ಭಾರತದ ಕಣ ಕಣದಲ್ಲೂ ಸಂವಿಧಾನ

| Published : Nov 28 2024, 12:32 AM IST

ಸಾರಾಂಶ

ವಿಶ್ವಜ್ಞಾನಿ ಅಂತ ಅಂಬೇಡ್ಕರ್ ಅವರನ್ನು ಕರೆಸಿಕೊಳ್ಳುವುದು ಸಲುಭದ ಮಾತಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುಭಾರತದ ಕಣ ಕಣದಲ್ಲೂ ಅಂಬೇಡ್ಕರ್ ಸಂವಿಧಾನ ಸಮಾನತೆಯನ್ನು ಸಾರಿದೆ ಎಂದು ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ. ಎನ್.ಕೆ. ಲೋಲಾಕ್ಷಿ ವಿಶ್ಲೇಷಿಸಿದರು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ವಿಭಾಗದ ಸಮಿತಿ ಕೊಠಡಿಯಲ್ಲಿ ಆಯೋಜಿಸಿದ್ದ ಸಂವಿಧಾನ ದಿನದ ಅಂಗವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ವಿಷಯ ಮಂಡನೆ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿಶ್ವಜ್ಞಾನಿ ಅಂತ ಅಂಬೇಡ್ಕರ್ ಅವರನ್ನು ಕರೆಸಿಕೊಳ್ಳುವುದು ಸಲುಭದ ಮಾತಲ್ಲ. ಅಂತಹ ಜ್ಞಾನವನ್ನು ತುಂಬಿ ಭಾರತಕ್ಕೆ ಬಹುತ್ವದ ಸಂವಿಧಾನ ಕೊಟ್ಟಿದ್ದಾರೆ. ಹಾಗಾಗಿ ಸಂವಿಧಾನವನ್ನು ನಾವು ಸಂರಕ್ಷಿಸಿದರೇ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಸಂವಿಧಾನವನ್ನು ಉಳಿಸಿಕೊಂಡು ಸಂವಿಧಾನದ ಮಹತ್ವವನ್ನು ತಿಳಿಸುವ ಕೆಲಸವನ್ನು ಚರ್ಚೆ ಮೂಲಕ ಹೆಚ್ಚುಹೆಚ್ಚು ಆಗಬೇಕು ಎಂದು ಸಲಹೆ ನೀಡಿದರು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ಪದವಿಯ ತೃತೀಯ ಚತುರ್ಮಾಸದ ವಿದ್ಯಾರ್ಥಿಗಳಾದ ಎ.ಕೆ. ತೇಜೇಶ ಸಂವಿಧಾನ ಮತ್ತು ಯುವ ಜನತೆ, ಎಲ್.ಎಸ್. ಸ್ವರ್ಣ ಪ್ರಜಾಪ್ರಭುತ್ವ ಮತ್ರು ಯುವ ಜನತೆ ಹಾಗೂ ಎನ್. ರಾಜೇಂದ್ರ ಮೂಲಭೂತ ಹಕ್ಕುಗಳು ಮತ್ತು ಯುವ ಜನತೆ ಎಂಬ ವಿಷಯಗಳನ್ನು ಕುರಿತು ವಿಷಯ ಮಂಡಿಸಿದರು.