ಕುವೆಂಪು ಇಂದಿನ ಯುವಜನಕ್ಕೆ ಮಾದರಿ ವ್ಯಕ್ತಿತ್ವ ಹೊಂದಿದ್ದರು: ಡಾ.ಜನಾರ್ದನ ಭಟ್

| Published : Mar 23 2024, 01:25 AM IST

ಕುವೆಂಪು ಇಂದಿನ ಯುವಜನಕ್ಕೆ ಮಾದರಿ ವ್ಯಕ್ತಿತ್ವ ಹೊಂದಿದ್ದರು: ಡಾ.ಜನಾರ್ದನ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಸಹಯೋಗದಲ್ಲಿ ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಸಭಾಂಗಣದಲ್ಲಿ ‘ಹೊಸತಲೆಮಾರಿಗೆ ಕುವೆಂಪು ಸಾಹಿತ್ಯದರ್ಶನ’ ಎಂಬ ಕಾರ್ಯಕ್ರಮ ನಡೆಯಿತು. ಖ್ಯಾತ ಸಾಹಿತ್ಯ ವಿಮರ್ಶಕ ಡಾ. ಬಿ. ಜನಾರ್ದನ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಾಪು

ಕುವೆಂಪು ಜಗತ್ತಿನ ಖಚಿತ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವನೆಯೇ ಆಗಿದ್ದರು. ಪ್ರಕೃತಿ ಪ್ರಿಯರಾಗಿದ್ದ ಅವರು ಅದರ ಕಣಕಣವನ್ನು ಪ್ರೀತಿಸುತ್ತಿದ್ದರು. ಪ್ರಕೃತಿಯ ಪ್ರತಿ ಜೀವಿಯಲ್ಲೂ ಕೂಡ ದೈವತ್ವವನ್ನು ಕಂಡುಕೊಂಡವರು ಎಂದು ಖ್ಯಾತ ಸಾಹಿತ್ಯ ವಿಮರ್ಶಕ ಡಾ. ಬಿ. ಜನಾರ್ದನ ಭಟ್ ಹೇಳಿದರು.

ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಸಹಯೋಗದಲ್ಲಿ ಇಲ್ಲಿನ ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಸಭಾಂಗಣದಲ್ಲಿ ‘ಹೊಸತಲೆಮಾರಿಗೆ ಕುವೆಂಪು ಸಾಹಿತ್ಯದರ್ಶನ’ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ಸಮಾಜದಲ್ಲಿನ ಕಂದಾಚಾರ, ಅಜ್ಞಾನ ಹಾಗೂ ಶೋಷಣೆಯ ವಿರುಧ್ಧ ನಿರಂತರ ಬರವಣಿಗೆಯನ್ನು ಮಾಡಿದವರು ಕುವೆಂಪು. ರಾಜಕಾರಣವು ಬಲಾಢ್ಯರ ಕೈ ಸೇರುತ್ತಿದೆ, ಅದು ಜನಸಾಮಾನ್ಯರ ಏಳಿಗೆಗೆ, ವಿಕಾಸಕ್ಕೆ ಇರಬೇಕು ಎಂದವರು ಬಲವಾಗಿ ಪ್ರತಿಪಾದಿಸಿದ್ದರು. ಆಡಳಿತಗಾರರಾಗಿ, ಪ್ರಾಧ್ಯಾಪಕರಾಗಿ, ವಿದ್ವಾಂಸರಾಗಿ ತಮ್ಮ ಕ್ಷಮತೆಯನ್ನು ಮೆರೆದವರು, ಅವರು ಇಂದಿನ ಯುವ ಸಮುದಾಯಕ್ಕೆ ಅವರು ಮಾದರಿಯಾದ ವ್ಯಕ್ತಿತ್ವವನ್ನು ಹೊಂದಿದ್ದರು ಎಂದರು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಹಳೇಮನೆ, ಕುವೆಂಪು ಸಾಹಿತ್ಯದ ಶ್ರೀಮಂತಿಕೆ ಮತ್ತು ಅಗಾಧತೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ ವಹಿಸಿದ್ದರು. ಪ್ರತಿಷ್ಠಾನದ ಸ್ಥಳೀಯ ಸಂಯೋಜಕಿ, ಕನ್ನಡ ಉಪನ್ಯಾಸಕಿ ವರಮಹಾಲಕ್ಷ್ಮೀ ನಿರೂಪಿಸಿದ ಕಾರ್ಯಕ್ರಮದಲ್ಲಿ, ತೃತೀಯ ಬಿ.ಎ. ವಿದ್ಯಾರ್ಥಿನಿ ಅಪ್ಸಾನಾ ಬಿ.ಎನ್. ವಂದಿಸಿದರು.