ಸತತ ಮಳೆಗೆ ತುಂಬಿ ಹರಿದ ಕುಪ್ಪಮ್ಮ ಕಾಲುವೆ

| Published : Oct 06 2024, 01:20 AM IST

ಸತತ ಮಳೆಗೆ ತುಂಬಿ ಹರಿದ ಕುಪ್ಪಮ್ಮ ಕಾಲುವೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲ: ಶುಕ್ರವಾರ ರಾತ್ರಿ, ಶನಿವಾರ ಬೆಳಗ್ಗೆಯೂ ಸುರಿದ ಧಾರಾಕಾರ ಮತ್ತು ಸತತ ಮಳೆಗೆ ಕಬಿನಿಯಿಂದ ಹೆಚ್ಚು ನೀರು ಹರಿದಿದ್ದರಿಂದಾಗಿ ಕೊಳ್ಳೇಗಾಲ ಪಟ್ಟಣ ವ್ಯಾಪ್ತಿಗೆ ಹೊಂದಿಕೊಂಡಿರುವ ಕುಪ್ಪಮ್ಮ ಕಾಲುವೆ ತುಂಬಿದ ಪರಿಣಾಮ ಹಲವು ಮನೆಗಳು, ನೂರಾರು ಎಕರೆ ಜಮೀನು ಹರಿದು ಮನೆಗಳು ಹಾಗೂ ಜಮೀನುಗಳು ಜಲಾವೃತ್ತವಾಗಿದೆ.

ಕೊಳ್ಳೇಗಾಲ: ಶುಕ್ರವಾರ ರಾತ್ರಿ, ಶನಿವಾರ ಬೆಳಗ್ಗೆಯೂ ಸುರಿದ ಧಾರಾಕಾರ ಮತ್ತು ಸತತ ಮಳೆಗೆ ಕಬಿನಿಯಿಂದ ಹೆಚ್ಚು ನೀರು ಹರಿದಿದ್ದರಿಂದಾಗಿ ಕೊಳ್ಳೇಗಾಲ ಪಟ್ಟಣ ವ್ಯಾಪ್ತಿಗೆ ಹೊಂದಿಕೊಂಡಿರುವ ಕುಪ್ಪಮ್ಮ ಕಾಲುವೆ ತುಂಬಿದ ಪರಿಣಾಮ ಹಲವು ಮನೆಗಳು, ನೂರಾರು ಎಕರೆ ಜಮೀನು ಹರಿದು ಮನೆಗಳು ಹಾಗೂ ಜಮೀನುಗಳು ಜಲಾವೃತ್ತವಾಗಿದೆ. ಕೊಳ್ಳೇಗಾಲ ನಗರವ್ಯಾಪ್ತಿಯ ನಾಲ್ಕು ಮನೆಗಳಿಗೆ ಮತ್ತು ಉಪ್ಪಾರ ಮೋಳೆ ಬಡಾವಣೆಯ ಕುಪ್ಪಮ್ಮ ಕಾಲುವೆ ಅಕ್ಕಪಕ್ಕದ ಜಮೀನುಗಳಿಗೂ ನೀರು ನುಗ್ಗಿದ ಪರಿಣಾಮ ಜಮೀನು ಜಲಾವೃತ್ತಗೊಂಡಿದ್ದು ಇದರಿಂದಾಗಿ ರೈತರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರಲ್ಲದೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದ್ದಾರೆ. ಜಲಾವೃತ ಪ್ರದೇಶಗಳಿಗೆ ನಗರಸಭೆ ಆಯುಕ್ತ ರಮೇಶ್, ಪರಿಸರ ಇಂಜಿನಿಯರ್ ಪ್ರಸನ್ನ, ಆರೋಗ್ಯ ನಿರೀಕ್ಷಕ ಚೇತನ್ ಕುಮಾರ್ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ ಸರಾಗವಾಗಿ ನೀರು ಹರಿಯಲು ಕ್ರಮ ವಹಿಸುವಲ್ಲಿ ಕ್ರಮಕೈಗೊಂಡರಲ್ಲದೆ ನಿವಾಸಿಗಳ ಮನವಿ ಆಲಿಸಿದರು.

ಈ ವೇಳೆ 5ನೇ ವಾರ್ಡ್ ಬಿಜೆಪಿ ಸದಸ್ಯ ಧರಣೀಶ್ ಮಳೆಯಿಂದಾಗಿ ನಷ್ಟಕ್ಕೊಳಗಾದವರಿಗೆ ಸೂಕ್ತ ಪರಿಹಾರ ನೀಡುವ ಜೊತೆಗೆ ಮುಂದೆ ಇಂತಹ ಘಟನೆ ಜರುಗದಂತೆ ಸೂಕ್ತ ಕ್ರಮವಹಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಸತತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ತುರ್ತು ಸಂಚರಿಸಬೇಕಾದ ಜನರು ಪರದಾಡುವಂತಾಯಿತು. ಕೆಲ ಬಡಾವಣೆಗಳಲ್ಲಿ ಮನೆಗಳಿಗೆ ನೀರು ಪ್ರವೇಶಿಸಿದ ಹಿನ್ನೆಲೆಯಲ್ಲಿ ಮಹಿಳೆಯರು ನೀರು ಹೊರ ಹಾಕುತ್ತಿದ್ದ ದೃಶ್ಯ ಕಂಡು ಬಂತು.ಮಳೆ ಅವಾಂತರ ಎಲ್ಲೆಲ್ಲಿ ಹಾನಿ..!

ಕೊಳ್ಳೇಗಾಲ ಪಟ್ಟಣ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಿಂದಾಗಿ ಇಂಧಿರಾಗಾಂಧಿ ಕಾಲೋನಿಯ ಬಡಾವಣೆಗೂ ನೀರು ನುಗ್ಗಿ ಹಲವು ಮನೆಗಳು ಜಲಾವೃತಗೊಂಡಿದ್ದು ತಾಲೂಕಿನ ಮಧುವನಹಳ್ಳಿಯ ಮನೆಯೊಂದು ಕುಸಿದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಪಟ್ಟಣದ ಕೈಮಗ್ಗ ಕೆಲಸ ಮಾಡುವ ಶ್ರೀನಿವಾಸ್, ಮಂಜಮ್ಮ, ಚಲುವಮ್ಮ , ಆಡಿಟರ್ ಶ್ರೀನಿವಾಸ್ ಎನ್ನುವರ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಗಳು ಜಲಾವೃತ್ತವಾಗಿವೆ. ಅದೇ ರೀತಿಯಲ್ಲಿ ಕುಪ್ಪಮ್ಮ ಕಾಲುವೆಯು ನೀರು ಹೆಚ್ಚಳದಿಂದಾಗಿ ಉಪ್ಪಾರ ಮೋಳೆ ಹಾಗೂ ಹಳೇ ಅಣಗಳ್ಳಿ ಕಾಲುವೆ ಅಕ್ಕಪಕ್ಕದ ಜಮೀನುಗಳು ನೀರು ತುಂಬಿ ಹರಿದ ಹಿನ್ನೆಲೆಯಲ್ಲಿ ಜಮೀನುಗಳು ಜಲಾವೃತ್ತಗೊಂಡಿವೆ. ಇನ್ನು ಮಧುವನಹಳ್ಳಿ ಗ್ರಾಮದ ದೇವಮ್ಮ ಎನ್ನುವವರ ಮನೆ ಗೋಡೆ ಕುಸಿದಿದ್ದು ದೇವಮ್ಮ ಅಪಾಯದಿಂದ ಪಾರಾಗಿದ್ದು ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.