ಸಾರಾಂಶ
ಮೂಡ್ಕಲಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಯೋಗ ಮತ್ತು ಆಧ್ಯಾತ್ಮಿಕ ಸಂಘದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಮೂಡ್ಕಲಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಯೋಗ ಮತ್ತು ಆಧ್ಯಾತ್ಮಿಕ ಸಂಘದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.ತರಬೇತುದಾರರಾದ ಆಯುರ್ವೇದ ವೈದ್ಯೆ ಡಾ.ವಿಜಯಲಕ್ಷ್ಮಿ ಕಾರ್ಯಕ್ರಮ ಉದ್ಘಾಟಿಸಿ, ಪ್ರಾಚೀನ ಭಾರತದ ಯೋಗ ಪರಂಪರೆ ಮತ್ತು ಜಗತ್ತು ಯೋಗವನ್ನು ಅಳವಡಿಸಿಕೊಂಡ ಬಗೆಯನ್ನು ವಿವರಿಸಿದರು. ಯೋಗ ಮತ್ತು ಪ್ರಾಣಾಯಾಮ ದೈನಂದಿನ ಬದುಕಿನಲ್ಲಿ ಹೇಗೆ ಸಹಕಾರಿ ಎನ್ನುವುದನ್ನು ತಿಳಿಸಿದರು.
ನಂತರ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ವಿವಿಧ ಯೋಗಾಸನಗಳನ್ನು ನಡೆಸಿದರು. ಇದರಲ್ಲಿ ಕಾರ್ಯಕ್ರಮದಲ್ಲಿ ಸಹಸಂಸ್ಥೆಯಾದ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್, ಉಪಪ್ರಾಂಶುಪಾಲೆ ಪ್ರೊ. ರೂಪಶ್ರೀ ಮತ್ತು ಉಪನ್ಯಾಸಕರು ಉತ್ಸಾಹದಿಂದ ಪಾಲ್ಗೊಂಡರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐ.ಎಂ.ಜೆ. ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರತಿಭಾ ಎಂ. ಪಟೇಲ್ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಪ್ರೊ. ಜಯಶೀಲ ಕುಮಾರ್, ಯೋಗ ಹಾಗೂ ಅಧ್ಯಾತ್ಮಿಕ ಸಂಘದ ಸಂಯೋಜಕ, ಕಾಲೇಜಿನ ದೈಹಿಕ ಶಿಕ್ಷಕ ಪ್ರವೀಣ್ ಖಾರ್ವಿ ಹಾಗೂ ಎಲ್ಲ ಬೋಧಕ ಮತ್ತು ಬೋಧಕೇತರ ವೃಂದ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಅರ್ಚನಾ ಗದ್ದೆ ನಿರೂಪಿಸಿದರು.