ಸಾರಾಂಶ
ಸಮೀಪದ ಮುಳ್ಳುಸೋಗೆ ಗ್ರಾಮ ದೇವತೆ ದೊಡ್ಡಮ್ಮ ದೇವತಾ ಪ್ರತಿಷ್ಠಾಪನೆಯ 12ನೇ ವರ್ಷದ ಅಂಗವಾಗಿ ಕುಂಭಾಭಿಷೇಕ ಹಾಗೂ ವಿವಿಧ ಧಾರ್ಮಿಕ ಪೂಜೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಸಮೀಪದ ಮುಳ್ಳುಸೋಗೆ ಗ್ರಾಮದೇವತೆ ದೊಡ್ಡಮ್ಮ ದೇವತಾ ಪ್ರತಿಷ್ಠಾಪನೆಯ 12 ನೇ ವರ್ಷದ ಅಂಗವಾಗಿ ಕುಂಭಾಭಿಷೇಕ ಹಾಗೂ ವಿವಿಧ ಧಾರ್ಮಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.ಮುಳ್ಳುಸೋಗೆ, ಗುಮ್ಮನಕೊಲ್ಲಿ ಹಾಗೂ ಜನತಾ ಕಾಲನಿ ಈ ಮೂರು ಗ್ರಾಮಗಳ ವ್ಯಾಪ್ತಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಎರಡು ದಿನಗಳ ಕಾಲ ನಡೆದ ಬುಧವಾರ ಬೆಳಗ್ಗೆ ಗಣಪತಿ ಹೋಮ, ನವಗ್ರಹ ಹೋಮ, ಕಳಸಾಭಿಷೇಕ, ಮಹಾಪೂಜೆ, ಸಂಜೆ ವಾಸ್ತು ಹೋಮ, ರಾಕ್ಷೋಘ್ನ ಹೋಮ, ದಿಗ್ಬಲಿ ನೆರವೇರಿತು.ಬಳಿಕ ಗುರುವಾರ ಬೆಳಗ್ಗೆ ಕಾವೇರಿ ನದಿಯಿಂದ ಗಂಗಾಜಲ ಕಳಶ ತರಲಾಯಿತು.
ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲದೊಂದಿಗೆ ಆಗಮಿಸಿ ಸಾಮೂಹಿಕ ಪೂಜೆ ಸಲ್ಲಿಸಿದರು.ಬಳಿಕ ಗಣಪತಿ ಹೋಮ, ದುರ್ಗಾ ಹೋಮ, ಪ್ರತಿಷ್ಠಾ ಕಳಸಾಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ ಹಾಗು ಅನ್ನಸಂತರ್ಪಣೆ ನೆರವೇರಿತು.
ದೇವಾಲಯ ಆಡಳಿತ ಮಂಡಳಿ ಸಮಿತಿ ಅಧ್ಯಕ್ಷ ಎಂ.ಎ.ಕುಮಾರಸ್ವಾಮಿ, ಉಪಾಧ್ಯಕ್ಷ ಧನರಾಜ್, ಕಾರ್ಯದರ್ಶಿ ಎಂ.ಎಚ್.ಅಣ್ಣೇಗೌಡ, ಸಹಕಾರ್ಯದರ್ಶಿ ಎಂ.ಮಂಜುನಾಥ್, ಖಜಾಂಚಿ ಸೋಮು, ನಿರ್ದೇಶಕರಾದ ಎಂ.ಕೆ.ಗಣೇಶ್, ಎಂ.ಆರ್.ನಂಜುಂಡ, ಗೋವಿಂದರಾಜು, ಡಿ. ಅಪ್ಪಣ್ಣ, ಎಂ.ಸಿ.ಮಂಜುನಾಥ್, ಪುಟ್ಟರಾಜು, ಜಯರಾಜ್, ವಿಶ್ವನಾಥ್, ಗಣಪತಿ, ಸೋಮು, ಎಂ.ಸಂತೋಷ್ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))