ಸಾರಾಂಶ
ಛಿದ್ರಗೊಂಡ ಕನ್ನಡ ನಾಡು ಒಂದಾಗಬೇಕು. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಶಿಕ್ಷಣ ಮಾಧ್ಯಮ ಕನ್ನಡವಾಗಬೇಕು ಎಂದು ದೀಕ್ಷೆ ತೊಟ್ಟ ಕವಿ
ಹಿರೇಕೆರೂರು: ರಾವಣತ್ವಕ್ಕೆ ರಾಮತ್ವದ ಪರಿಕಲ್ಪನೆ ನೀಡುವುದೇ ಕುವೆಂಪುರವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಮಹೋನ್ನತ ಉದ್ದೇಶ ಆಗಿದೆ ಎಂದು ಪ್ರಾಚಾರ್ಯ ಡಾ. ಎಸ್.ಪಿ. ಗೌಡರ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚಣೆ ನಿಮಿತ್ತ ವಿಶ್ವಮಾನವ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಕ್ಕೆ ವಿಶ್ವಮಟ್ಟದ ಗೌರವ ತಂದುಕೊಟ್ಟ ಆಧುನಿಕ ವಾಲ್ಮೀಕಿ ಎಂದು ಕರೆಸಿಕೊಂಡಿರುವ ಕವಿ ಕುವೆಂಪು ಕನ್ನಡ ಪ್ರೇಮ ಅನುಪಮವಾದದು ಎಂದರು.ಛಿದ್ರಗೊಂಡ ಕನ್ನಡ ನಾಡು ಒಂದಾಗಬೇಕು. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಶಿಕ್ಷಣ ಮಾಧ್ಯಮ ಕನ್ನಡವಾಗಬೇಕು ಎಂದು ದೀಕ್ಷೆ ತೊಟ್ಟ ಕವಿ ಎಂದರು.
ಜಾತಿ ಮತ ಧರ್ಮ ಎಲ್ಲವನ್ನು ಮೀರಿ ನಡೆಯಬೇಕು ಎಂದು ಸರ್ವೋದಯ ತತ್ವ ಪ್ರತಿಪಾದಿಸಿದರು. ವಿಜ್ಞಾನ ಒಂದು ಕಣ್ಣಾಗಿದ್ದರೆ ಆಧ್ಯಾತ್ಮ ಮತ್ತೊಂದು ಕಣ್ಣಾಗಿತ್ತು. ಪ್ರಕೃತಿ ಆರಾಧಕರಾದ ಕುವೆಂಪು ಮಲೆನಾಡಿನ ಚಿತ್ರಣವನ್ನು ತಮ್ಮ ಕಾದಂಬರಿಗಳಲ್ಲಿ ದಟ್ಟವಾಗಿ ಚಿತ್ರಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಎಂ.ಬಿ.ಬದನಿಕಾಯಿ, ಬಿ.ಎಂ. ರಾಮಚಂದ್ರಪ್ಪ, ಡಾ.ಹೇಮಾ ಯರುಗುಂಟಿ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಪಿ.ಐ.ಸಿದ್ದನಗೌಡರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.