ಮೂಡ್ಲಕಟ್ಟೆ ಐಎಂಜೆ ವಿದ್ಯಾ ಸಂಸ್ಥೆಯಗಳಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಣಿಪಾಲ್ ಯುನಿವರ್ಸಲ್ ಟೆಕ್ನಾಲಜಿ ಬಿಸಿನೆಟ್ ಇನ್ಕ್ಯುಬೆಟರ್ (ಎಂಯುಟಿಬಿಐ) ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಸಂತೋಷ್ ರಾವ್ ಅವರು ವಿಕಸಿತ ಭಾರತ - 2047ರ ಪರಿಕಲ್ಪನೆಯನ್ನು ವಿವರಿಸಿದರು.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿದ್ಯಾ ಸಂಸ್ಥೆಯಗಳಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಣಿಪಾಲ್ ಯುನಿವರ್ಸಲ್ ಟೆಕ್ನಾಲಜಿ ಬಿಸಿನೆಟ್ ಇನ್ಕ್ಯುಬೆಟರ್ (ಎಂಯುಟಿಬಿಐ) ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಸಂತೋಷ್ ರಾವ್ ಅವರು ವಿಕಸಿತ ಭಾರತ - 2047ರ ಪರಿಕಲ್ಪನೆಯನ್ನು ವಿವರಿಸಿದರು.
ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ 2047ರ ವೇಳೆಗೆ ಆರ್ಥಿಕವಾಗಿ ಬಲಿಷ್ಠ, ತಾಂತ್ರಿಕವಾಗಿ ಮುಂದುವರಿದ, ಆತ್ಮನಿರ್ಭರ ಹಾಗೂ ಸಮಗ್ರವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬುದು ವಿಕಸಿತ ಭಾರತದ ದೃಷ್ಟಿಕೋನವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಎಂಜೆ ವಿದ್ಯಾಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಎಸ್.ಎನ್. ಭಟ್ ಮಾತನಾಡಿ, ನಮ್ಮಲ್ಲಿ ವಿಷಯಾಧಾರಿತ ಭಿನ್ನಬಿಪ್ರಾಯವಿದ್ದರೂ ನಮ್ಮ ಮಾತೃಭೂಮಿಯ ಅಭಿವೃದ್ಧಿಯ ವಿಷಯದಲ್ಲಿ ಸರ್ವರೂ ಒಟ್ಟಾಗಿ ಪ್ರಯತ್ನಿಸಬೇಕು. ಯುವಶಕ್ತಿಯೇ ಭಾರತದ ಸಂಪತ್ತು, ದೇಶದ ಉನ್ನತಿಯಲ್ಲಿ ಅವರವರ ಪಾತ್ರ ದೊಡ್ದದು ಎಂದರು. ಐಎಂಜೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸಿದ್ಧಾರ್ಥ ಜೆ. ಶೆಟ್ಟಿ ಶುಭಾಶಯ ತಿಳಿಸಿದರು. ಎಂಐಟಿ ಕುಂದಾಪುರದ ಪ್ರಾಂಶುಪಾಲ ಡಾ . ರಾಮಕೃಷ್ಣ ಹೆಗಡೆ, ಐಎಂಜೆಐಎಸ್‌ಸಿ ಪ್ರಾಂಶುಪಾಲರಾದ ಡಾ . ಪ್ರತಿಭಾ ಎಂ. ಪಟೇಲ್, ಎಂಸಿಎನ್ ಉಪಪ್ರಾಂಶುಪಾಲರಾದ ಪ್ರೊ. ರೂಪಶ್ರೀ ಕೆ.ಎಸ್., ಐಎಂಜೆಸಿಎಎಚ್‌ಎಸ್ ಪ್ರಾಂಶುಪಾಲರಾದ ಪ್ರೊ. ಹೇಮಲತಾ ಕೋಟ್ಯಾನ್, ವಿದ್ಯಾ ಅಕಾಡೆಮಿ ಪ್ರಾಂಶುಪಾಲರಾದ ಪ್ರೊ. ಅರುಣಾ ಭೇರಿ ಉಪಸ್ಥಿತರಿದ್ದರು. ಪ್ರೊ. ರಾಜೇಶ್ವರಿ ನಿರೂಪಿಸಿದರು. ಐಎಂಜೆಎಎಚ್ಎಸ್ ಉಪ ಪ್ರಾಂಶುಪಾಲರಾದ ಸೌಜನ್ಯ ಶೆಟ್ಟಿಗಾರ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಸುಷ್ಮಾ ವಂದಿಸಿದರು.