ಜಾನೆಕುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕುವೆಂಪು ಜನ್ಮದಿನಾಚರಣೆ

| Published : Jan 03 2024, 01:45 AM IST

ಜಾನೆಕುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕುವೆಂಪು ಜನ್ಮದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರಲ್ಲದೆ, ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಮೂಲಕ ಗುರಿಸಾಧನೆಯತ್ತ ಮುನ್ನುಗ್ಗಬೇಕು.

ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕ, ಸನ್ಮಾರ್ಗ ಗೆಳೆಯರ ಬಳಗ, ಶ್ರೀ ಮಂಜುನಾಥ ಲಲಿತ ಕಲಾ ಬಳಗ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಕನ್ನಡ ಭಾಷಾ ಸಂಘ ಸಹಯೋಗದಲ್ಲಿ ಜಾನೆಕುಂಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ "ವಿಶ್ವಮಾನವ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ " ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸನ್ಮಾರ್ಗ ಗೆಳೆಯರ ಬಳಗದ ಉಪಾಧ್ಯಕ್ಷ ಸಲ್ಲಾ ಹನುಮಂತರೆಡ್ಡಿ ಅವರು, ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರಲ್ಲದೆ, ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಮೂಲಕ ಗುರಿಸಾಧನೆಯತ್ತ ಮುನ್ನುಗ್ಗಬೇಕು ಎಂದರು.

ಕುವೆಂಪು ಜೀವನ ಮತ್ತು ಸಾಹಿತ್ಯ ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದ ಕಪ್ಪಗಲ್ಲು ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಎಚ್.ಎಂ. ನೇತ್ರಾ ಅವರು, ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃತಿಯಿಂದ ಪ್ರಾರಂಭಿಸಿ, ನಂತರ ಕನ್ನಡಕ್ಕೆ ಬದಲಾದ ಕುವೆಂಪು ಅವರು ಮಾತೃಭಾಷೆಯಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಪಾರವಾದ ಸಾಧನೆಗೈದ ಮಹನೀಯ ಎನಿಸಿದರು ಎಂದರು.

ಶಾಲೆಯ ಮುಖ್ಯಗುರು ಬಿ.ಆರ್.ಮಾಲಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜನಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜೆ.ಎಂ. ಬಸವರಾಜ ಸ್ವಾಮಿ ಮಾತನಾಡಿದರು. ಶಾಲೆಯ ಭೂದಾನಿಗಳಾದ ಸಿದ್ದಲಿಂಗಪ್ಪ, ಎಸ್‌ಎಂಡಿಸಿ ಅಧ್ಯಕ್ಷ ರೇವಪ್ಪ, ಶರಭೇಶ್ವರ ಬಿಎಡ್ ಕಾಲೇಜಿನ ಉಪನ್ಯಾಸಕ ಕೆ.ಎಂ. ಶಿವಾನಂದ, ಕಪ್ಪಗಲ್ ನಿವೃತ್ತ ಬಡ್ತಿ ಗುರು ಮೆಹತಾಬ್, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಹನುಮಂತಪ್ಪ, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಜಾನೆಕುಂಟೆ ಡಿ. ದೊಡ್ಡಬಸಪ್ಪ, ದತ್ತಿದಾನಿಗಳಾದ ಜಿ.ಆರ್. ವೆಂಕಟೇಶಲು, ರವಿಕಿರಣ್, ಕಸಾಪ ಗ್ರಾಮೀಣ ಘಟಕದ ಸಂಘಟನಾ ಕಾರ್ಯದರ್ಶಿಗಳಾದ ಟಿ. ಮಲ್ಲಿಕಾರ್ಜುನ, ಟಿ. ಪ್ರಕಾಶ್, ಗೌರವ ಕಾರ್ಯದರ್ಶಿಗಳಾದ ಜೆ. ಹುಸೇನ್ ಬಾಷಾ, ಕಪ್ಪಗಲ್ ಚಂದ್ರಶೇಖರ ಆಚಾರ್, ಶಿಕ್ಷಣ ಪ್ರೇಮಿ ಜಾನೆಕುಂಟೆ ಮಂಜುನಾಥಸ್ವಾಮಿ ಹಾಗೂ ಶ್ರೀ ಮಂಜುನಾಥ ಲಲಿತ ಕಲಾ ಬಳಗದ ಅಧ್ಯಕ್ಷ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಇದ್ದರು. ಕಸಾಪ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಎ. ಎರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಕನ್ನಡ ಶಿಕ್ಷಕರಾದ ಎಸ್. ಸತ್ಯನಾರಾಯಣ ಹಾಗೂ ಶಿಕ್ಷಕ ಎಚ್. ರಾಜಶೇಖರ ಗೌಡ ಕಾರ್ಯಕ್ರಮ ನಿರ್ವಹಿಸಿದರು.