ಕುಂದರಗಿ ಅಡವಿಸಿದ್ಧೇಶ್ವರ ರಥೋತ್ಸವ ಜಾತ್ರೆಗೆ ಚಾಲನೆ

| Published : Apr 01 2024, 12:46 AM IST

ಕುಂದರಗಿ ಅಡವಿಸಿದ್ಧೇಶ್ವರ ರಥೋತ್ಸವ ಜಾತ್ರೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಗೋಕಾಕ: ತಾಲೂಕಿನ ಕುಂದರಗಿ ಅಡವಿಸಿದ್ಧೇಶ್ವರ ರಥೋತ್ಸವ ಜಾತ್ರೆ ಪ್ರಾರಂಭೋತ್ಸವಕ್ಕೆ ಮಠಾಧ್ಯಕ್ಷ ಶ್ರೀ ಅಮರಸಿದ್ಧೇಶ್ವರ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಭವ್ಯ ರಥೋತ್ಸವ ಜಾತ್ರೆಗೆ ಅಧಿಕ್ರತ ಚಾಲನೆ ನೀಡಿದರು. ಜಾತ್ರೆಯ ಪ್ರತಿಯೊಂದು ಯಶಸ್ಸಿಗೆ ಸಕಲ ಭಕ್ತರು ಕೈಜೋಡಿಸಿ ಅಂಬಲಿಯೊಡೆಯ ಶ್ರೀ ಅಡವಿಸಿದ್ಧೇಶ್ವರ ಕೃಪೆಗೆ ಪಾತ್ರರಾಗುವಂತೆ ಕೋರಿದರು.

ಕನ್ನಡಪ್ರಭ ವಾರ್ತೆ ಗೋಕಾಕತಾಲೂಕಿನ ಕುಂದರಗಿ ಅಡವಿಸಿದ್ಧೇಶ್ವರ ರಥೋತ್ಸವ ಜಾತ್ರೆ ಪ್ರಾರಂಭೋತ್ಸವಕ್ಕೆ ಮಠಾಧ್ಯಕ್ಷ ಶ್ರೀ ಅಮರಸಿದ್ಧೇಶ್ವರ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಭವ್ಯ ರಥೋತ್ಸವ ಜಾತ್ರೆಗೆ ಅಧಿಕ್ರತ ಚಾಲನೆ ನೀಡಿದರು. ಜಾತ್ರೆಯ ಪ್ರತಿಯೊಂದು ಯಶಸ್ಸಿಗೆ ಸಕಲ ಭಕ್ತರು ಕೈಜೋಡಿಸಿ ಅಂಬಲಿಯೊಡೆಯ ಶ್ರೀ ಅಡವಿಸಿದ್ಧೇಶ್ವರ ಕೃಪೆಗೆ ಪಾತ್ರರಾಗುವಂತೆ ಕೋರಿದರು.

ಭಾನುವಾರ ಬೆಳಗ್ಗೆ 6.30ಕ್ಕೆ ವಟುಗಳಿಗೆ ಅಯ್ಯಚಾರ, ಬೆಳಗ್ಗೆ 9.30ಕ್ಕೆ ಕುದುರೆ ಶರ್ಯತ್ತು, ಮಧ್ಯಾಹ್ನ 2.30ಕ್ಕೆ ಕುಸ್ತಿಗಳು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಸೋಮವಾರ ಮಧ್ಯಾಹ್ನ 2.30ಕ್ಕೆ ಜಂಗೀ ಕುಸ್ತಿಗಳು, ರಾತ್ರಿ 7ಕ್ಕೆ ಗದ್ದುಗೆಗೆ ಸಂಗೀತ ಮಹಾಪೂಜೆ, ಮಂಗಳವಾರ ಮಧ್ಯಾಹ್ನ 12.30ಕ್ಕೆ ಸಾಮೂಹಿಕ ವಿವಾಹ, ಸಂಜೆ 4.30ಕ್ಕೆ ರಥೋತ್ಸವ, ರಾತ್ರಿ ನಾಟಕ ಉರಿಗಣ್ಣಿನ ಹುಲಿ, ಬುಧವಾರ ಶ್ರೀಗಳಿಂದ ಆಶೀರ್ವಾದ, ಮುಂಜಾನೆ 10.30ಕ್ಕೆ ಅತ್ಯುತ್ತಮ ಜಾನುವಾರುಗಳ ಆಯ್ಕೆ, ಬಹುಮಾನ ವಿತರಣೆ, ಸಂಜೆ 5.30ಕ್ಕೆ ತೆಪ್ಪೋತ್ಸವ ನಡೆಯಲಿದೆ.