ಸಾರಾಂಶ
ಹೆಬ್ಬಾಳದಲ್ಲಿರುವ ಶ್ರೀ ಆದಿ ಚುಂಚನಗಿರಿ ಶಾಖಾ ಮಠದಲ್ಲಿ ಶುಕ್ರವಾರ ಯುಗದ ಕವಿ ಶ್ರೀ ಕುವೆಂಪುರವರ 118ನೇ ಜಯಂತಿ ಆಚರಿಸಿ,
ಕನ್ನಡಪ್ರಭ ವಾರ್ತೆ ಮೈಸೂರು
ಕುವೆಂಪು ಅವರ ಬರಹಗಳು ಅಂತಾರಾಷ್ಟ್ರೀಯ ಗುಣಮಟ್ಟದ ಸತ್ವದ ಬರಹಗಳಾಗಿವೆ ಎಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.ನಗರದ ಹೆಬ್ಬಾಳದಲ್ಲಿರುವ ಶ್ರೀ ಆದಿ ಚುಂಚನಗಿರಿ ಶಾಖಾ ಮಠದಲ್ಲಿ ಶುಕ್ರವಾರ ಯುಗದ ಕವಿ ಶ್ರೀ ಕುವೆಂಪುರವರ 118ನೇ ಜಯಂತಿ ಆಚರಿಸಿ, ಮಾತೃ ಡೆಂಟಲ್ ಕ್ಲಿನಿಕ್ ನ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಹಿರಿಯ ಸಾಹಿತಿ ಡಾ. ಸಿಪಿಕೆ ಅವರು ಮಾತನಾಡಿ, ಕುವೆಂಪು ಅವರ ಬರಹಗಳು ಅಂತಾರಾಷ್ಟ್ರೀಯ ಗುಣಮಟ್ಟದ ಸತ್ವದ ಬರಹಗಳಾಗಿವೆ, ಹಾಗೆ ನೋಡಿದರೆ ಕುವೆಂಪುರವರ ಸಾಹಿತ್ಯದ ಭಾಷಾಂತರ ಸರಿಯಾಗಿ ನಡೆದಿದ್ದರೆ ಸಾಹಿತ್ಯದ ಮೇರು ಕೃತಿಗಳಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದವು ಎಂದರು, ರೈತಾಪಿ ವರ್ಗದ ಕುವೆಂಪು ಅವರು ತಮ್ಮ ಲೇಖನಿಯನ್ನು ನೇಗಿಲಾಗಿಸಿಕೊಂಡು ಸಾಹಿತ್ಯದ ಕೃಷಿಗೈದ ನೇಗಿಲಯೋಗಿ ಎಂದರು.ದಂತ ವೈದ್ಯ ಲೋಕೇಶ್, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಎ. ರವಿ, ಚೇತನ್, ಸುಶೀಲಾ ನಂಜಪ್ಪ, ಗುರುರಾಜ್, ನಮ್ಮೂರು ನಮ್ಮೋರು ಸೇವಾ ಟ್ರಸ್ಟಿನ ಅಧ್ಯಕ್ಷ ಸತೀಶ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ. ಶ್ರೀಧರ್, ಗಂಗಾಧರ್, ಮಂಜೇಗೌಡ, ನಗರಪಾಲಿಕೆ ಮಾಜಿ ಸದಸ್ಯರಾದ ಪ್ರೇಮ ಶಂಕರೇಗೌಡ, ಭರತಶ್ ಇದ್ದರು.