ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ ತೀರ್ಥರೂಪಿಣಿಯಾಗಿ ಹರಿದು ನಾಡಿನ ಜೀವನದಿಯಾಗಿರುವ ಕಾವೇರಿ ಕಲುಷಿತಗೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕುಶಾಲನಗರ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರದಲ್ಲಿ ನಮಾಮಿ ಕಾವೇರಿ ಬಳಗದ ಆಶ್ರಯದಲ್ಲಿ ರೋಟರಿ ಸಹಯೋಗದೊಂದಿಗೆ ನಡೆದ 175 ನೆಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಕಾವೇರಿಯ ಆರಾಧನೆಯೊಂದಿಗೆ ನದಿ ನೀರು ಸ್ವಚ್ಛವಾಗಿ ಹರಿಯುವ ಸಂದರ್ಭ ಗ್ರಾಮ ಪಟ್ಟಣಗಳ ಕಲುಷಿತ ನೀರು ನೇರವಾಗಿ ಸೇರದಂತೆ ಎಚ್ಚರ ವಹಿಸಬೇಕು. ನಿರಂತರವಾಗಿ ಕಾರ್ಯಕ್ರಮಗಳ ಮೂಲಕ ನದಿ ಸ್ವಚ್ಛತೆ ಬಗ್ಗೆ ನದಿ ಪರಿಸರದ ಕಾಳಜಿ ವಹಿಸುತ್ತಿರುವ ಬಳಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು,ಅರ್ಚಕ ಕೃಷ್ಣಮೂರ್ತಿ ಭಟ್ ಅವರು ಕುಂಕುಮಾರ್ಚನೆ ಅಷ್ಟೋತ್ತರ ನಂತರ ನದಿಗೆ ಆರತಿ ಬೆಳಗಿದರು.ರೋಟರಿ ಕಾರ್ಯದರ್ಶಿ ಹೆಚ್ ಪಿ ಮಂಜುನಾಥ್, ಪ್ರಮುಖರಾದ ಎಸ್ ಕೆ ಸತೀಶ್, ಶೋಭಾ ಸತೀಶ್, ಕಾವೇರಿ ಮಹಾ ಆರತಿ ಬಳಗದ ವನಿತಾ ಚಂದ್ರಮೋಹನ್, ಮಂಡೆಪಂಡ ಬೋಸ್ ಮೊಣ್ಣಪ್ಪ, ವೈಶಾಕ್, ಪ್ರವೀಣ್, ಧರಣಿ ಸೋಮಯ್ಯ ಮತ್ತಿತರರು ಇದ್ದರು. ಇದೇ ಸಂದರ್ಭ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.