ಶ್ರೀಗಂಡಿ ಬಸವೇಶ್ವರ ಸ್ವಾಮಿಗೆ ಕುಂಭಾಭಿಷೇಕ

| Published : Jul 26 2025, 12:30 AM IST

ಸಾರಾಂಶ

ತಾಳುಕಿನ ನಾರಿಹಳ್ಳ ಜಲಾಶಯದ ತಟದಲ್ಲಿರುವ ಶ್ರೀಗಂಡಿ ಬಸವೇಶ್ವರ ಸ್ವಾಮಿಗೆ ಶ್ರಾವಣ ಶುದ್ಧ ಪಾಡ್ಯ ದಿನವಾದ ಶುಕ್ರವಾರ ಕುಂಭಾಭಿಷೇಕ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಸಂಡೂರು

ತಾಳುಕಿನ ನಾರಿಹಳ್ಳ ಜಲಾಶಯದ ತಟದಲ್ಲಿರುವ ಶ್ರೀಗಂಡಿ ಬಸವೇಶ್ವರ ಸ್ವಾಮಿಗೆ ಶ್ರಾವಣ ಶುದ್ಧ ಪಾಡ್ಯ ದಿನವಾದ ಶುಕ್ರವಾರ ಕುಂಭಾಭಿಷೇಕ ನೆರವೇರಿಸಲಾಯಿತು.

ಕುಂಭಾಭಿಷೇಕಕ್ಕೂ ಪೂರ್ವದಲ್ಲಿ ಏಚ್.ಎಂ. ರೇವಣಸಿದ್ದಯ್ಯಸ್ವಾಮಿ ಭುಜಂಗನಗರ ಹಾಗೂ ಚಂದ್ರಯ್ಯಸ್ವಾಮಿ ಇವರುಗಳ ವೀರಗಾಸೆ, ಸಮಾಳ, ನಂದಿಕೋಲು ಹಾಗೂ ಮೇಳದೊಂದಿಗೆ ಗಂಗೆ ಸ್ಥಳಕ್ಕೆ ಹೋಗಿ, ನಾರಿಹಳ್ಳದಿಂದ ಗಂಗೆಯನ್ನು ಕುಂಭಗಳಲ್ಲಿ ತುಂಬಿಕೊಮಡು ಕಳಸ, ಕನ್ನಡಿಗಳ ಮೂಲಕ ದೇವಸ್ಥಾನಕ್ಕೆ ಬಂದು, ಶ್ರೀಗಂಡಿ ಬಸವೇಶ್ವರ ಸ್ವಾಮಿಗೆ ಕುಂಭಾಭಿಷೇಕ ನೆರವೇರಿಸಲಾಯಿತು.

ಸಂಡೂರಿನ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ರವಿಸ್ವಾಮಿ ಹಿರೇಮಠ ಹಾಗೂ ವೀರಯ್ಯಸ್ವಾಮಿ ಪೌರೋಹಿತ್ಯ ವಹಿಸಿದ್ದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ನಾಟಕ ಅಕಾಡೆಮಿ ಪ್ರಶಸ್ತಿಗೆ ಕಡೆಗಣನೆ-ಪ್ರತಿಭಟನೆಗೆ ನಿರ್ಧಾರ:ಪ್ರಸಕ್ತ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಬಳ್ಳಾರಿ ಕಡೆಗಣಿಸಲಾಗಿದ್ದು, ಅಕಾಡೆಮಿ ಧೋರಣೆ ಖಂಡಿಸಿ ಈ ವಾರಾಂತ್ಯದಲ್ಲಿ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಹಾಗೂ ಕಾರ್ಯದರ್ಶಿ ಎಚ್. ತಿಪ್ಪೇಸ್ವಾಮಿ ಮುದ್ದಟನೂರು ತಿಳಿಸಿದರು.ಬಳ್ಳಾರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ನಾಟಕ ಅಕಾಡೆಮಿ 33 ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಆದರೆ,

