ನರಸಿಂಹರಾಜಪುರರಾಷ್ಟ್ರ ಕವಿ ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಮಲೆನಾಡಿನ ಆಗಿನ ಕಾಲಘಟ್ಟದ ಗ್ರಾಮೀಣ ಭಾಗದ ಬದುಕಿನ ಚಿತ್ರಣವನ್ನು ತುಂಬಾ ಸುಂದರವಾಗಿ ಚಿತ್ರಿಸಿದ್ದಾರೆ. ಅವರು ಸಾಹಿತ್ಯ ಲೋಕದ ಮಾಣಿಕ್ಯ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ನಿರ್ದೇಶಕ ಜಿ.ಪುರುಷೋತ್ತಮ್ ವರ್ಣಿಸಿದರು.

- ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ವಿಶ್ವ ಮಾನವ ದಿನಾಚರಣೆ, ಹೊಸ ವರ್ಷ ಸಂಭ್ರಮಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ರಾಷ್ಟ್ರ ಕವಿ ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಮಲೆನಾಡಿನ ಆಗಿನ ಕಾಲಘಟ್ಟದ ಗ್ರಾಮೀಣ ಭಾಗದ ಬದುಕಿನ ಚಿತ್ರಣವನ್ನು ತುಂಬಾ ಸುಂದರವಾಗಿ ಚಿತ್ರಿಸಿದ್ದಾರೆ. ಅವರು ಸಾಹಿತ್ಯ ಲೋಕದ ಮಾಣಿಕ್ಯ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ನಿರ್ದೇಶಕ ಜಿ.ಪುರುಷೋತ್ತಮ್ ವರ್ಣಿಸಿದರು.

ಗುರುವಾರ ಪಟ್ಟಣದ ರೋಟರಿ ಕ್ಲಬ್ ಹಾಲ್‌ನಲ್ಲಿ ನಡೆದ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ವಿಶ್ವಮಾನವ ದಿನಾ ಚರಣೆ ಹಾಗೂ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕುವೆಂಪು ಅವರು ನಮ್ಮ ಪಕ್ಕದ ಕೊಪ್ಪ ತಾಲೂಕಿನವರಾಗಿರುವುದು ನಮ್ಮೆಲ್ಲರ ಹೆಮ್ಮೆ.ಅವರ ವೈಜ್ಞಾನಿಕ ಚಿಂತನೆಗಳು, ಸಾಹಿತ್ಯಗಳು ಯುವ ಪೀಳಗೆಗೆ ಅನುಕರಣೀಯ. ಅವರ ಹಲವು ಕಾದಂಬರಿಗಳಲ್ಲಿ ಮಲೆನಾಡಿನ ಸೊಬಗನ್ನು ಸುಂದರವಾಗಿ ಬರೆದಿದ್ದಾರೆ. ಅವರು ಈ ದೇಶ ಕಂಡ ಅಪ್ರತಿಮ ಕವಿಯಾಗಿದ್ದಾರೆ ಎಂದರು. ಜೇಸಿ ಸಂಸ್ಥೆ ನಿರ್ದೇಶಕ ಪ್ರೀತಮ್ ಮಾತನಾಡಿ, ಕುವೆಂಪುರವರು ಬರೆದ ಕಥೆ, ಕಾದಂಬರಿಗಳನ್ನು ಯುವ ಜನರು ಓದ ಬೇಕು. ಅವರ ಪ್ರತಿಯೊಂದು ಕೃತಿಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ. ಕಾದಂಬರಿಗಳಲ್ಲಿ ಬರುವ ಪಾತ್ರ ಗಳು ಪ್ರತಿ ಕಾಲ ಘಟ್ಟಕ್ಕೂ ಅನ್ವಯಿಸುತ್ತದೆ. ಅವರ ಬರಹಗಳನ್ನು ಓದಿ ಆನಂದಿಸುವುದೇ ನಮ್ಮಲ್ಲರ ಭಾಗ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ.ಬಿ.ಗೌಡ ವಹಿಸಿದ್ದರು. ಇದೇ ಸಂದರ್ಭ ದಲ್ಲಿ ಹೊಸ ವರ್ಷಾಚರಣೆ ಅಂಗವಾಗಿ ಕೇಕ್ ಕತ್ತರಿಸಲಾಯಿತು. ಈ ಸಂದರ್ಭದಲ್ಲಿ ಜೇಸಿ ಪೂರ್ವ ವಲಯ ಉಪಾಧ್ಯಕ್ಷ ಚರಣ್‌ರಾಜ್, ಜೇಸಿ ಉಪಾಧ್ಯಕ್ಷರಾದ ಪ್ರಮಾಂಕ್, ದೇವಂತ್‌ ರಾಜ್‌ಗೌಡ, ಸತ್ಯಪ್ರಸಾದ್, ಕಾರ್ಯದರ್ಶಿ ರಜಿತ್‌ ವಗ್ಗಡೆ, ಖಜಾಂಚಿ ಜೀವನ್, ನಿರ್ದೇಶಕರಾದ ಜೋಯಿ ಬ್ರೋ, ಪ್ರೀತಮ್, ನವೀನ್, ಮಿಥುನಗೌಡ, ನೂತನ ಸದಸ್ಯರಾದ ಮನು, ಸುಹಾಸ್, ಪ್ರಥಮ್, ಶ್ರೀಹರಿ, ಮಂಜುನಾಥ್ ಇದ್ದರು.