ಮಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ದದಿಂದ ಉಂಟಾಗಿರುವ ವಿಷಮ ಪರಿಸ್ಥಿತಿ ಇಡೀ ಜಗತ್ತಿಗೆ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಪ್ರಧಾನಿ ಮೋದಿಯವರ ದೂರದೃಷ್ಟಿತ್ವದಿಂದಾಗಿ ಬೇರೆ ದೇಶಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರತಿಕೂಲತೆ ಬೀರಿಲ್ಲ. ಆದರೂ ಜಾಗತಿಕವಾಗಿ ತೈಲ ಬೆಲೆಗಳು ಏರಿಕೆಯಾಗಿದ್ದು ಈ ಬಗ್ಗೆ ಪ್ರಧಾನಿಯವರು ದೇಶದ ಜನರಲ್ಲಿ ಪ್ರಾಮಾಣಿಕವಾದ ಮನವಿ ಮಾಡಿದ್ದಾರೆ. ಸ್ವಂತ ವಾಹನದ ಬದಲು, ಬಸ್ಸು, ರೈಲಿನಲ್ಲಿ ಪ್ರಯಾಣ, ಒಂದು ವರ್ಷದ ಅವಧಿಗೆ ಚಿನ್ನ ಖರೀದಿಗೆ ಕಡಿವಾಣ ಇಂತಹ ಕೆಲವೊಂದು ಸೂತ್ರವನ್ನು ದೇಶದ ಆರ್ಥಿಕ ಹಿತದೃಷ್ಟಿಯಿಂದ ಸೂಚಿಸಿದ್ದಾರೆ ಆದರೆ ಕಾಂಗ್ರೆಸ್ ಆಕಾಶ ಕಳಚಿ ಬಿಟ್ಟಂತೆ ವರ್ತಿಸುತ್ತಿದ್ದಾರೆ. ಇವರಿಗೆ ರಾಷ್ಟ್ರದ ಹಿತಚಿಂತನೆ ಅಗತ್ಯವಿಲ್ಲ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ದೂರಿದ್ದಾರೆ.ದೇಶದ ಹಿತ ಕಾಯುವ ನಾಯಕನಾಗಿ ಇಂತಹ ಕೋರಿಕೆಗಳನ್ನು ಪ್ರಜೆಗಳ ಮುಂದೆ ಇಡುವುದು ಇದು ಮೊದಲಲ್ಲ. ನೇತಾಜಿ ಸುಭಾಷ್ ಚಂದ್ರ ಬೋಸ್‌ರವರು ಸ್ವಾತಂತ್ರ‍್ಯ ಪೂರ್ವದಲ್ಲಿ, ಬಳಿಕ ಪಾಕಿಸ್ತಾನ, ಭಾರತ ಕದನ ಸಂಧರ್ಭದಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರೀಯವರು ಒಂದು ಹೊತ್ತಿನ ಊಟ ಕೈ ಬಿಡಲು ಜನತೆಗೆ ಸೂಚಿಸಿದ್ದರು, ಜನರು ಅದನ್ನು ಪಾಲಿಸಿದ್ದರು ಮತ್ತು ದೇಶದ ಹಿತಕ್ಕಾಗಿ ವಿಪಕ್ಷಗಳು ಅದನ್ನು ಸಮರ್ಥಿಸಿತ್ತು. ಹಿಂದೆ ಪ್ರಧಾನಿ ಇಂದಿರಾ ಗಾಂಧಿಯವರು ನಂತರ ಇತ್ತೀಚೆಗೆ ದಶಕಗಳ ಹಿಂದೆ ಹಣಕಾಸು ಸಚಿವರಾಗಿದ್ದ ಚಿದಂಬರಂ ರವರು ಚಿನ್ನ ಖರೀದಿಸದಂತೆ ಜನತೆಗೆ ಮನವಿ ಮಾಡಿದ್ದನ್ನು ಕಾಂಗ್ರೆಸ್ ಮರೆತಿದೆಯಾ ಎಂದು ಕುಂಪಲ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಯೇ ಮಿತವಾಗಿರುವಾಗ ಅದರ ಬಗ್ಗೆ ಚಿಂತಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಯನ್ನು ಟೀಕಿಸುವುದು ಹಾಸ್ಯಾಸ್ಪದ ಎಂದು ಸತೀಶ್ ಕುಂಪಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶದ ಹಿತಕ್ಕಾಗಿ ಪ್ರಧಾನಿ ಕೋರಿಕೆ, ಕಾಂಗ್ರೆಸ್ ಗೆ ಯಾಕೆ ಹೊಟ್ಟೆ ಉರಿ: ಸತೀಶ್ ಕುಂಪಲ
ಪ್ರಧಾನಿಯವರು ದೇಶದ ಜನರಲ್ಲಿ ಪ್ರಾಮಾಣಿಕವಾದ ಮನವಿ ಮಾಡಿದ್ದಾರೆ. ಸ್ವಂತ ವಾಹನದ ಬದಲು, ಬಸ್ಸು, ರೈಲಿನಲ್ಲಿ ಪ್ರಯಾಣ, ಒಂದು ವರ್ಷದ ಅವಧಿಗೆ ಚಿನ್ನ ಖರೀದಿಗೆ ಕಡಿವಾಣ ಇಂತಹ ಕೆಲವೊಂದು ಸೂತ್ರವನ್ನು ದೇಶದ ಆರ್ಥಿಕ ಹಿತದೃಷ್ಟಿಯಿಂದ ಸೂಚಿಸಿದ್ದಾರೆ ಆದರೆ ಕಾಂಗ್ರೆಸ್ ಆಕಾಶ ಕಳಚಿ ಬಿಟ್ಟಂತೆ ವರ್ತಿಸುತ್ತಿದ್ದಾರೆ. ಇವರಿಗೆ ರಾಷ್ಟ್ರದ ಹಿತಚಿಂತನೆ ಅಗತ್ಯವಿಲ್ಲ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ದೂರಿದ್ದಾರೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.