ಸಾರಾಂಶ
ಕಕ್ಕಬೆಯ ಪಾಡಿಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿರುವ ಕುಂಬ್ಯಾರು ಕಲ್ಲಡ್ಚ ವಾರ್ಷಿಕೋತ್ಸವ ಮಾ. 13ರಂದು ನಡೆಯಲಿದೆ. 
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಕಕ್ಕಬೆಯ ಪಾಡಿಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿರುವ ಕುಂಬ್ಯಾರು ಕಲ್ಲಡ್ಚ ವಾರ್ಷಿಕೋತ್ಸವ ಮಾರ್ಚ್ 13 ರಂದು ಗುರುವಾರ ನಡೆಯಲಿದೆ.ಈ ಪ್ರಯುಕ್ತ ಫೆ. 28ರಂದು ಅಪರಾಹ್ನ ಆದಿ ಸ್ಥಾನ ಮಲ್ಮದಲ್ಲಿ ದೇವಕಟ್ಟು ಜಾರಿಯಾಗಲಿದೆ. ಪಾಡಿ ನಾಲ್ಕುನಾಡಿಗೆ ಸೀಮಿತವಾಗಲಿರುವ ದೇವಕಟ್ಟು ಮಾರ್ಚ್ 13ರ ಉತ್ಸವದ ದಿನ ಅಪರಾಹ್ನ ಮಲ್ಮ ಕ್ಷೇತ್ರದಲ್ಲಿ ಸಂಪನ್ನಗೊಳ್ಳಲಿದೆ.
ಪರಂಪರೆಯಂತೆ ಕುಂಬ್ಯಾರು ಕಲ್ಲಡ್ಚ ಹಬ್ಬದ ದಿನ ಬೆಳಿಗ್ಗೆ 9:30 ದೇವತಕ್ಕರಾದ ಪರದಂಡ ಪೆರಿಯಂಡ ಮನೆಯಿಂದ ಜೋಡೆತ್ತುಗಳ ಎತ್ತು ಪೋರಾಟ , ಇದರೊಂದಿಗೆ ಮಾದಂಡ, ಕೋಡಿಮಣಿಯಂಡ, ಚೌರಿರ, ಅಲ್ಲಾ ರಂಡ ಮನೆತನದವರ ಎತ್ತು ಪೋರಾಟ ಆಗಮಿಸಲಿದೆ. ದೇವಾಲಯದಲ್ಲಿ ತುಲಾಭಾರ ಸೇವೆ, ಮಹಾಪೂಜೆಗಳು ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.ಬಳಿಕ ದೇವರ ಉತ್ಸವ ಮೂರ್ತಿಯೊಂದಿಗೆ ಮಲ್ಮ ಬೆಟ್ಟಕ್ಕೆ ತೆರಳಿ, ನೆಲಜಿ ಪೇರೂರು ಭಾಗಗಳಿಂದ ಬರುವ ತಕ್ಕ ಮುಖ್ಯಸ್ಥರ ಜೋಡೆತ್ತು ಪೋರಾಟಗಳು ಪಾಡಿಯಿಂದ ಬಂದ ಜೋಡೆತ್ತು ಪೋರಾಟ ಸೇರಿ ದೇವ ಕಟ್ಟನ್ನು ಕೊನೆಗೊಳಿಸಲಾಗುವುದು. ಬಳಿಕ ಪಾಡಿ ದೇವಸ್ಥಾನದಲ್ಲಿ ದೇವರ ನೃತ್ಯ ನಡೆಯಲಿದೆ. ಆ ಮೂಲಕ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವತಕ್ಕರಾದ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))