ಸಾರಾಂಶ
ಸೆ.29 ಮತ್ತು 30ರಂದು ನಿವೃತ್ತ ಸೈನಿಕರಿಗೆ ವೈಜ್ಞಾನಿಕ ಕೃಷಿ ತರಬೇತಿಯನ್ನು ಕೆವಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಇದು ಎರಡು ದಿನ ಕಾರ್ಯಕ್ರಮವಾಗಿದೆ
ತಿಪಟೂರು: ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಡಿ ಕೃಷಿ ವಿಜ್ಞಾನಿಗಳ ನಡೆ ರೈತರ ಕಡೆ, ತೋಟಗಾರಿಕಾ ಸಸ್ಯ ಸಂತೆ ಹಾಗೂ ನಿವೃತ್ತ ಸೈನಿಕರಿಗೆ ವೈಜ್ಞಾನಿಕ ಕೃಷಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೆವಿಕೆ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಎಂ.ಎಚ್. ಶಂಕರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.29 ಮತ್ತು 30ರಂದು ನಿವೃತ್ತ ಸೈನಿಕರಿಗೆ ವೈಜ್ಞಾನಿಕ ಕೃಷಿ ತರಬೇತಿಯನ್ನು ಕೆವಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಇದು ಎರಡು ದಿನ ಕಾರ್ಯಕ್ರಮವಾಗಿದೆ. ಅ. 3ರಿಂದ 18ರವರೆಗೆ ಕೃಷಿ ವಿಜ್ಞಾನಿಗಳ ನಡೆ ರೈತ ಕಡೆ ಕಾರ್ಯಕ್ರಮವನ್ನು ಕೆವಿಕೆಯಲ್ಲಿ ಆಯೋಜಿಸಲಾಗುತ್ತಿದೆ. ಅ.28 ಮತ್ತು 29ರಂದು ಕೆವಿಕೆಯಲ್ಲಿ ಎರಡು ದಿನಗಳ ವೈವಿದ್ಯಮಯ ತೋಟಗಾರಿಕಾ ಸಸ್ಯ ಸಂತೆ ಎಂಬ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶಾಸಕ ಕೆ. ಷಡಕ್ಷರಿ, ಕೃಷಿ ವಿವಿಯ ಕುಲಪತಿ ಡಾ. ಎಸ್.ವಿ. ಸುರೇಶ್ ಉದ್ಘಾಟಿಸಲಿದ್ದಾರೆ. ಸಸ್ಯ ಸಂತೆಯಲ್ಲಿ ಹಣ್ಣು, ತರಕಾರಿ, ಸುಗಂದ ದ್ರವ್ಯ, ಕೈ ತೋಟದ ಬೀಜಗಳು, ಎರೆಹುಳು ಗೊಬ್ಬರನೊಳಗೊಂಡ ವೈವಿಧ್ಯಮಯ 30ಕ್ಕೂ ಹೆಚ್ಚು ನರ್ಸರಿ ಸೇರಿದಂತೆ ವಿವಿಧ ಮಳಿಗೆಗಳ ಪ್ರದರ್ಶನ ಮತ್ತು ಮಾರಾಟದ ಸೌಲಭ್ಯವನ್ನು ಕಲ್ಪಿಸಲಾಗಿದ್ದು ತಾಲೂಕಿನ ರೈತರು, ನಗರವಾಸಿಗಳು, ಯುವವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದರು. ಸುದ್ದಿಗೋಷ್ಠಿಯಲ್ಲಿ ಕೆವಿಕೆಯ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ತಸ್ಮಯಾಕೌಸರ್, ತೋಟಗಾರಿಕೆ ವಿಜ್ಞಾನಿ ಡಾ. ಕೀರ್ತಿಶಂಕರ್, ಕೃಷಿ ವಿಸ್ತರಣಾ ವಿಜ್ಞಾನಿ ಡಾ. ದರ್ಶನ್ ಇದ್ದರು.