ಕುಂದಾಪುರ: 14 ಕೊರಗ ಕುಟುಂಬಗಳಿಗೆ ಉಚಿತ ಸೂರು

| Published : Nov 18 2024, 12:01 AM IST

ಕುಂದಾಪುರ: 14 ಕೊರಗ ಕುಟುಂಬಗಳಿಗೆ ಉಚಿತ ಸೂರು
Share this Article
  • FB
  • TW
  • Linkdin
  • Email

ಸಾರಾಂಶ

ಜನ್ನಾಡಿ ಮತ್ತು ಮಣಿಗೇರಿ ಗ್ರಾಮಗಳಲ್ಲಿ ಕೊರಗ ಸಮುದಾಯದ ಬಡ ಕುಟುಂಬಗಳಿಗೆ ಸುಮಾರು 2 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ 14 ಸುಂದರ ಮನೆಗಳನ್ನು ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಭಾನುವಾರ ಉದ್ಘಾಟಿಸಿದರು.

ಡಾ.ಎಚ್.ಎಸ್. ಶೆಟ್ಟಿ ಕಟ್ಟಿಸಿದ ಮನೆಗಳು, ಸಚಿವ ಮುನಿಯಪ್ಪ ಅವರಿಂದ ಹಸ್ತಾಂತರಕನ್ನಡಪ್ರಭ ವಾರ್ತೆ ಉಡುಪಿಜಿಲ್ಲೆಯ ಜನ್ನಾಡಿ ಮತ್ತು ಮಣಿಗೇರಿ ಗ್ರಾಮಗಳಲ್ಲಿ ಕೊರಗ ಸಮುದಾಯದ ಬಡ ಕುಟುಂಬಗಳಿಗೆ ಸುಮಾರು 2 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ 14 ಸುಂದರ ಮನೆಗಳನ್ನು ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಭಾನುವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮನೆಗಳ ದಾನಿ ಡಾ. ಎಚ್.ಎಸ್. ಶೆಟ್ಟಿ, ಕಾಂಗ್ರೆಸ್ ನಾಯಕ ದಿನೇಶ್ ಹೆಗ್ಡೆ ಮೊಳಹಳ್ಳಿ ಉಪಸ್ಥಿತರಿದ್ದರು.ಶತಮಾನಗಳಿಂದ ಜೋಪಡಿಗಳಲ್ಲಿ ವಾಸಿಸುತ್ತಿದ್ದ ಈ ಕುಟುಂಬಗಳಿಗಾಗಿ ಈ ಮನೆಗಳನ್ನು ಉದ್ಯಮಿ ಡಾ.ಎಚ್.ಎಸ್. ಶೆಟ್ಟಿ ಅವರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಮೂಲಕ ಬಡವರಿಗಾಗಿ ನಿರ್ಮಿಸಿದ್ದಾರೆ. ಮಾ.21ರಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಈ ಮನೆಗಳಿಗೆ ಭೂಮಿ ಪೂಜೆ ನಡೆಸಿದ್ದರು. ಈಗ ನಾಲ್ಕೆ ತಿಂಗಳಲ್ಲಿ ಹಳೆ ಮನೆ ಇರುವ ಸ್ಥಳದಲ್ಲಿಯೇ ನೂತನವಾಗಿ 14 ಮನೆಗಳನ್ನು ನಿರ್ಮಿಸಲಾಗಿದೆ.