ಉಳ್ಳಾಲ: ಕುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡಿಪು ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ, ಬೀದಿ ದೀಪ ಹಾಗೂ ಸಂಪರ್ಕ ರಸ್ತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸರಿಪಡಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಡಿಪು ವ್ಯಾಪ್ತಿಯ ಗ್ರಾಮಸ್ಥರು ಬಳಕೆದಾರರ ಹಿತ ರಕ್ಷಣಾ ವೇದಿಕೆ‌ ಮುಡಿಪು ನೇತೃತ್ವದಲ್ಲಿ ಸೋಮವಾರ ಕುರ್ನಾಡು ಗ್ರಾಮ ಪಂಚಾಯಿತಿಗೆ ತೆರಳಿ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಗ್ರಾಪಂ ಪಿಡಿಒ ಪ್ರವೀಣ್, ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.ಈ ಸಂದರ್ಭ ಮುಡಿಪು ಬಳಕೆದಾರರ ಹಿತ ರಕ್ಷಣಾ ವೇದಿಕೆ ಅಧ್ಯಕ ವಿಕಾಸ್ ಮುಡಿಪು, ಕಾರ್ಯದರ್ಶಿ ಮಾಪಣ್ಣ ಭಟ್, ಪ್ರಭಾಕರ್ ಮುಡಿಪು, ಸುಂದರ ಮಾಸ್ಟರ್ ಮುಡಿಪು, ಜೆಸಿಂತಾ ಮುಡಿಪು, ಸವಿತಾ ಭಟ್ ಮುಡಿಪು, ಪೂವಪ್ಪ ಗರಡಿಪಳ್ಳ, ವಿಠಲ ಶೆಟ್ಟಿ, ಸಂದೇಶ್ ಮುಡಿಪು ಉಪಸ್ಥಿತರಿದ್ದರು.