9ಕ್ಕೆ ಕೆಯುಡಬ್ಲ್ಯುಜೆ ಸರ್ವ ಸದಸ್ಯರ ಸಭೆ

| Published : Mar 05 2025, 12:35 AM IST

ಸಾರಾಂಶ

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಾ.9ರಂದು ಕೊಪ್ಪಳದಲ್ಲಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ದತ್ತಿ ಪ್ರಶಸ್ತಿ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಶಿವಕುಮಾರ್ ತಿಳಿಸಿದರು.

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಾ.9ರಂದು ಕೊಪ್ಪಳದಲ್ಲಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ದತ್ತಿ ಪ್ರಶಸ್ತಿ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಶಿವಕುಮಾರ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಲ್ಲಿ ಮಾತನಾಡಿ, ಸಂಘವು ವೃತ್ತಿಪರತೆ ಹಾಗೂ ಬದ್ಧತೆಯನ್ನು ಮೆರೆದ ನಾಡಿನ ಪತ್ರಕರ್ತರಿಗೆ ದತ್ತಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಬಾರಿ ಮಿಂಚು ಶ್ರೀನಿವಾಸ್ ಪ್ರಶಸ್ತಿಯು ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಚಂದ್ರಶೇಖರ ಶೃಂಗೇರಿ ಅವರಿಗೆ, ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ ಹಿರಿಯ ಪತ್ರಕರ್ತ ಗಿರೀಶ್ ಉಮ್ರಾಯ್ ಅವರಿಗೆ, ಗಿರಿಜಮ್ಮ- ರುದ್ರಮ್ಮ ತಾಳಿಕೋಟಿ ಪ್ರಶಸ್ತಿಗೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರರಾದ ಕವಿತಾ ಅವರು ಭಾಜನರಾಗಿದ್ದಾರೆ. ಈ ಮೂವರಿಗೂ ಕೊಪ್ಪಳದಲ್ಲಿ ನಡೆಯುವ ಸರ್ವ ಸದಸ್ಯರ ಸಭೆಯ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದರು.ಮುಂದಿನ ದಿನಗಳಲ್ಲಿ ಈಗಾಗಲೇ ಇವರ ಜೊತೆಗೆ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವ ರವಿ ಬಿದನೂರು, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಆರುಂಡಿ ಶ್ರೀನಿವಾಸಮೂರ್ತಿ, ವಾರ್ತಾ ಇಲಾಖೆಯಿಂದ ನೀಡುವ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಜಿ.ಟಿ.ಸತೀಶ್ ಅವರನ್ನು ಜಿಲ್ಲಾ ಶಾಖೆ ಅಭಿನಂದಿಸುತ್ತದೆ ಎಂದರು.ಸಂಘದ ರಾಜ್ಯ ನಿರ್ದೇಶಕ ಟೆಲೆಕ್ಸ್ ರವಿಕುಮಾರ್ ಮಾತನಾಡಿ, ಪತ್ರಕರ್ತರ ಸಂಘವು ಸದಸ್ಯರ ಹಿತ ಕಾಪಾಡುವ ನಿಟ್ಟಿನತ್ತ ಕೆಲಸ ಮಾಡುತ್ತಿದೆ. ಈಗಾಗಲೇ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಸರ್ಕಾರ ಅನುಮತಿ ನೀಡಿದೆ. ಹಾಗೇಯೇ ಪತ್ರಕರ್ತರ ಆರೋಗ್ಯಕ್ಕಾಗಿ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ಸೌಲಭ್ಯ ನೀಡುವಲ್ಲಿ ಸಂಘ ಪ್ರಯತ್ನ ಪಡುತ್ತದೆ ಎಂದರು.ಸದಸ್ಯತ್ವ ನೋಂದಣಿ:ಪತ್ರಕರ್ತರ ಸಂಘವು ಸಂಘದ ಸದಸ್ಯತ್ವ ಹಾಗೂ ನವೀಕರಣಕ್ಕೆ ಚಾಲನೆ ನೀಡಲಾಗಿದ್ದು, ನಿಯಮಗಳಿಗೆ ಒಳಪಟ್ಟು ಸದಸ್ಯತ್ವ ನೀಡಲಾಗುವುದು. ಸದಸ್ಯತ್ವ ಪಡೆಯಲು ಮಾ.7 ಕೊನೆಯ ದಿನವಾಗಿದೆ. ಸಂಘದ ಕಚೇರಿಯಲ್ಲಿ ಅರ್ಜಿ ಪಡೆದು ಸೂಕ್ತ ದಾಖಲೆಯೊಂದಿಗೆ ಪತ್ರಕರ್ತರು ಅರ್ಜಿ ಸಲ್ಲಿಸಬಹುದು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ವಿ.ಟಿ.ಅರುಣ್, ಹಾಲಸ್ವಾಮಿ, ರಂಜಿತ್, ಹುಚ್ರಾಯಪ್ಪ, ಕೆ.ಆರ್. ಸೋಮನಾಥ್, ನಾಗೇಶ್ ನಾಯ್ಕ್, ಗಾರಾ ಶ್ರೀನಿವಾಸ್ ಇದ್ದರು.