ಸಾರಾಂಶ
ದೊಡ್ಡಮ್ಮ ದೇವಿ ಸ್ಥಿರಬಿಂಬ ಪ್ರತಿಷ್ಠಾಪನಾ ಕುಂಭಾಭಿಷೇಕ ಮಹೋತ್ಸವ ಸಮಾರಂಭ ಆ.29ರಿಂದ 31ರವರೆಗೆ ನಡೆಯಲಿದ್ದು, ಇದಕ್ಕಾಗಿ ಕೊರಟಗೆರೆ ತಾಲೂಕು ಹನುಮಂತಯ್ಯನಪಾಳ್ಯ ಕರಿದುಗ್ಗನಹಳ್ಳಿ ಮಜರೆ ಗ್ರಾಮ ಸಜ್ಜಾಗಿದೆ.
ಕನ್ನಡಪ್ರಭ ವಾರ್ತೆ ತುಮಕೂರು
ದೊಡ್ಡಮ್ಮ ದೇವಿ ಸ್ಥಿರಬಿಂಬ ಪ್ರತಿಷ್ಠಾಪನಾ ಕುಂಭಾಭಿಷೇಕ ಮಹೋತ್ಸವ ಸಮಾರಂಭ ಆ.29ರಿಂದ 31ರವರೆಗೆ ನಡೆಯಲಿದ್ದು, ಇದಕ್ಕಾಗಿ ಕೊರಟಗೆರೆ ತಾಲೂಕು ಹನುಮಂತಯ್ಯನಪಾಳ್ಯ ಕರಿದುಗ್ಗನಹಳ್ಳಿ ಮಜರೆ ಗ್ರಾಮ ಸಜ್ಜಾಗಿದೆ.ಪರ್ವ ಗ್ರೂಪ್ ಸಂಸ್ಥಾಪಕ ನೀಲೇಶ್ ಸ್ವಗ್ರಾಮದಲ್ಲಿ ನಿರ್ಮಿಸಿರುವ ಗ್ರಾಮ ದೇವತೆ ದೊಡ್ಡಮ್ಮದೇವಿ ದೇವಾಲಯ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ 28ರಿಂದ ಸಕಲ ಪೂಜೆ ಮತ್ತು ಹವನ ಕಾರ್ಯಕ್ರಮಗಳು ನಡೆಯಲಿದೆ.
31ರಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ। ಹನುಮಂತನಾಥ ಸ್ವಾಮೀಜಿ ನೇತೃತ್ವದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಾನ್ನಿಧ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ, ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಸಿದ್ದರಬೆಟ್ಟದ ಸಿದ್ದರಾಮೇಶ್ವರ ಸ್ವಾಮೀಜಿ, ಹಿರೇಮಠದ ಡಾ। ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತಂಗನಹಳ್ಳಿಯ ಬಸವಲಿಂಗ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರ ಬಸವಲಿಂಗ ಸ್ವಾಮೀಜಿ, ವನಕಲ್ಲು ಬಸವರಮಾ ನಂದ ಸ್ವಾಮೀಜಿ, ಶಿವಗಂಗೆಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಸಿದ್ಧಗಂಗೆ ಕಿರಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ವಹಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹ ಸಚಿವ ಡಾ। ಜಿ.ಪರಮೇಶ್ವರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೈಲ್ವೆ ಸಚಿವ ವಿ.ಸೋಮಣ್ಣ, ಸಚಿವ ಶಿವರಾಜ ತಂಗಡಗಿ, ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ, ಸುರೇಶಗೌಡ, ಜ್ಯೋತಿ ಗಣೇಶ, ಎಚ್.ವಿ.ವೆಂಕಟೇಶ್, ಸುರೇಶಬಾಬು, ಚಿದಾನಂದಗೌಡ, ರಾಜೇಂದ್ರ ರಾಜಣ್ಣ, ಡಿ.ಟಿ.ಶ್ರೀನಿವಾಸ್, ಸಿಮೆಂಟ್ ಮಂಜುನಾಥ್, ಜಯಮಾಲಾ ಆಗಮಿಸಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಉಪಸ್ಥಿತಿ ಇರಲಿದೆ. ‘ಕನ್ನಡಪ್ರಭ’ ಸಂಪಾದಕರಾದ ರವಿ ಹೆಗಡೆ, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ದೇವರಾಜಯ್ಯ, ಭಾವನಾ ಬೆಳಗೆರೆ, ಶಶಿಧರ ನಾಗರಾಜಪ್ಪ, ಪ್ರವೀಣ್ ಶೆಟ್ಟಿ, ಚಿದಾನಂದ ಕಡಲಾಸ್ಕರ್ ಅವರನ್ನು ಸನ್ಮಾನಿಸಲಾಗುತ್ತದೆ.ವಿಶೇಷ ಆಹ್ವಾನಿತರಾಗಿ ಶ್ರೀನಗರ ಕಿಟ್ಟಿ, ಅರ್ಜುನ್ ಯೋಗೀಶ್, ಸುಧಾಕರಲಾಲ್, ರಾಜೇಶಗೌಡ, ಡಾ। ಜೆ.ನಾಗಣ್ಣ, ರಾಜೇಶ್ ನಟರಂಗ ಮುಂತಾದವರು ಪಾಲ್ಗೊಳ್ಳಲಿದ್ದಾರೆ.