ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯು 2025 ಮಾರ್ಚ ಅಂತ್ಯಕ್ಕೆ 17 ಶಾಖೆಗಳನ್ನು ಹೊಂದಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಗ್ರಾಹಕರ ಸಹಕಾರ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರ ನಿಶ್ವಾರ್ಥ ಸೇವೆಯಿಂದ ₹5.85 ಕೋಟಿ ನಿವ್ವಳ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಂಘದ ಸೊಸೈಟಿ ಅಧ್ಯಕ್ಷ ಸುಭಾಸ ಗಂಗಪ್ಪ ಬೆಳಕೂಡ ಹೇಳಿದರು.ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ಸೊಸೈಟಿಯ ಕಳೆದ ಆರ್ಥಿಕ ವರ್ಷದ ಅಂತ್ಯದ ಪ್ರಗತಿ ಬಗ್ಗೆ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸೊಸೈಟಿಯು ಕಳೆದ ಮಾರ್ಚ 31 ಆರ್ಥಿಕ ವರ್ಷದ ಅಂತ್ಯಕ್ಕೆ ₹4.28 ಕೋಟಿ ಶೇರು ಹಣ, ₹299.70 ಕೋಟಿ ಠೇವುಗಳು, ₹26.25 ಕೋಟಿ ನಿಧಿಗಳನ್ನು ಹೊಂದಿ ಮತ್ತು ₹115.28 ಕೋಟಿ ವಿವಿಧ ಬ್ಯಾಂಕುಗಳಲ್ಲಿ ಗುಂತಾಯಿಸಿ ಒಟ್ಟು ₹345.10 ಕೋಟಿ ದುಡ್ಡಿಯುವ ಬಂಡವಾಳ ಹೊಂದಿ ಸೊಸೈಟಿಯ ಗ್ರಾಹಕರಿಗೆ ವಿವಿಧ ರೀತಿಯ ಒಟ್ಟು ₹193.47 ಕೋಟಿ ಸಾಲ ವಿತರಿಸುವುದರೊಂದಿಗೆ ₹1546.95 ಕೋಟಿ ವಾರ್ಷಿಕ ವಹಿವಾಟು ನಡೆಸಿದೆ ಎಂದರು.ಸೊಸೈಟಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಿ.ಸಿ.ಮುಗಳಖೋಡ ಮಾತನಾಡಿ, ಸೊಸೈಟಿಯ 17 ಶಾಖೆಗಳಲ್ಲಿ ಈಗಾಲೇ ತುಕ್ಕಾನಟ್ಟಿ, ತೇರದಾಳ, ರಾಮದುರ್ಗ ಮತ್ತು ಮಹಾಲಿಂಗಪೂರ ಶಾಖೆಗಳನ್ನು ಪ್ರಧಾನ ಕಚೇರಿಯ ಮಾದರಿಯಲ್ಲಿ ತಲಾ ಸುಮಾರು ₹1 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಯರಗಟ್ಟಿ ಕೊಪ್ಪ, ಕೆ.ಎಸ್.ಬನಹಟ್ಟಿ ಶಾಖೆಗಳ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಖರೀದಿಸಲಾಗಿದೆ. ಶೀಘ್ರದಲ್ಲಿಯೇ ಅಥಣಿ ಪಟ್ಟಣದಲ್ಲಿ 18ನೇ ಶಾಖೆಯನ್ನು ಪ್ರಾರಂಭಿಸಲಾಗುವುದು. ಸೊಸೈಟಿಯ ಗ್ರಾಹಕರಿಗೆ ಶೀಘ್ರ ಹಣಕಾಸಿನ ವರ್ಗಾವಣೆಯ ಅನುಕ್ಕೂಲಕ್ಕಾಗಿ ಕೋರ್ ಬ್ಯಾಂಕಿಂಗ್ ಸೌಲಭ್ಯದ ಸೇವೆಯನ್ನು ಆರಂಭಿಸಲಾಗುವುದು. ಸೊಸೈಟಿಯಿಂದ 25 ಶಾಖೆಗಳನ್ನು ಹೊಂದುವ ಗುರಿ ಹೊಂದಲಾಗಿದೆ ಎಂದರು.ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೂಡಿ ಮಾತನಾಡಿ, ಸೊಸೈಟಿಯು ಆರಂಭವಾಗಿ 30 ವರ್ಷಗಳಿಂದ ಆಡಳಿತ ಮಂಡಳಿಯ ನಿಶ್ವಾರ್ಥ ಸೇವೆಯಿಂದ ಮತ್ತು ಗ್ರಾಹಕರ ಸಹಾಯ-ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಪ್ರಗತಿಯಥ ಮುನ್ನಡೆಯುತ್ತದೆ ಎಂದು ವಿವರಿಸಿದರು.ಸಭೆಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಇಸ್ಮಾಯಿಲ್ ಕಳ್ಳಿಮನಿ, ನಿರ್ದೇಶಕರಾದ ಲಕ್ಕಪ್ಪ ಪೂಜೇರಿ, ಗೊಡಚಪ್ಪ ಮುರಗೋಡ, ಬಸವರಾಜ ಬೆಳಕೂಡ, ವಿಶಾಲ ಶಿಲವಂತ, ರಾಮಪ್ಪ ಬಳಿಗಾರ, ಉಮಾ ಬೆಳಕೂಡ, ರುಕ್ಮವ್ವ ಪೂಜೇರಿ, ಮಾಲಾ ಬೆಳಕೂಡ, ಶಾಂತವ್ವ ಬೋರಗಲ್, ಶ್ಯಾಲನ್ ಕೊಡತೆ ಇದ್ದರು.
ಸೊಸೈಟಿಯು ಕಳೆದ ಮಾರ್ಚ್ 31 ಆರ್ಥಿಕ ವರ್ಷದ ಅಂತ್ಯಕ್ಕೆ ₹4.28 ಕೋಟಿ ಶೇರು ಹಣ, ₹299.70 ಕೋಟಿ ಠೇವುಗಳು, ₹26.25 ಕೋಟಿ ನಿಧಿಗಳನ್ನು ಹೊಂದಿ ಮತ್ತು ₹115.28 ಕೋಟಿ ವಿವಿಧ ಬ್ಯಾಂಕುಗಳಲ್ಲಿ ಗುಂತಾಯಿಸಿ ಒಟ್ಟು ₹345.10 ಕೋಟಿ ದುಡ್ಡಿಯುವ ಬಂಡವಾಳ ಹೊಂದಿ ಸೊಸೈಟಿಯ ಗ್ರಾಹಕರಿಗೆ ವಿವಿಧ ರೀತಿಯ ಒಟ್ಟು ₹193.47 ಕೋಟಿ ಸಾಲ ವಿತರಿಸುವುದರೊಂದಿಗೆ ₹1546.95 ಕೋಟಿ ವಾರ್ಷಿಕ ವಹಿವಾಟು ನಡೆಸಿದೆ.
-ಸುಭಾಸ ಗಂಗಪ್ಪ ಬೆಳಕೂಡ, ಸಂಘದ ಸೊಸೈಟಿ ಅಧ್ಯಕ್ಷರು.ಸೊಸೈಟಿಯ 17 ಶಾಖೆಗಳಲ್ಲಿ ಈಗಾಲೇ ತುಕ್ಕಾನಟ್ಟಿ, ತೇರದಾಳ, ರಾಮದುರ್ಗ ಮತ್ತು ಮಹಾಲಿಂಗಪೂರ ಶಾಖೆಗಳನ್ನು ಪ್ರಧಾನ ಕಚೇರಿಯ ಮಾದರಿಯಲ್ಲಿ ತಲಾ ಸುಮಾರು ₹1 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಯರಗಟ್ಟಿ ಕೊಪ್ಪ, ಕೆ.ಎಸ್.ಬನಹಟ್ಟಿ ಶಾಖೆಗಳ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಖರೀದಿಸಲಾಗಿದೆ. ಶೀಘ್ರದಲ್ಲಿಯೇ ಅಥಣಿ ಪಟ್ಟಣದಲ್ಲಿ 18ನೇ ಶಾಖೆಯನ್ನು ಪ್ರಾರಂಭಿಸಲಾಗುವುದು.
-ಬಿ.ಸಿ.ಮುಗಳಖೋಡ, ಸೊಸೈಟಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರು.