ಸಾರಾಂಶ
ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಶರಣ ಚಳವಳಿಯ ಮೂಲಕ ಹೊಸ ಚಿಂತನೆಯ ಪ್ರವಾಹವನ್ನು ತಂದವರು ಭಕ್ತಿ ಭಂಡಾರಿ ಬಸವಣ್ಣ. ಇಂದು ಅವರ ಭಕ್ತಿ, ಕಾಯಕನಿಷ್ಠೆ ನೆನೆಯುವ ದಿನವಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ವೀರಶೈವ- ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕ ವತಿಯಿಂದ ಕುಶಾಲನಗರ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಿತು.ಶಿಕ್ಷಕ ಟಿ.ಬಿ. ಮಂಜುನಾಥ್ ಮಾತನಾಡಿ, ಸಮಾಜದ ಎಲ್ಲ ವರ್ಗದ ಜನರನ್ನು ಒಂದು ಗೂಡಿಸಿದ ಬಸವಣ್ಣ, ಜಾತೀಯತೆಯ ವಿರುದ್ಧ ಸಮರ ಸಾರಿದರು. ಅಂತರಂಗ ಬಹಿರಂಗ ಶುದ್ಧತೆಯ ಬಗ್ಗೆ, ಧರ್ಮದ ಮಹತ್ವದ ಬಗ್ಗೆ ಬಸವಣ್ಣನವರಲ್ಲಿದ್ದ ಆಲೋಚನೆಗಳನ್ನು ವಚನಗಳ ಮೂಲಕ ತಿಳಿಸಿದ್ದಾರೆ ಎಂದರು.
ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಶರಣ ಚಳವಳಿಯ ಮೂಲಕ ಹೊಸ ಚಿಂತನೆಯ ಪ್ರವಾಹವನ್ನು ತಂದವರು ಭಕ್ತಿ ಭಂಡಾರಿ ಬಸವಣ್ಣ. ಇಂದು ಅವರ ಭಕ್ತಿ, ಕಾಯಕನಿಷ್ಠೆ ನೆನೆಯುವ ದಿನವಾಗಿದೆ ಎಂದರು.ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಟಿ.ಎಸ್.ಶಾಂಭಶಿವಮೂರ್ತಿ, ಕೋಶಾಧಿಕಾರಿ ಎಚ್.ಪಿ.ಉದಯ್ ಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ವೀರಶೈವ ಲಿಂಗಾಯತ ನೌಕರರ ಸಂಘ ಜಿಲ್ಲಾಧ್ಯಕ್ಷ ಎಸ್.ನಂದೀಶ್, ಪದಾಧಿಕಾರಿಗಳಾದ ಬಿ.ನಟರಾಜ್, ಎಸ್.ವಿರೂಪಾಕ್ಷ, ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಎಂ.ಬಿ.ಬಸವರಾಜು, ಅಕ್ಕನ ಬಳಗದ ಅಧ್ಯಕ್ಷೆ ಕಮಲಾ ಉದಯ್ ಕುಮಾರ್, ಲತಾ, ಮುಖಂಡರಾದ ಪಿ.ಮಹಾದೇವಪ್ಪ, ಮತ್ತಿತರರು ಇದ್ದರು.
ಸಮಾಜದ ಮಹಿಳೆಯರು ವಚನ ಗಾಯನ ಮಾಡಿದರು.