ಕೈಲ್ ಮುಹೂರ್ತ ಹಬ್ಬದ ಆಚರಣೆಗೆ ಒಂದು ವಿಶಿಷ್ಟತೆ ಇದೆ. ಜಿಲ್ಲೆಯಲ್ಲಿ ಇದು ಎಲ್ಲರೂ ಸಾಮೂಹಿಕವಾಗಿ ಆಚರಿಸುವ ಹಬ್ಬ. ಜಿಲ್ಲೆಯ ಜನರ ಸಾಮರಸ್ಯಕ್ಕೆ ಮುನ್ನಡಿ ಇಡುವ ಹಬ್ಬ ಎಂದು ಉದ್ಯಮಿ ಸಮಾಜ ಸೇವಕ ಎಡಿಕೇರಿ ಪ್ರಸನ್ನ ಹೇಳಿದ್ದಾರೆ.
ನಾಪೋಕ್ಲು : ಕೈಲ್ ಮುಹೂರ್ತ ಹಬ್ಬದ ಆಚರಣೆಗೆ ಒಂದು ವಿಶಿಷ್ಟತೆ ಇದೆ. ಜಿಲ್ಲೆಯಲ್ಲಿ ಇದು ಎಲ್ಲರೂ ಸಾಮೂಹಿಕವಾಗಿ ಆಚರಿಸುವ ಹಬ್ಬ. ಜಿಲ್ಲೆಯ ಜನರ ಸಾಮರಸ್ಯಕ್ಕೆ ಮುನ್ನಡಿ ಇಡುವ ಹಬ್ಬ ಎಂದು ಉದ್ಯಮಿ ಸಮಾಜ ಸೇವಕ ಎಡಿಕೇರಿ ಪ್ರಸನ್ನ ಹೇಳಿದ್ದಾರೆ.ಬೆಟ್ಟಗೇರಿಯ ಬಕ್ಕ ಕ್ರೀಡಾ ಸಂಘ,ಶ್ರೀಕೃಷ್ಣ ಸಂಕ್ರಾಂತಿ ಸ್ವಾಗತ ಸಾಗರ್ ಸ್ವಸಹಾಯ ಸಂಘ , ಅಂಬಿಕಾ ಸ್ತ್ರೀ ಶಕ್ತಿ ಸಂಘ, ಗಜಾನನ ಭಕ್ತ ಮಂಡಳಿ ಸಹಯೋಗದಲ್ಲಿ ಬಕ್ಕ ಅಂಗನವಾಡಿ ಕೇಂದ್ರದ ಸಮೀಪದಲ್ಲಿ ಆಯೋಜಿಸಲಾಗಿದ್ದ 20ನೇ ವರ್ಷದ ಕೈಲ್ ಮುಹೂರ್ತ ಆಟೋಗಳ ಸ್ಪರ್ಧೆ 2026 ಇದರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಳೆಗಾಲದಲ್ಲಿ ಗ್ರಾಮೀಣ ರೈತಾಪಿ ಜನರು ವಿಶೇಷ ಶ್ರಮವಹಿಸಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಅವರ ದಣಿವಿನ ಆಯಾಸ ನೀಗಿಸಿಕೊಳ್ಳಲು ಕೈಲ್ ಮುಹೂರ್ ಹಬ್ಬದ ಸಂದರ್ಭದಲ್ಲಿ ವಿವಿಧ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಿ ಮನರಂಜನೆ ಹೊಂದುತ್ತಾರೆ ಎಂದರು.ಇದು ರೈತರು ತಮ್ಮ ಕಷ್ಟಗಳನ್ನೆಲ್ಲ ಮರೆತು ಒಗ್ಗೂಡಿ ಆಚರಿಸುವ ಹಬ್ಬ. ಅದೇ ರೀತಿ ಕಾವೇರಿ ಸಂಕ್ರಮಣ , ಹುತ್ತರಿ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಲಾಗುತ್ತಿದೆ. ಊರ ಜನರು ಕೂಡಿ ಸಾಮರಸ್ಯಕ್ಕೆ ನಾಂದಿ ಹಾಡುವ ಇಂತಹ ಸಾಂಪ್ರದಾಯಿಕ ಆಚರಣೆಗಳನ್ನು ಮುಂದುವರಿಸಿಕೊಂಡು ಬರಬೇಕು ಎಂದರು. ಸಮಾರೋಪ ಸಮಾರಂಭವನ್ನು ಕಾಫಿ ಬೆಳೆಗಾರ ಕಬ್ಬಚ್ಚಿರ ಸವರಿನ್ ಉತ್ತಯ್ಯ ಉದ್ಘಾಟಿಸಿದರು. ಬಕ್ಕ ಕ್ರೀಡಾ ಸಂಘದ ಅಧ್ಯಕ್ಷ ಬೈತಡ್ಕ ಡೆಲಿವಿ ದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಬೆಂಗಳೂರಿನ ಉದ್ಯಮಿ ಹರೀಶ್ ಗೌಡ ಕಂಬಳ, ನಿವೃತ್ತ ಶಿರಸ್ತೆದಾರರದ ಕಡ್ಲೆರ ಧನವತಿ ಚಂದ್ರಶೇಖರ , ಬಾಡನ ಸತೀಶ್, ಮಾಧ್ಯಮ ವರದಿಗಾರ ದುಗ್ಗಳ ಸದಾನಂದ , ನಿವೃತ್ತ ಆಧ್ಯಾಪಕಿ ಬೈಚನ ತಂಗಮ್ಮ ಸೋಮಣ್ಣ , ನಿವೃತ್ತ ಸರಕಾರಿ ಉದ್ಯೋಗಿ ಪುದಿಯ ನೆರವನ ಜಯಲಕ್ಷ್ಮಿ ಚಂದ್ರಶೇಖರ , ಪ್ರಗತಿಪರ ರೈತ ಎಡಿಕೇರಿ ಪ್ರವೀಣ್ , ಹಿರಿಯ ಕ್ರೀಡಾಪಟು ಪ್ರಕಾಶ್ ರೈ ಶುಭ ಹಾರೈಸಿದರು.. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು, ಹಾಗೂ. 2025 26 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಳಾದ ಕುಂಜಿಲನ ಮೇಘ ಜನಾರ್ಧನ, ಬಾಡನ ಸಿಂಚನ ಹರೀಶ್, ವಿ. ಜಿ ವೃಷ್ಟಿ ಜಸ್ಮಿತಾ ಬಿ ಕೆ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಊರೊಳನ ಕವಿತಾ ಪ್ರಾರ್ಥಿಸಿ ನಯ್ಯಣಿ ಹೇಮಕುಮಾರ್ ಸ್ವಾಗತಿಸಿದರು. ಕಡ್ಲೇರ ತುಳಸಿ ಮೋಹನ್ ನಿರೂಪಿಸಿದರು.ಕ್ರೀಡಾ ಕೂಟ ಉದ್ಘಾಟನೆಬೆಳಿಗ್ಗೆ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಗ್ರಾಮೀಣ ಆಟೋಟ ಸ್ಪರ್ಧೆಯ ಕಾರ್ಯಕ್ರಮವನ್ನು ಬೆಟ್ಟಗೇರಿ ಭಗವತಿ ದೇವಸ್ಥಾನ ಸಮಿತಿ ಅಧ್ಯಕ್ಷ ಪೌಡoಡ ಡಾಲಿ ಭೀಮಯ್ಯ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಕ್ರೀಡಾಕೂಟವನ್ನು ಕಾಫಿ ಬೆಳೆಗಾರರಾದ ಸೂದನ ಸುಜಿ ತೆಂಗಿನಕಾಯಿಗೆ ಗುಂಡು ಹೊಡೆಯುವಮೂಲಕ ಚಾಲನೆ ನೀಡಿದ. ಬಕ್ಕ ಕ್ರೀಡಾ ಸಂಘದ ಅಧ್ಯಕ್ಷ ಬೈತಡ್ಕ ಡೆಲಿವಿ ದೇವಯ್ಯ ಅಧ್ಯಕ್ಷತೆ ವಹಿಸಿದ್ದರು.ಕಾಫಿ ಬೆಳಗಾರ ಕುಂಜಿಲನ ಲೋಕನಾಥ್, ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ನಿರ್ದೇಶಕಿ ನೈಯಣಿ ಶಾಂತಿ ಅರ್ಜುನ, ಮಾಜಿ ಸೈನಿಕ ಹೊಸೋಕ್ಲು ಮೊ ಣ್ಣಪ್ಪ, ಮಹಾಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ವಿಟಿ ಗಿರೀಶ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ವಿವಿಧ ವಯೋಮಾನದವರಿಗೆ ಆಟೋಟ ಸ್ಪರ್ಧೆಗಳು ನಡೆದವು.