ಸಾರಾಂಶ
ಕುಮಾರಸ್ವಾಮಿ ಅಂದ್ರೆ ಸುಳ್ಳು, ಸುಳ್ಳು ಅಂದ್ರೆ ಕುಮಾರಸ್ವಾಮಿ. ಅವರ ಬಗ್ಗೆ ಹೆಚ್ಚಿಗೆ ಮಾತನಾಡೋಲ್ಲ ಎಂದು ಸಿಎಂ ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ಶುಕ್ರವಾರ ಹೇಳಿದ್ದಾರೆ.
ಶಿವಮೊಗ್ಗ: ಕುಮಾರಸ್ವಾಮಿ ಅಂದ್ರೆ ಸುಳ್ಳು, ಸುಳ್ಳು ಅಂದ್ರೆ ಕುಮಾರಸ್ವಾಮಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿ ಬಗ್ಗೆ ಹೆಚ್ಚಿಗೆ ಮಾತನಾಡೋಲ್ಲ ಎಂದ ಹೇಳಿದರು. ಡಿಸಿಎಂ ಚರ್ಚೆ ವಿಚಾರದಲ್ಲಿ ಪತ್ರಕರ್ತರ ಪ್ರಶ್ನೆಗೆ ನೋ ಡಿಸಿಎಂ, ನೋ ಕಮೆಂಟ್ಸ್ ಎಂದ ಸಿದ್ದರಾಮಯ್ಯ. ಈ ಬಗ್ಗೆ ಮಾತನಾಡಲು ಇಚ್ಚಿಸದೇ ಹೊರಟ ಮುಖ್ಯಮಂತ್ರಿ.
- - - 3ಕ್ಕೆ. (ಎಡಿಟೆಡ್) 22ರ ನಂತರ ನಾನೂ ಅಯೋಧ್ಯೆಗೆ ಹೋಗುತ್ತೇನೆ: ಸಿಎಂ ಸಿದ್ದರಾಮಯ್ಯ ಶಿವಮೊಗ್ಗ: ಜ.22ರ ನಂತರ ನಾನು ಕೂಡ ಅಯೋಧ್ಯೆಗೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮಚಂದ್ರರ ವಿಷಯದಲ್ಲಿ ನನ್ನ ವಿರೋಧ ಇಲ್ಲ. ನಾವೂ ಕೂಡ ಶ್ರೀರಾಮಚಂದ್ರರ ಭಕ್ತರು ಎಂದರು. ಅಯೋಧ್ಯೆ ಮತ್ತು ಶ್ರೀರಾಮಚಂದ್ರನ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡೋಕೆ ಹೊರಟಿದ್ದಾರೆ. ಈ ರಾಜಕೀಯವನ್ನು ಮಾತ್ರ ನಾವು ವಿರೋಧಿಸುತ್ತೇವೆ ಎಂದರು. - - --ಫೋಟೋ: ಸಿದ್ದರಾಮಯ್ಯ