ಸಾರಾಂಶ
ತುಮಕೂರು: ಕುವೆಂಪು ಅವರ ವೈಚಾರಿಕತೆಯ ವಿಶ್ವಮಾನವ ಸಂದೇಶ ಇಂದಿಗೂ ಜೀವಂತವಾಗಿವೆ ಎಂದು ಡಯಟ್‌ನ ನಿವೃತ್ತ ಪ್ರಾಧ್ಯಾಪಕ ಅರಸಪ್ಪ ಅಭಿಪ್ರಾಯಪಟ್ಟರು.
ತುಮಕೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗೂಳೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸುವರ್ಣ ಕರ್ನಾಟಕ ವರ್ಷಾಚರಣೆ ಅಂಗವಾಗಿ ಕನ್ನಡ ನಡೆ ಶಾಲಾ ಕಾಲೇಜು ಕಡೆ ಕಾರ್ಯಕ್ರಮ ಹೊನ್ನುಡಿಕೆಯ ಸ್ವರ್ಣಾಂಭ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಡೀ ದೇಶ ಮತ್ತು ವಿಶ್ವವು ವೈಜ್ಞಾನಿಕ ಕ್ಷೇತ್ರದಲ್ಲಿ ಬದಲಾವಣೆ, ಮೌಢ್ಯಗಳು, ತಾರತಮ್ಯತೆಗಳು ಬೆಳೆಯುತ್ತಲೇ ಇವೆ. ಲೌಕಿಕ ಜೀವನದ ವೈಭವೀಕರಣ ಹೆಚ್ಚಾಗಿ ಸ್ವಾರ್ಥತೆ, ಅಧಿಕಾರದ ಬೆನ್ನು ಬಿದ್ದಿರುವ ಈಗಿನ ಕಾಲಘಟ್ಟದಲ್ಲಿ ಆಂತರಿಕವಾಗಿ ವಿವಿಧ ಸಾಮಾಜಿಕ ರೋಗಗಳಿಂದ ಬಳಲುತ್ತಿದ್ದೇವೆ. ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆ, ಮಾನಸಿಕ ಮತ್ತು ಸಾಮಾಜಿಕ ವಿಶಾಲತೆಯನ್ನು ಬಿಟ್ಟು ಹಣ ಮತ್ತು ಸಂಪತ್ತು ಮುಖ್ಯವಾಗಿದೆ ಎಂದರು.
ಕುವೆಂಪು ಅವರು ಬರೆದ ನಾಟಕಗಳು, ಕಾದಂಬರಿ, ಕಾವ್ಯ ಮತ್ತು ಮಕ್ಕಳ ಸಾಹಿತ್ಯ, ಕವನಗಳು, ನೂರಾರು ಸಾಹಿತ್ಯಕೃತಿ ರಚನೆಗಳನ್ನು ಮಕ್ಕಳಿಗೆ ಪರಿಚಯಿಸಿದವರು. ಬೊಮ್ಮನಹಳ್ಳಿ ಕಿಂದರಿಜೋಗಿ ಕವನಗಳನ್ನು ಮಕ್ಕಳಿಗೆ ಹೇಳಿಕೊಡುತ್ತಾ ಅದರ ಸಾರಾಂಶವನ್ನು ಮಕ್ಕಳಿಗೆ ತಿಳಿಸುತ್ತಾ ಹತ್ತನೇ ತರಗತಿ ಮಕ್ಕಳಿಗೆ ನಲವತ್ತು ಮಕ್ಕಳಿಗೆ ಪುಸ್ತಕ ಹಂಚಿದರು.ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವಕುಮಾರ್ ಚಿಕ್ಕಬೆಳ್ಳಾವಿ ಸುವರ್ಣ ಕರ್ನಾಟಕದ ಅಂಗವಾಗಿ ಹಮ್ಮಿಕೊಂಡಿರುವ ಉದ್ದೇಶ ಶಾಲಾ ಮಕ್ಕಳಿಗೆ ಕರ್ನಾಟಕ ಏಕೀಕರಣ ಯಾವಾಗ ಬಂದಿತು ಎಂಬ ವಿಚಾರ ಮತ್ತು ಪರಿಷತ್ತಿನ ಕಾರ್ಯ ಉದ್ದೇಶಗಳನ್ನು ಪರಿಚಯಿಸಿದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಶಿವಾನಂದಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಪ್ರೊ. ಶಶಿಕುಮಾರ್, ಅದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿ ಪೊಲೀಸ್ ಇಲಾಖೆ ಅಧೀಕ್ಷಕರಾಗಿ ನಿವೃತ್ತಿ ಹೊಂದಿದ ಮಡಿಯಪ್ಪ ಅವರು ದೇಶಭಕ್ತಿಗೀತೆ, ಕನ್ನಡ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ತಿರುಮಲರವರು, ತೋಪಯ್ಯ, ಪ್ರಕಾಶ್, ಕಾರ್ಯದರ್ಶಿ ಶಿವಾನಂದಾರಾಧ್ಯ ಹಾಜರಿದ್ದರು.