ಬಳ್ಳಾರಿ ಜಿಲ್ಲೆಗೆ ಒಬ್ಬೇ ಒಬ್ಬ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಿಲ್ಲ. ಪ್ರಶಸ್ತಿಗಳನ್ನು ಬೆಂಗಳೂರು ನಗರಕ್ಕೆ ಸೀಮಿತಗೊಳಿಸಿಕೊಳ್ಳಲಾಗಿದೆ. ಬೆಂಗಳೂರಿಗೆ 13 ಪ್ರಶಸ್ತಿಗಳನ್ನು ನೀಡುವ ಬದಲು ಬಳ್ಳಾರಿ ಜಿಲ್ಲೆಯನ್ನು ಪರಿಗಣಿಸಬಹುದಾಗಿತ್ತು. ಆದರೆ, ಅಕಾಡೆಮಿಯ ಅಧ್ಯಕ್ಷರು ತಮಗಿಷ್ಟ ಬಂದಂತೆ ನಿರ್ಧಾರ ಕೈಗೊಂಡಿರುವುದು ಸ್ಪಷ್ಟವಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಬಗ್ಗೆ ಈ ಹಿಂದಿನಿಂದಲೂ ವಿವಿಧ ಅಕಾಡೆಮಿಗಳು ನಿರ್ಲಕ್ಷ್ಯ ವಹಿಸುತ್ತಲೇ ಬಂದಿದ್ದು ನಾಟಕ ಅಕಾಡೆಮಿ ಇದಕ್ಕೆ ಹೊರತಲ್ಲ ಎಂದು ಟೀಕಿಸಿದರು.ಬಳ್ಳಾರಿ ಜಿಲ್ಲೆ ರಂಗಭೂಮಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದೆ. ಬಳ್ಳಾರಿ ರಾಘವರು ಅಂತಾರಾಷ್ಟ್ರೀಯ ಕಲಾವಿದರಾಗಿ ಜಿಲ್ಲೆಯ ಹೆಸರನ್ನು ವಿಶ್ವವ್ಯಾಪಿಯಾಗಿಸಿದ್ದಾರೆ. ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರು ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಜಿಲ್ಲೆಯ ರಂಗಭೂಮಿ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಈ ಜಿಲ್ಲೆಯಲ್ಲಿ ಅನೇಕ ಹಿರಿಯ ರಂಗಕರ್ಮಿಗಳು ಇದ್ದು ಯಾರೊಬ್ಬರನ್ನು ಪ್ರಶಸ್ತಿಗೆ ಪರಿಗಣಿಸದಿರುವುದು ತೀವ್ರ ಬೇಸರ ಮೂಡಿಸಿದೆ. ಸರ್ಕಾರದ 13 ಅಕಾಡೆಮಿಗಳಲ್ಲಿ ಬಳ್ಳಾರಿ ಜಿಲ್ಲೆಯ ಪ್ರಾತಿನಿಧ್ಯ ಇಲ್ಲ. ಕಳೆದ ವರ್ಷ ಅಕಾಡೆಮಿಯಿಂದ ಮೂರು ವರ್ಷಗಳ ಪ್ರಶಸ್ತಿಯನ್ನು 90 ಜನರಿಗೆ ನೀಡಲಾಯಿತು. ಈ ಪೈಕಿ ಬಳ್ಳಾರಿ ಜಿಲ್ಲೆ ಒಬ್ಬೇ ಒಬ್ಬ ಕಲಾವಿದರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹ ಬಳ್ಳಾರಿಗೆ ಬರಲಿಲ್ಲ. ಹೀಗೆ ವಿವಿಧ ಅಕಾಡೆಮಿಗಳು ಹಾಗೂ ಸರ್ಕಾರ ಬಳ್ಳಾರಿ ಜಿಲ್ಲೆಯ ಬಗ್ಗೆ ಅತ್ಯಂತ ನಿರ್ಲಕ್ಷ್ಯ ವಹಿಸುತ್ತಿದೆ. ಈ ಎಲ್ಲ ಬೆಳವಣಿಗೆ ನೋಡಿದರೆ ರಾಜ್ಯ ಸರ್ಕಾರ ಹಾಗೂ ಅಕಾಡೆಮಿಗಳು ಬಳ್ಳಾರಿಯ ಬಗ್ಗೆ ಯಾವ ಧೋರಣೆ ಹೊಂದಿವೆ ಎಂಬುದು ಗೊತ್ತಾಗುತ್ತದೆ ಎಂದು ಟೀಕಿಸಿದರಲ್ಲದೆ, ನಾಟಕ ಅಕಾಡೆಮಿಯ ನಿರ್ಲಕ್ಷ್ಯ ಹಾಗೂ ಅಧ್ಯಕ್ಷರ ಧೋರಣೆ ಖಂಡಿಸಿ ಶೀಘ್ರದಲ್ಲಿಯೇ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಈ ಸಂಬಂಧ ಕಲಾವಿದರ ಸಭೆ ನಡೆಸಿ, ಈ ವಾರಾಂತ್ಯದೊಳಗೆ ಹೋರಾಟ ರೂಪಿಸಲು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಹಿರಿಯ ಕಲಾವಿದೆ ಜಯಶ್ರೀ ಪಾಟೀಲ್, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಖಜಾಂಚಿ ರಮಣಪ್ಪ ಭಜಂತ್ರಿ, ಎಚ್‌.ಎಂ. ಅಮರೇಶ್ ಹಚ್ಚೊಳ್ಳಿ, ಹುಲುಗಪ್ಪ, ವೀರೇಶ್ ದಳವಾಯಿ, ಸುಬ್ಬಣ್ಣ, ನಾಗನಗೌಡ ಸುದ್ದಿಗೋಷ್ಠಿಯಲ್ಲಿದ್ದರು.