ಕುಶಾಲನಗರ ಸಮೀಪದ ಮಾದಾಪಟ್ಟಣ ಮತ್ತು ಬಸವನಹಳ್ಳಿಯ ಹೊಸ ಕಾಡು ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.
ಕುಶಾಲನಗರ: ಕುಶಾಲನಗರ ಸಮೀಪದ ಮಾದಾಪಟ್ಟಣ ಮತ್ತು ಬಸವನಹಳ್ಳಿಯ ಹೊಸ ಕಾಡು ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.
ಮಾದಾಪಟ್ಟಣದಲ್ಲಿ ರೂ 25 ಲಕ್ಷ ವೆಚ್ಚದಲ್ಲಿ 375 ಮೀ ಉದ್ದದ್ದ ಕಾಂಕ್ರಿಟ್ ರಸ್ತೆ ಮತ್ತು ರೂ 50 ಲಕ್ಷ ವೆಚ್ಚದಲ್ಲಿ ಬಸವನಹಳ್ಳಿ ಸಮೀಪ ಹೊಸಕಾಡಿಗೆ ಸಂಪರ್ಕ ಕಲ್ಪಿಸುವ ಎರಡು ಕಡೆ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.ಈ ಸಂದರ್ಭ ಮಾತನಾಡಿದ ಶಾಸಕರು, ಅಕ್ಟೋಬರ್ ತಿಂಗಳಲ್ಲಿ ಕುಶಾಲನಗರ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ಸೇರಿದಂತೆ ಬಸವನಹಳ್ಳಿಯಲ್ಲಿ ಪೂರ್ಣಗೊಂಡಿರುವ ಬಸ್ ಡಿಪೋ ಲೋಕಾರ್ಪಣೆ ಗೆ ಪೂರ್ವಸಿದ್ಧತೆಗಳು ನಡೆದಿದೆ ಎಂದರು.ಸರ್ಕಾರಿ ಪಾಲಿಟೆಕ್ನಿಕ್ ಬಳಿ ನಿರ್ಮಾಣಗೊಳ್ಳುತ್ತಿರುವ ಪ್ರಜಾ ಸೌಧ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು ಮುಂದಿನ ಫೆಬ್ರವರಿ-ಏಪ್ರಿಲ್ ನಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ರಥಬೀದಿ ಸೇರಿದಂತೆ ಕಾವೇರಿ ಸೇತುವೆ ಬಳಿಯಿಂದ ಗಂಧದಕೋಟೆ ವರೆಗೆ ಹೆದ್ದಾರಿ ಬದಿ ಲೈಟಿಂಗ್ಸ್ ನಿಂದಿಗೆ ಫುಟ್ಪಾತ್ ನಿರ್ಮಾಣ ಚಿಂತನೆ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲ ಗ್ರಾಮ ವ್ಯಾಪ್ತಿಯ ಮುಖಂಡರಾದ ದಾಮೋದರ್, ನಂಗಾರು ಜಗ, ಚಂದ್ರಶೇಖರ್, ಮಹೇಶ್ ಮತ್ತಿತರರು ಇದ್ದರು.