಿಂದ ಬಿಜೆಪಿಯವರ ಮೇಲೆ ಆರೋಪ ಮಾಡಲು ಆಗದೇ ಬೇರೆಯವರ ಮೇಲೆ ಹಿಟ್ ಆ್ಯಂಡ್ ರನ್ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಕೈಯಲ್ಲಿಯೇ ಇದೆಯಲ್ಲ ಇಡಿ, ಸಿಬಿಐ. ಅವರನ್ನು ಛೂ ಬಿಟ್ಟು ಏನೆಲ್ಲಾ ಮಾಡುತ್ತಾರೋ ಮಾಡಲಿ, ಎಲ್ಲವನ್ನೂ ನಾವು ಎದುರಿಸುತ್ತೇವೆ ಎಂದರು.

ಡಿನ್ನರ್ ಪಾಲಿಟಿಕ್ಸ್ ಬಗ್ಗೆ ಮಾತನಾಡಿ, ಎಲ್ಲರಿಗೂ ಅಧಿಕಾರದ ಮೇಲೆ ಆಸೆಯಿರುತ್ತದೆ. ಡಿನ್ನರ್ ಗಳು ಅವರವರ ವೈಯಕ್ತಿಕ ವಿಚಾರವಾಗಿದೆ. ಸಾರ್ವಜನಿಕ ಜೀವನದಲ್ಲಿದ್ದಾಗ ನಾವ್ಯಾರೂ ಸನ್ಯಾಸಿಗಳಲ್ಲ. ಒಂದು ಅಧಿಕಾರ ಸಿಕ್ಕಾಗ ಮತ್ತೊಂದು ಅಧಿಕಾರದ ಮೇಲೆ ಆಸೆಯಾಗುವುದು ಸ್ವಾಭಾವಿಕ, ರಾಜಕೀಯದಲ್ಲಿ ಇದೆಲ್ಲ ನಿರಂತರವಾಗಿ ನಡೆಯುವಂತಹದು. ಆದರೆ ಅದನ್ನೆಲ್ಲವನ್ನೂ ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದು ಸೂಕ್ತ ಎಂದರು.