ಬಿಜೆಪಿಯಿಂದ ಕುಂಭಕರ್ಣ ಅಣಕು ಪ್ರದರ್ಶನ
KannadaprabhaNewsNetwork | Published : Oct 09 2023, 12:45 AM IST
ಬಿಜೆಪಿಯಿಂದ ಕುಂಭಕರ್ಣ ಅಣಕು ಪ್ರದರ್ಶನ
ಸಾರಾಂಶ
ಬಿಜೆಪಿಯಿಂದ ಕುಂಭಕರ್ಣ ಅಣಕು ಪ್ರದರ್ಶನ
ಕಾವೇರಿ ಹೋರಾಟ ಧರಣಿಗೆ ಕರುನಾಡ ವಿಜಯ ಸೇನೆ ಬೆಂಬಲ ಕನ್ನಡಪ್ರಭ ವಾರ್ತೆ ಮಂಡ್ಯ ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಕರುನಾಡ ವಿಜಯ ಸೇನೆ ಕಾರ್ಯಕರ್ತರು ಬೆಂಬಲ ನೀಡಿ ಪಾಲ್ಗೊಂಡರು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸೇನೆ ಕಾರ್ಯಕರ್ತರು ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಸೇರಿ ನಂತರ ಬೆಂಗಳೂರು- ಮೈಸೂರು ಹೆದ್ದಾರಿ ಮೂಲಕ ಕಾವೇರಿ ಚಳವಳಿಯ ಧರಣಿ ಸ್ಥಳದವರೆಗೂ ಮೆರವಣಿಗೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನೆರೆ ರಾಜ್ಯಕ್ಕೆ ನೀರು ಹರಿಸುತ್ತಿರುವ ಸರ್ಕಾರ ಮತ ಹಾಕಿದ ಜನ ಹಾಗೂ ರೈತರ ಹಿತ ಮರೆತಿದೆ. ರೈತರ ಬೆಳೆಗಳಿಗೆ ನೀರು ನೀಡದೆ, ಬೆಂಗಳೂರು ಸೇರಿದಂತೆ ಇತರೆ ನಗರಗಳಿಗೆ ಕುಡಿಯಲು ನೀರು ಸಿಗದಂತೆ ಮಾಡಲು ಹೊರಟಿದೆ. ತಕ್ಷಣ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಸಂಕಷ್ಟದ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಮೇಕೆದಾಟು ಯೋಜನೆಗೆ ಶೀಘ್ರ ಅನುಮತಿ ನೀಡಿ ಯೋಜನೆ ಸಾಕಾರಕ್ಕೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು. ಚಿತ್ರದುರ್ಗದ ಟ್ಯಾಂಕರ್ ನೀರು: ಬರದನಾಡು ಚಿತ್ರದುರ್ಗದಿಂದ ಟ್ಯಾಂಕರ್‌ನಲ್ಲಿ ತಂದಿದ್ದ ನೀರನ್ನು ಜಿಲ್ಲಾಡಳಿತ ಮೂಲಕ ತಮಿಳುನಾಡಿಗೆ ರವಾನಿಸಲು ಮುಂದಾಗಿದ್ದ ಸಮಿತಿಯಿಂದ ಪೊಲೀಸರು ನೀರು ಸ್ವೀಕರಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಮಾತಿನ ಚಕಮಕಿ ನಡೆಯಿತು. ತದನಂತರ ಹಿರಿಯ ಅಧಿಕಾರಿಗಳು ಮತ್ತು ಮುಖಂಡರ ಮಧ್ಯಪ್ರವೇಶದಿಂದ ಶಾಂತವಾಯಿತು. ನಂತರ ಧರಣಿನಿರತ ರೈತ ಹಿತ ರಕ್ಷಣಾ ಸಮಿತಿಯ ಮುಖಂಡರು ಟ್ಯಾಂಕರ್ ನೀರು ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ದೀಪಕ್, ಕಾರ್ಮಿಕ ಘಟಕದ ಅಧ್ಯಕ್ಷ ರಾಮ್ ಪ್ರಸಾದ್, ಕಾರ್ಯದರ್ಶಿ ಗಿರಿಜೇಶ್, ಮುಖಂಡರಾದ ಆರ್.ಎಸ್.ಮಹೇಶ್, ನವೀನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ವೆಂಕಟೇಶ್, ನಾರಾಯಣ, ಸಮಿತಿಯ ಸುನಂದಾ ಜಯರಾಂ, ಅಂಬುಜಮ್ಮ ಭಾಗವಹಿಸಿದ್ದರು. ಬಿಜೆಪಿಯಿಂದ ಕುಂಭಕರ್ಣ ಅಣಕು ಪ್ರದರ್ಶನ: ನಗರದ ಸರ್‌ಎಂ.ವಿ ಪ್ರತಿಮೆ ಎದುರು ನಡೆಸುತ್ತಿರುವ ಧರಣಿಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ಸರ್ಕಾರವು ನಿದ್ದೆಗೆ ಜಾರಿದೆ ಎಂಬುದನ್ನು ಬಿಂಬಿಸಲು ವ್ಯಕ್ತಿಯೊಬ್ಬ ಕುಂಭಕರ್ಣ ವೇಷ ಹಾಕಿಸುವ ಮೂಲಕ ಅಣಕು ಪ್ರದರ್ಶನ ನೀಡಿದರು. ನಂತರ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ವೇಷಧಾರಿ ಆನಂದ್ ಭಾಗವಹಿಸಿದ್ದರು. 8ಕೆಎಂಎನ್ ಡಿ19,20 ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಗೆ ಕರುನಾಡ ವಿಜಯ ಸೇನೆ ಕಾರ್ಯಕರ್ತರು ಬೆಂಬಲ ನೀಡಿ ಪಾಲ್ಗೊಂಡರು. ಮಂಡ್ಯ ಸರ್‌ಎಂ.ವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಮಾ ಸಮಿತಿ ನಡೆಸುತ್ತಿರುವ ಧರಣಿಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ವ್ಯಕ್ತಿಯೊಬ್ಬ ಕುಂಭಕರ್ಣ ವೇಷ ಹಾಕಿಸಿ ಅಣಕು ಪ್ರದರ್ಶನ ನೀಡಿದರು.